ಮೂಡಲಗಿ 14: ಸ್ಥಳೀಯ ಆರಾಧ್ಯ ದೈವ ಪವಾಡ ಪುರುಷ ಶಿವಬೋಧ ಸ್ವಾಮಿಗಳ ಪುಣ್ಯತಿಥಿ ಹಾಗೂ 4 ದಿನ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗಳ ಪಲ್ಲಕಿ ಉತ್ಸವವು ಜನಸಾಗರದ ನಡುವೆ ಮಂಗಳವಾರ ಅದ್ದೂರಿಯಿಂದ ಜರುಗಿತು.
ಜಾತ್ರೆಯ ಅಂಗವಾಗಿ ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆಯವರೆಗೆ ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ ಜಾತಿ ಮತ ಭೇದವಿಲ್ಲದೇ ಅಪಾರ ಭಕ್ತ ಸಮೂಹ ದೀರ್ಘದಂಡ ಸೇವೆ ಸಲ್ಲಿಸಿದರು.
ಬೆಳಗಿನ ಜಾವ ಶ್ರೀಪಾದಬೋದ ಸ್ವಾಮಿಗಳ ಸಾನಿಧ್ಯದಲ್ಲಿ ಗದ್ದುಗೆಗೆ ವಿಶೇಷ ಪೂಜೆ ನೇರವೇರಿತು.ಮಧ್ಯಾಹ್ನ ಸಕಲ ವಾದ್ಯ ಮೇಳದೊಂದಿಗೆ ಸಾವಿರಾರು ಭಕ್ತ ಸಮೂಹದ ನಡುವೆ ಶ್ರೀ ಶಿವಬೋಧರಂಗ ಮಹಾರಾಜ ಕೀ ಜೈ ಎಂಬ ಹರ್ಷದ್ಘೋರದಲ್ಲಿ ಮೇಲಿನ ಮಠದಿಂದ ಕೆಳಗಿನ ಮಠಕ್ಕೆ ಸಾಗಿದ ಪಲ್ಲಕಿ ಉತ್ಸವದಲ್ಲಿ ಭಕ್ತರು ಬೆಂಡು ಬೆತ್ತಾಸು, ಖಾರಿಕು, ಬಾಳೆಹಣ್ಣು ಸಮಪರ್ಿಸಿ ಶ್ರೀಗಳ ಆಶೀವರ್ಾದ ಪಡೆದು ಪುನೀತರಾದರು.
ಶ್ರೀಗಳ ಪಲ್ಲಕಿ ಉತ್ಸವದ ಮೆರವಣಿಗೆಯಲ್ಲಿ ಸ್ಥಳೀಯ ಝಂಜ್ ಪಥಕ ಹಾಗೂ ಕರಡಿ ಮಜಲ್ ಸಂಗೀತ ನೆರೆದ ಭಕ್ತರನ್ನು ಭಕ್ತಿಭಾವದಲ್ಲಿ ತೇಲುವಂತೆ ಮಾಡಿತು. ಯುವಕರು ಸುಡು ಬಿಸಿಲನ್ನು ಲೆಕ್ಕಿಸದೇ ಕುಣಿದು ಕುಪ್ಪಳಿಸಿದರು.
ತಂಪು ಪಾನೀಯ ವಿತರಣೆ: ಜಾತ್ರೆಯ ನಿಮಿತ್ಯವಾಗಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳಿಂದ ಭಕ್ತಾಧಿಗಳಿಗೆ ತಂಪು ಪಾನೀಯ ವಿತರಿಸಿ ಅವರ ಧಣಿವನ್ನು ನೀಗಿಸಿ ತಮ್ಮ ಹರಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಪೀಠಾಧಿಪತಿ ಶ್ರೀಪಾದಬೋದ ಸ್ವಾಮಿಜೀ, ಮಾತೋಶ್ರೀ ರಾಧಿಕಾ ಶ್ರೀಪಾದಬೋಧ ಸ್ವಾಮಿ, ಶ್ರೀಗಳಾದ ಅಮೃತಬೋಧ ಸ್ವಾಮಿ, ಶ್ರೀಧರಬೋಧ ಹಾಗೂ ನೂರಾರು ವೈದಿಕರು, ಊರಿನ ಗಣ್ಯರು ಉಪಸ್ಥಿತರಿದ್ದರು.