ಶಿಗ್ಗಾವಿ07 : ಇತ್ತೀಚೆಗೆ ಧಾರವಾಡದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಧಾರವಾಡ, ಯುವ ಸಭಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರ ಹಾಗೂ ಜಿಲ್ಲಾ ಶಾಖೆ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು-2020 ರಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ (ಹಾಲಿವಸ್ತಿ ಶಿಗ್ಗಾವಿ) ಶಿಕ್ಷಕ ಮೋಹನ್ ಎಸ್ ಬ್ಯಾಹಟ್ಟಿ (ಶಿಕ್ಷಣ ಇಲಾಖೆ) ಭಾಗವಹಿಸಿ 60 ಕೆಜಿ ಕುಸ್ತಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲೆಗೆ ಮತ್ತು ಶಿಗ್ಗಾವಿ ತಾಲೂಕಿನ ಶಿಕ್ಷಣ ಇಲಾಖೆಗೆ ಕೀರ್ತಿ ತಂದ ಶಿಕ್ಷಕರ ಈ ಸಾಧನೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಬಿಇಓ ಪಿ ಬಿ ಚಿಕ್ಕಮಠ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುಳಾ ಚಂದ್ರಗಿರಿ, ಮಾಜಿ ಭಾಜಪ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ, ಶಿವಾನಂದ ರಾಮಗೇರಿ, ಗಂಗಣ್ಣ ಸಾತಣ್ಣವರ, ಉಮೇಶ ಬೆನಕನಹಳ್ಳಿ, ಬಸವರಾಜ ಹುಬ್ಬಳ್ಳಿ, ಅಜರ್ುನಪ್ಪ ಸಂದಿಮನಿ, ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ, ರಮೇಶ ಸಾತಣ್ಣವರ, ನಾಗಪ್ಪ ಅದೃಶ್ಯಪ್ಪನವರ ಸೇರಿದಂತೆ ತಾಲೂಕಿನ ನೌಕರರ ಸಂಘದ ಸದಸ್ಯರು, ಕ್ರೀಢಾಭಿಮಾನಿಗಳು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.