ಕಂಪ್ಲಿ: ಕಬಡ್ಡಿಯಲ್ಲಿ ಅಂಗವಿಕಲ ಎಂ.ರಾಜಸಾಬ್ ಸಾಧನೆ

ಲೋಕದರ್ಶನ ವರದಿ

ಕಂಪ್ಲಿ 28; ಅಂಗವಿಕಲರಿಗೆ ಅನುಕಂಪದ ಸಹಾಯ ನೀಡುವ ಬದಲಾಗಿ ಆತ್ಮಸ್ಥೈರ್ಯದ ಪ್ರೋತ್ಸಾಹದ ಅಗತ್ಯವಿದೆ' ಅಂಗವಿಕಲ ಕಬಡ್ಡಿ ಕ್ರೀಡಾಪಟು ಎಂ.ರಾಜಸಾಬ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಚಿನ್ನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅಂತರ ರಾಷ್ಟ್ರೀಯ ಅಂಗವಿಕಲರ ಪ್ಯಾರಾ ಒಲಂಪಿಕ್ ಕಬಡ್ಡಿ ಪಂದ್ಯಾವಳಿಯಲ್ಲಿ ನೇಪಾಳ  ತಂಡದ ವಿರುದ್ಧ ಗೆಲುವು ಸಾಧಿಸಿ ಬಹುಮಾನ ಪಡೆದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಟೈ ಮತ್ತು ಬೆಲ್ಟ್ ವಿತರಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಎಸ್. ನಾಗರಾಜ ಧ್ವಜಾರೋಹಣ ನೆರವೇರಿಸಿದರು. ಎಸ್ಡಿಎಂಸಿ ಅಧ್ಯಕ್ಷ ಎಸ್. ರಾಘವೇಂದ್ರ ಮತ್ತು ಸದಸ್ಯರು, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಾವಿನಹಳ್ಳಿ ಎಸ್. ಬಸವರಾಜ, ಟಿ. ಅಂಜಿನಿ, ಟಿ. ಸುಧಾಕರ, ಮುಖ್ಯ ಶಿಕ್ಷಕ ಜಿ. ಸಂಗನಗೌಡ, ಬಿ. ಹನುಮಂತಪ್ಪ, ನಿಂಗಪ್ಪ ಅಂಗಡಿ, ಮುಖಂಡರು, ಪಾಲಕ, ಪೋಷಕರು ಹಾಜರಿದ್ದರು.