ಲೋಕದರ್ಶನ ವರದಿ
ಮುದ್ದೇಬಿಹಾಳ 28: ಬಸ್ಪಾಸ್ ಇದ್ದರೂ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಲು ತಮಗೆ ಅವಕಾಶ ಕೊಡದೆ ಇರುವ ಬಸ್ ಚಾಲಕರು, ನಿರ್ವಾಹಕರ ನಡವಳಿಗೆ ಖಂಡಿಸಿ ಹಳ್ಳೂರು ಭಾಗದ ವಿದ್ಯಾರ್ಥಿಗಳು ಶನಿವಾರ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ಮುದ್ದೇಬಿಹಾಳ-ವಿಜಯಪುರ-ಮುದ್ದೇಬಿಹಾಳ ಬಸ್ ತಡೆದು ದಿಢಿರ್ ಪ್ರತಿಭಟನೆ ನಡೆಸಿದರು.
ನಿತ್ಯ 60-70 ವಿದ್ಯಾಥರ್ಿಗಳು ಹಳ್ಳೂರು ಭಾಗದಿಂದ ಸಮೀಪದ ಢವಳಗಿಗೆ ಶಾಲಾ ಕಾಲೇಜುಗಳಿಗೆ ಬರುತ್ತೇವೆ. ಹೊರತುಪಡಿಸಿ ಉಳಿದ ದಿನ ಬೆಳಿಗ್ಗೆ ಶಾಲೆ ಪ್ರಾರಂಭಗೊಂಡು ಸಂಜೆ ಶಾಲೆ ಬಿಡುವುದರಿಂದ ಆಯಾ ಸಮಯಕ್ಕೆ ಬಸ್ಸುಗಳ ಸೌಲಭ್ಯ ಇದೆ. ಅರ್ದ ದಿನ ಶಾಲೆ ನಡೆದು ಮದ್ಯಾಹ್ನವೇ ಶಾಲೆ ಬಿಡುತ್ತದೆ. ಹೀಗಾಗಿ ನಾವು ನಮ್ಮೂರಿಗೆ ಹೋಗಲು ವಿಜಯಪುರದತ್ತ ಸಂಚರಿಸುವ ಬಸ್ ಏರಿ ಹಳ್ಳೂರ ಕ್ರಾಸ್ನಲ್ಲಿ ಇಳಿದು ಅಲ್ಲಿಂದ ಒಂದು ಕಿಮಿ ಅಂತರದಲ್ಲಿರುವ ಊರಿಗೆ ನಡೆದುಕೊಂಡು ಹೋಗಬೇಕು. ಢವಳಗಿಯಲ್ಲಿ ಬಸ್ ನಿಲ್ಲಿಸಿದಾಗ ಏರಲು ಬಂದರೆ ಚಾಲಕರು ಬಸ್ಸುಗಳಿಗೆ ಅಂತಾರಾಜ್ಯ ಬೋರ್ಡ ಹಾಕಿಕೊಂಡು ಬಂದು ಬಸ್ ಪಾಸ್ ಇರುವ ನಮಗೆ ಈ ಬಸ್ಸುಗಳಲ್ಲಿ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ಹತ್ತಿಸಿಕೊಳ್ಳುವುದಿಲ್ಲ ಎನ್ನುವುದು ವಿದ್ಯಾರ್ಥಿಗಳ ಆರೋಪವಾಗಿತ್ತು.
ಪ್ರತಿಭಟನೆ ಮಾಹಿತಿ ಪಡೆದ ಮುದ್ದೇಬಿಹಾಳ ಪೊಲೀಸ್ ಠಾಣೆ ಪಿಎಸೈ ಮಲ್ಲಪ್ಪ ಮಡ್ಡಿ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳ ಮನವೊಲಿಸಲು ಮುಂದಾದರು. ಈ ವೇಳೆ ವಿದ್ಯಾಥರ್ಿಗಳ ಪರ ಮಾತನಾಡಿದ ಕೆಲವರು ಪ್ರತಿ ಇಂಥದ್ದೇ ಸಮಸ್ಯೆ ಎದುರಾಗುತ್ತದೆ. ಬಸ್ ಚಾಲಕರು ಅಂತಾರಾಜ್ಯ ಬೋರ್ಡ ಹಾಕಿಕೊಂಡು ಬರುತ್ತಾರೆ. ಇಂಥ ಬಸ್ಸುಗಳಲ್ಲಿ ವಿದ್ಯಾಥರ್ಿಗಳ ಪಾಸ್ ನಡೆಯುವುದಿಲ್ಲ ಎಂದು ಅವರನ್ನು ಹತ್ತಿಸಿಕೊಳ್ಳುವುದಿಲ್ಲ. ಕೆಲ ವೇಳೆ ಹತ್ತಿಸಿಕೊಂಡರೂ ವಿದ್ಯಾಥರ್ಿಗಳು ಇನ್ನೂ ಫುಟ್ಬೋರ್ಡ ಏರುವಾಗಲೇ ಬಸ್ ಓಡಿಸುತ್ತಾರೆ. ಇಂಥ ವೇಳೆ ಒಂದಿಬ್ಬರು ವಿದ್ಯಾಥರ್ಿಗಳು ಕೆಳಗೆ ಬಿದ್ದು ಸಮಸ್ಯೆ ಆಗಿದೆ ಎಂದು ಸಮಸ್ಯೆ ಹೇಳಿಕೊಂಡರು.
ಆ ಕೂಡಲೇ ಪಿಎಸೈ ಮಡ್ಡಿ ಮುದ್ದೇಬಿಹಾಳ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಫೋನ್ ಮೂಲಕ ಮಾತನಾಡಿ ವಿಷಯ ತಿಳಿಸಿ ಇನ್ನು ಮುಂದೆ ಪ್ರತಿ ಶನಿವಾರ ಮದ್ಯಾಹ್ನ ವಿದ್ಯಾಥರ್ಿಗಳನ್ನು ಹತ್ತಿಸಿಕೊಂಡು ಹಳ್ಳೂರ ಕ್ರಾಸ್ಗೆ ಬಿಡಲು ಆಯಾ ಬಸ್ ಚಾಲಕರು, ನಿವರ್ಾಹಕರಿಗೆ ನಿರ್ದೇಶನ ನೀಡಿ ಸಹಕರಿಸಬೇಕು ಎಂದು ಕೋರಿದರು. ಈ ವೇಳೆ ಬಸ್ ಚಾಲಕ, ನಿವರ್ಾಹಕರಿಗೂ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡದಂತೆ ಕಿವಿಮಾತು ಹೇಳಿದರು. ಅತ್ತ ಕಡೆಯಿಂದ ಬೇಡಿಕೆಗೆ ಸ್ಪಂಧನೆ ದೊರೆತದ್ದನ್ನು ವಿದ್ಯಾಥರ್ಿಗಳಿಗೆ ತಿಳಿಸಿ ಪ್ರತಿಭಟನೆ ಮುಕ್ತಾಯಗೊಳ್ಳುವಂತೆ ನೋಡಿಕೊಂಡರು.