ಕಂಪ್ಲಿ: ಕಾಲುವೆ ವಿಭಜನೆ ಖಂಡಿಸಿ ಧರಣಿ

ಲೋಕದರ್ಶನ ವರದಿ

ಕಂಪ್ಲಿ 09: ಎಲ್ಎಲ್ಸಿ ಕಾಲುವೆಯ ಡಿಪಿ .3ರ ವಿತರಣಾ ನಾಲೆಗೆ 48ಎಕರೆ ಅಚ್ಚುಕಟ್ಟು ಭೂಮಿಗೆ ನೀರು ಒದಗಿಸಬೇಕಾಗಿದೆ. ನೀರಾವರಿ ಅಧಿಕಾರಿಗಳು (ಟ್ರಿ ಮ್ಯಾಪ್) ವಿನ್ಯಾಸದಲ್ಲಿಲ್ಲದಿದ್ದರೂ, ಇದನ್ನು 16ಎಕರೆ ಮತ್ತು 32ಎಕರೆ ಎಂದು ಅನಧಿಕೃತವಾಗಿ ವಿಭಜಿಸಿದ್ದಾರೆ. 

ಅಚ್ಚುಕಟ್ಟು ಅಲ್ಲದ  ಭೂಮಿಗೆ ನೀರು ಒದಗಿಸಲು ಕಾರಣರಾಗಿರುವ ಕರ್ನಟಕ ನೀರಾವರಿ ನಿಗಮದ ಅಧಿಕಾರಿ ಎಇಇ ಪುರುಷೋತ್ತಮ ಇವರನ್ನು ಅಮಾನತ್ತುಗೊಳಿಸಬೇಕು. ಅನಧಿಕೃತ ಕಾಲುವೆಯನ್ನು ಸ್ಥಗಿತಗೊಳಿಸಲು ಆಗ್ರಹಿಸಿ ಜು.11ರಂದು ಕಂಪ್ಲಿಯ ನೀರಾವರಿ ಕಛೇರಿ ಮುಂದೆ ಅನಿರ್ಧಾರ್ ಷ್ಠಾವಧಿ ಧರಣಿ ಮಾಡಲಾಗುವುದು ಎಂದು ಕರ್ನಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ್ ಹೇಳಿದ್ದಾರೆ ಅವರು ಸೋಮವಾರ ಇಲ್ಲಿನ ಅತಿಥಿಗೃಹ ಆವರಣದಲ್ಲಿನಡೆದ ರೈತರ ಸಂತ್ರಸ್ಥರ ಸಭೆಯಲ್ಲಿ ಮಾತನಾಡಿ, ಚಿಕ್ಕಜಾಯಿಗನೂರು ಗ್ರಾಮದ ಎಲ್ಎಲ್ಸಿ ಕಾಲುವೆಯ ಡಿಪಿ ನಂ.3ರ ವಿತರಣಾ ನಾಲೆಗೆ 48ಎಕರೆ ಅಚ್ಚುಕಟ್ಟು ಭೂಮಿಗೆ ನೀರೊದಗಿಸಬೇಕಾಗಿದೆ

32ಎಕರೆ ಅನಧಿಕೃತ ಭೂ ಮಾಲೀಕರು ಬೇರೆಕಡೆ ಇದ್ದರು ಸಹ ಬಲವಂತವಾಗಿ ರೈತರನ್ನು ಬೆದರಿಸಿ, ಅಧಿಕಾರಿಗಳನ್ನು ಒಳಮಾಡಿಕೊಂಡು ಅನೇಕ ವರ್ಷಗಳಿಂದ ಅನಧಿಕೃತ ಭೂಮಿಗೆ ನೀರು ಪಡೆದು 48ಎಕರೆ ಅಚ್ಚುಕಟ್ಟು ಭೂಮಿಯ ರೈತರನ್ನು ವಂಚಿಸುತ್ತಿದ್ದಾರೆ. ಮೂಲ ವಿನ್ಯಾಸದ ನಕಾಶೆ ಪ್ರಕಾರ ಇರುವ 48ಎಕರೆಗೊಳಪಡುವ ನಾಲೆಯನ್ನು ವಿಭಜಿಸಿದ್ದು ಕಾನೂನು ಉಲ್ಲಂಘನೀಯವಾಗಿದೆ. ಅನಧಿಕೃತ ನಾಲೆಯನ್ನು ಮುಚ್ಚುವಂತೆ 2012ರಿಂದ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ರೈತರು ತಂದಿರುತ್ತಾರೆ. 

2019ರ ಜ.28ರಂದು ಕಂಪ್ಲಿಯ ಸಿಪಿಐ ಹುಲುಗಪ್ಪ ಇವರು ಮಾಚ್31ರತನಕ ಮಾತ್ರ ನೀರು ಪಡೆದು ನಂತರ  ನಕಾಶೆ ಪ್ರಕಾರವೇ ನೀರು ಪಡೆಯುವಂತೆ ಉಭಯ ರೈತರಿಗೂ ಸಲಹೆ ನೀಡಿರುತ್ತಾರೆ. ಅಚ್ಚುಕಟ್ಟು ಅಲ್ಲದ ಭೂಮಿಗೆ ಬಲವಂತದಿಂದ ನೀರನ್ನು ಅನಧಿಕೃತವಾಗಿ ಪಡೆದುಕೊಳ್ಳುತ್ತಿರುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಎಇಇ ಪುರುಷೋತ್ತಮ ಸೇರಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ, ಅನಧಿಕೃತವಾಗಿ ನೀರು ಪಡೆದುಕೊಳ್ಳುತ್ತಿರುವ  ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಗಿ ಆಗ್ರಹಿಸಿ ಜು.11ರಿಂದ ಕಂಪ್ಲಿಯ ಕರ್ನಾಟಕ  ನೀರಾವರಿ ನಿಗಮದ ಕಛೇರಿ ಮುಂದೆ ಅನಿಧರ್ಿಷ್ಟಾವಧಿಯ ಧರಣಿ ಕೈಗೊಳ್ಳಲಾಗುವುದು ಎಂದು ಹೇಳಿದರು. 

   ಡಿಪಿ3ಯ ಅಚ್ಚುಕಟ್ಟು ಕಲ್ಗುಡಿ ಪ್ರದೇಶದ ಸಂತ್ರಸ್ಥ ರೈತರಾದ ಎಚ್.ಲಿಂಗಪ್ಪ, ಕರಿಯಪ್ಪ, ಜಡೆಪ್ಪಗೌಡ, ಕಾಡಸಿದ್ದಪ್ಪ, ಸಣ್ಣ ಮಾಯಪ್ಪ, ಯಮುನಪ್ಪ, ಮುಸಿ ಬೊಮ್ಮಪ್ಪ, ಬಸವರಾಜ, ಹೊನ್ನೂರಪ್ಪ, ಚಂದ್ರಶೇಖರ್, ಎಚ್.ರಾಘವೇಂದ್ರ ಸೇರಿ ಕಲ್ಲಗುಡಿಯ ರೈತರು ಉಪಸ್ಥಿತರಿದ್ದರು