ರಾಯಬಾಗ 01: ಪ್ರಸ್ತುತ ವರ್ಷದ ರೈತರ ಕಬ್ಬಿನ ಬಾಕಿ ಬಿಲ್ ಕೂಡಲೇ ರೈತರ ಖಾತೆಗೆ ಜಮೆ ಮಾಡುವಂತೆ ಒತ್ತಾಯಿಸಿ ಜಿಲ್ಲೆಯ ಪ್ರತಿ ತಾಲೂಕಿನ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಕೊಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ರೈತ ವಕ್ತಾರ ತ್ಯಾಗರಾಜ ಕದಮ ತಿಳಿಸಿದರು.
ಸೋಮವಾರ ಪಟ್ಟಣದ ಗಣಪತಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ರೈತರ ವಿವಿಧ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚಚರ್ಿಸಲಾಗುತ್ತಿದೆ. ರೈತರಿಗೆ ಫಸಲು ವಿಮಾ ಬಾಕಿ ರೈತ ಖಾತೆಗೆ ಜಮೆ ಆಗಬೇಕು, ಸರಕಾರ ಸಾಲ ಮನ್ನಾ ಮಾಡಿದರೂ ಬ್ಯಾಂಕ್ನವರು ರೈತರಿಗೆ ಕಿರುಕುಳ ನೀಡುತ್ತಿರುವ ನಿಲ್ಲುಸುವಂತೆ ಒತ್ತಾಯಿಸಿ ಸೇರಿದಂತೆ ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ ನೀಡಲು ಸಭೆಯಲ್ಲಿ ತೀಮರ್ಾನಿಸಲಾಗಿದೆ ಎಂದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಸತ್ಯಪ್ಪ ಮಲ್ಲಾಪೂರ ಮಾತನಾಡಿ, ರಾಯಬಾಗ ತಾಲೂಕು ರೈತ ಸಂಘ ಸಮಿತಿಯನ್ನು ರದ್ದು ಮಾಡಿದ್ದು, ಶೀಘ್ರದಲ್ಲಿ ಹೊಸ ಸಮಿತಿಯನ್ನು ರಚಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ನೇಮಕ ಮಾಡಲಾಗುವುದು. ಈಗ ಎಂಟು ಜನರ ರೈತ ಸಂಘದ ಸಲಹಾ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು. ಸರಕಾರ ಎಲ್ಲ ವರ್ಗದ ಜನರಿಗೆ ಸಮುದಾಯ ನಿಮರ್ಿಸಿಕೊಡತ್ತಿದ್ದಂತೆ ರೈತರಿಗೆ ಅನುಕೂಲವಾಗುವಂತೆ ಪ್ರತಿ ತಾಲೂಕಿನಲ್ಲಿ ರೈತ ಭವನ ನಿಮರ್ಿಸಿಕೊಡಬೇಕೆಂದರು ಒತ್ತಾಯಿಸಿದರು.
ಹಿಡಕಲ್ ಡ್ಯಾಂದಿಂದ ಘಟಪ್ರಭಾ ಬಲ ಮತ್ತು ಎಡದಂಡೆ ಕಾಲುವೆ ಹಾಗೂ ಕಬ್ಬೂರು ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು. ಅಲ್ಲದೇ ಕುಡಿಯುವ ನೀರಿನ ಸಲುವಾಗಿ ನಿಯಮದಂತೆ ಕೃಷ್ಣಾ ನದಿಗೆ ಮಹಾರಾಷ್ಟ್ರ ಸರಕಾರ ಕೊಯ್ನಾ ಡ್ಯಾಂದಿಂದ 2 ಟಿಎಂಸಿ ನೀರು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ ಅವರು ನಮ್ಮ ಬೇಡಿಕೆಗಳನ್ನು ಒಂದು ವಾರದಲ್ಲಿ ಈಡೇರಿಸದಿದ್ದರೆ ಎಲ್ಲ ತಾಲೂಕು ಕೇಂದ್ರ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಗೋಪಾಲ ಕೊಕನೂರ, ಮಹಾದೇವ ಮಡಿವಾಳ, ರವೀಂದ್ರ ಪಟ್ಟೇಗಾರ, ಗಜು ಮುತಾರೆ, ಲಕ್ಷ್ಮಣ ಹೊಸಟ್ಟಿ, ಗುರುನಾಥ ಹೆಗಡೆ, ಚಂದ್ರಕಾಂತ ಸಾರಂಗಿ, ಯಮನಪ್ಪ ಮಂಟೂರ, ಬಾಬು ಹಿರೇಮಠ, ಪ್ರಕಾಶ ಪಾಟೀಲ ಸೇರಿದಂತೆ ಅನೇಕ ರೈತರು ಸಭೆಯಲ್ಲಿ ಭಾಗವಹಿಸಿದ್ದರು.