ಮಹಾಲಿಂಗಪೂರ : ಪ್ಲಾಸ್ಟಿಕ್ ಬಳಕೆ ನಿಷೇಧ ಪುರಸಭೆ ಸಿಬ್ಬಂದಿಯಿಂದ ದಾಳಿ

ಲೋಕದರ್ಶನ ವರದಿ

ಮಹಾಲಿಂಗಪೂರ 22: ಜೋಡು ರಸ್ತೆಯಲ್ಲಿ ಬರುವ ಹಲವಾರು ಅಂಗಡಿ ಮುಂಗಟ್ಟುಗಳ ಮೇಲೆ ಪುರಸಭೆಯ ಅಧಿಕಾರಿಗಳು ದಾಳಿ ಮಾಡಿ  50ಕಿಲೋ ಪ್ಲಾಸ್ಟಿಕ್ ವಶಪಡಿಕ್ಕೊಂಡು ಎರಡನೆ ಸಾರಿ ಸಿಕ್ಕರೆ ದಂಡದ ಜೊತೆಗೆ ಕಾನೂನಿನ ಕ್ರಮ ಜರುಗಿಸುವ  ಎಚ್ಚರಿಕೆ ನೀಡಿದರು.   

ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅನೇಕ ಸಂಶೋಧನೆಗಳು ಒತ್ತಿ ಹೇಳಿವೆ. ಬಿಪಿಎ ಹಾಗೂ ಬಿಸ್ಪಿನಾಲ್ ಎ ಎಂಬ ಹಾನಿಕಾರಕ ರಾಸಾಯನಿಕವು ದೇಹವನ್ನು ಸೇರುವುದರಿಂದ ಕ್ಯಾನ್ಸರ್ ನಂಥ ಮಾರಕ ಕಾಯಿಲೆ ಬರುತ್ತದೆ. 

ಮನೆ ಗೊಬ್ಬರದಲ್ಲಿ ಹಾಗೂ ಸಾರ್ವಜನಿಕ ಕಸದ ತ್ಯಾಜ್ಯದಲ್ಲಿ ಹೆಚ್ಚಿನ ಪ್ರಮಾಣ ಪ್ಲಾಸ್ಟಿಕ್ ಇರುತ್ತದೆ.ಇದನ್ನು ಭೂಮಿಗೆ ಹಾಕುವದರಿಂದ ಹಾಗೂ ಸುಡುವುದರಿಂದ ರಾಸಾಯನಿಕ ಮಣ್ಣಿನ ಜ್ಯೊತೆ  ಸೇರಿ ಇಳುವರಿ ಕಡಿಮೆ ಬರುವುದಲ್ಲದೆ ವಾತಾವರಣವು ಕಲುಷಿತಗೊಂಡು ಅಸ್ತಮಾ, ಕ್ಯಾನ್ಸರ್ ರೋಗಗಳಿಗೆ ಕಾರಣವಾಗುತ್ತದೆ.ಇದು ಸರಕಾರದ ವರದಿಯಲ್ಲಿ ದ್ರಢಪಟ್ಟಿದೆ. 

ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಭಾರತ  ಸರಕಾರ ಕೆಲ ವರ್ಷಗಳ ಹಿಂದೆ ಕೆಲ ಮಾನದ ಪ್ಲಾಸ್ಟಿಕ್ ವಸ್ತುಗಳನ್ನು, ಕ್ಯಾರಿಬ್ಯಾಗ್ ಗಳನ್ನು ಬ್ಯಾನ್ ಮಾಡಿದೆ. 

ಇದರ ಆಧಾರದ ಮೇಲೆ ಪುರಸಭೆ ಮುಖ್ಯಾಧಿಕಾರಿ ಆದೇಶದ ಮೆರೆಗೆ ಕಿರಿಯ ಆರೋಗ್ಯ ನಿರಿಕ್ಷಕರಾದ ರಾಜು ಹೂಗಾರ್, ಇಫರ್ಾನ್ ಝಾರೆ, ಪುರಸಭೆ ಸಿಬ್ಬಂದಿ ಪರಶುರಾಮ ಉತ್ತೂರ್, ದುರ್ಗಪ್ಪ ಜಮಖಂಡಿ, ಹಾಗೂ ಇನ್ನಿತರರು ಈ ಕಾಯರ್ಾಚರಣೆ ಯಲ್ಲಿ ಭಾಗಿಯಾಗಿ ಪ್ಲಾಸ್ಟಿಕ್ ವಶಪಡಿಸಿಕೊಂಡರು.