ಕಂಪ್ಲಿ: ಶಾಲೆ ಪ್ರಾರಂಭೋತ್ಸವ: ಟ್ರ್ಯಾಕ್ಟರ್ನಲ್ಲಿ ಮಕ್ಕಳ ಪ್ರಭಾತಪೇರಿ

ಲೋಕದರ್ಶನ ವರಿ

ಕಂಪ್ಲಿ 30: 2019-20ನೇ ಶೈಕ್ಷಣಿಕ ವರ್ಷದಲ್ಲಿ  ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಮುಂದಾಗಬೇಕು ಎಂದು ಇಲ್ಲಿನ ಎಸ್ಎನ್ ಪೇಟೆ ಕ್ಲಸ್ಟರ್ ಸಿಆರ್ಪಿ ಜೆ.ಕೆ.ಮಂಜುನಾಥ ಹೇಳಿದರು. 

ತಾಲೂಕಿನ ನಂ.1 ಇಟಗಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ, ಪ್ರಸಕ್ತ ಸಾಲಿನ ಶಾಲಾರಂಭೋತ್ಸವಕ್ಕೆ ಬೆಳಿಗ್ಗೆ 8ಗಂಟೆಗೆ ವಿದ್ಯುಕ್ತ ಚಾಲನೆ ನೀಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದ್ದು, ಮಕ್ಕಳನ್ನು ಮನೆಗೆಲಸ, ಹೊಲಗದ್ದೆ ಕೆಲಸ, ವೈಯಕ್ತಿಕ ಕೆಲಸಗಳಿಗೆ ಕಳಿಸಬಾರದು ಸಕರ್ಾರದ ಸೌಲಭ್ಯ ಸದುಪಯೋಗ ಪಡೆದು ಕೊಳ್ಳಿಎಂದರು ಟ್ರ್ಯಾಕ್ಟರ್ನಲ್ಲಿ  ಮಕ್ಕಳನ್ನು  ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ಶಾಲಾ ಪ್ರಾರಂಭೋತ್ಸವಕ್ಕಾಗಿ. 103ಮಕ್ಕಳು, ನಾಲ್ವರು ಶಿಕ್ಷಕರು ಶಾಲಾ ಪ್ರಾರಂಭೋತ್ಸವ ದಿನ ಹಾಜರಾಗಿ ಶೈಕ್ಷಣಿಕ ವಷರ್ಾರಂಭವನ್ನು ಸ್ವಾಗತಿಸಿದರು. ಮೇ.28ರಂದು ಶಾಲೆಯನ್ನು ಸ್ವಚ್ಚಗೊಳಿಸಿ, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. 

     ಶಾಲಾ ಪ್ರಾರಂಭೋತ್ಸವದಲ್ಲಿ ಬಡ್ತಿ ಮುಖ್ಯಗುರು ವಿ.ಪಕ್ಕೀರಪ್ಪ, ಎಸ್ಡಿಎಂಸಿ ಅಧ್ಯಕ್ಷ ಹುಲುಗಪ್ಪ, ಗಣ್ಯರಾದ ಇ.ರವೀಂದ್ರಗೌಡ, ಶಿಕ್ಷಕರಾದ ಚಂದ್ರಯ್ಯ, ಪ್ರಭು, ಗಿರಿಜಾ, ಸಂತೋಷ್, ಎಸ್ಡಿಎಂಸಿ ಸದಸ್ಯರಾದ ಜಂಬಣ್ಣ, ಓಂಕಾರಪ್ಪ, ಗ್ರಾಪಂ ಸದಸ್ಯರಾದ  ಬಸಲಿಂಗಪ್ಪ ಗೌಡ, ಮಂಜುಳಾ, ಪಾರ್ವತಮ್ಮ, ಈರಮ್ಮ, ಗ್ರಾಮದ ಮುಖಂಡರಾದ ಶರಣಪ್ಪ ಗೌಡ, ನಬೀಸಾಬ್, ತಾಪಂ ಮಾಜಿ ಸದಸ್ಯ ವೆಂಕಟರಾಮರಾಜು ಸೇರಿ ಪೋಷಕರು, ಗ್ರಾಮಸ್ಥರು, ಶಾಲಾ ಮಕ್ಕಳು ಸಡಗರ ಸಂಭ್ರಮಗಳಿಂದ ಪಾಲ್ಗೊಂಡಿದ್ದರು.