ಉಪಾಧ್ಯಕ್ಷರಾಗಿ ಆಯ್ಕೆ


ಲೋಕದರ್ಶನ ವರದಿ

ಸಿಂದಗಿ 04:  ರಾಜ್ಯ ಕೋಲಿ ಕಬ್ಬಲಿಗ, ಅಂಬಿಗರ ಸಮಾಜದ ಬಾಂಧವರ ಒಮ್ಮತದ ಮೇರೆಗೆ ಅಖಿಲ ಕನರ್ಾಟಕ ಅಂಬಿಗರ ಚೌಡಯ್ಯ ಮಹಾಸಭಾದ ನೌಕರರ ವಿಭಾಗದ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಸಿಂದಗಿಯ ಸಾರ್ವಜನಿಕರ ಆಸ್ಪತ್ರೆಯಲ್ಲಿ ಪ್ರಯೋಗಶಾಲಾ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ರಾಜಕುಮಾರ ನರಗೋದಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಅಂಬಿಕಾ ಜಾಲಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಈ ಸಮಾಜದ ಬಹುದಿನಗಳ ಬೇಡಿಕೆಯಾದ ರಾಜ್ಯದ ವಿವಿಧ ಭೌಗೋಳಿಕ ಪರಂಪರೆ ಹಾಗೂ ವೈವಿಧ್ಯತೆಗೆ ಕಾರಣ ಅಂಬಿಗ, ಟೋಕರಿ ಕೋಳಿ, ಕೋಳಿ, ಕೋಲಿ, ತಳವಾರ, ಮೊಗವೀರ, ಬೆಸ್ತ, ಗಂಗಾಮತ ಮೊದಲಾದ 39 ಪಯರ್ಾಯ ಒಳಪಂಗಡಗಳನ್ನು ಹೊಂದಿರುವ ಅಂಬಿಗ ಸಮುದಾಯದ ಹಿತ ರಕ್ಷಣೆ ಹಾಗೂ ಜನಾಂಗದ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಕ್ರೀಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಚಿಸಿದ್ದಾರೆ.

ಇವರ ನೇಮಕ ಮಾಡಿದ ರಾಜ್ಯಾಧ್ಯಕ್ಷರಿಗೆ ಸಿಂದಗಿ ತಾಲೂಕಾ ಗೌರವಾಧ್ಯಕ್ಷ ಮಾಂತೇಶ ಯರನಾಳ, ಉಪಾದ್ಯಕ್ಷರಾಗಿ ಎಂ.ಎನ್.ದೇವಣಗಾಂವ, ಎಂ.ಜಿ.ತಳವಾರ, ಕಾರ್ಯದಶರ್ಿ ಭರತೇಶ ಹಿರೋಳ್ಳಿ, ನಿಂಗಣ್ಣ ನಾಟೀಕಾರ, ಸಹಕಾರ್ಯದಶರ್ಿ ಚಂದ್ರಕಾಂತ ದೇವರಮನಿ, ವೈ.ಎಸ್.ಬೂದಿಹಾಳ, ಸ.ಕಾರ್ಯದಶರ್ಿ ಎಚ್.ಎಸ್.ನಾಗಣಸೂರ, ಗಂಗಾಧರ ಸೋಮನಾಯಕ, ಖಜಾಂಚಿ ಬಿ.ಎಸ್.ಬೂದಿಹಾಳ, ಎಂ.ಎಸ್ ಕಡ್ಲೇವಾಡ, ಎಸ್.ಬಿ.ಮೆಟಗಾರ, ಈರಣ್ಣ ಪಾಟೀಲ, ಸಿದ್ದು ಅಂಕಲಗಿ, ದಯಾನಂದ ಹಂಚಿನಾಳ, ಸಂತೋಷ ಹೂವಿನಳ್ಳಿ, ಲಕ್ಷ್ಮಣ ಸೊನ್ನದ, ಎ.ಐ.ಜಂಬೆನಾಳ, ಆರ್.ಆರ್.ನಿಂಬಾಳಕರ, ಎಸ್.ಎಂ.ಬಿರಾದಾರ, ಎಸ್.ಎಂ.ಚಿಗರಿ, ರಾಯಣ್ಣ ಸೊನ್ನಳ್ಳಿ, ಪ್ರಕಾಶ ಹೊಸಕೇರಿ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.