ಲೋಕದರ್ಶನ ವರದಿ
ಕಂಪ್ಲಿ 20: ತಾಲೂಕಿನ ಸುಗ್ಗೇನಹಳ್ಳಿ ಗ್ರಾಮ ದ ರವಿಶಂಕರ್ ಮತ್ತು ದೇವಲಾಪುರ ಗ್ರಾಮದ ಚನ್ನದಾಸರ ಸುರೇಶ್ 02ಅಂಗವಿಕಲ ಕ್ರೀಡಾಪಟುಗಳು, ಶ್ರೀಲಂಕಾದ ಕೊಲಂಬೋದಲ್ಲಿ ಇದೇ 2019ರ ಜರುಗಿದ, ಅಂಗವಿಕಲರ 3ನೇ ಅಂತರಾಷ್ಟ್ರೀಯ ಪ್ಯಾರ ಗೇಮ್ಸ್ನ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾಗುವ ಮೂಲಕ ಚಿನ್ನದ ಪದಕಗಳಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಕ್ರೀಡಾಕೂಟದಲ್ಲಿ ಥೈಲ್ಯಾಂಡ್ ವಿರುದ್ಧ ಸೆಣಸಿ ವಿಜೇತವಾದ ಭಾರತದ ಅಂಗವಿಕಲರ ಕಬಡ್ಡಿ ತಂಡವು, ಅಂತಿಮ ಪಂದ್ಯದಲ್ಲಿ ಶ್ರೀಲಂಕಾದೊಡನೆ ಸೆಣಸಿ 28ಅಂಕಗಳನ್ನು ಗಳಿಸಿ, 18ಅಂಕಗಳ ಅಂತರದಿಂದ ಅತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿ ಚಾಂಪಿಯನ್ನ್ ಆಗಿದ್ದಾರೆ.
ಗಿರಿಸಾಗರದ ಶೇಖರ್ ಕಾಕಂಡ್ಕಿ ಇವರ ಭಾರತ ತಂಡದ ನಾಯಕತ್ವದಲ್ಲಿ ಸುಗ್ಗೇನಹಳ್ಳಿಯ ರವಿಶಂಕರ್, ದೇವಲಾಪುರದ ಚನ್ನದಾಸರ ಸುರೇಶ್, ಪರಮಾನಂದ, ಶ್ರೀಕಾಂತ್, ಸಚಿನ್, ಕುಪ್ಪಣ್ಣ, ಚಿದಾನಂದ, ಪ್ರವೀಣ್ ಕುಮಾರ್, ರುದ್ರಗೌಡ ಸೇರಿಅನೇಕರಿದ್ದರು
ರವಿಶಂಕರ್ ಮತ್ತು ಚನ್ನದಾಸರ ಸುರೇಶ್ ಮಾತನಾಡಿ, ಶ್ರೀಲಂಕಾದ ಕೊಲಂಬೋದಲ್ಲಿ ಜರುಗಿದ 3ನೇ ಅಂತರಾಷ್ಟ್ರೀಯ ಪ್ಯಾರ ಗೇಮ್ಸ್ನ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಕನಸಿನ ಮಾತಾಗಿತ್ತು. ಅಸಹಾಯಕತೆಯ ಕೈಚೆಲ್ಲಿ ಕುಳಿತ ನಮಗೆ ಮೆಟ್ರಿ ಜಿಪಂ ಸದಸ್ಯೆ ಎಂ.ವೆಂಕಟನಾರಮ್ಮ ಸೂರ್ಯನಾರಾಯಣ, ಸುಗ್ಗೇನಹಳ್ಳಿ ಗ್ರಾಪಂ ಪಿಡಿಒ ಅಪರಂಜಿ, ಕಂಪ್ಲಿ ಪಿಎಸ್ಐ ಕೆ.ಬಿ.ವಾಸುಕುಮಾರ್, ಕುಡುತಿನಿಯ ಪಿಎಸ್ಐ ಮಹೇಶ್ಕುಮಾರ್, ಕುಡುತಿನಿಯ ಬಾಬು ಇವರೆಲ್ಲ ಸಹಕರಿಸಿದ್ದಕ್ಕಾಗಿ ಭಾಗವಹಿಸಲು ಸಾಧ್ಯವಾಯಿತು. ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕಗಳಿಸಿರುವುದು ಖಷಿಯಾಗಿದೆ ಎಂದರು.