ರಾಜರಾಜೇಶ್ವರಿ ಸಂಸ್ಥೆಯ ಸೇವೆ ಅನನ್ಯ - ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಅಭಿಮತ
The service of Rajarajeshwari Institute is unique - Shambhulingana Gowda Patil, immediate past stat
ಕೊಪ್ಪಳ 07: ತಾಲೂಕಿನ ಹಲಗೇರಿ ಗ್ರಾಮದ ಶ್ರೀ ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆ ಕೊಪ್ಪಳ ಜಿಲ್ಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗೆ ನೀಡಿದ ಸೇವೆ ಅನನ್ಯವಾದುದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹೇಳಿದರು. ಹಲಗೇರಿಯ ಶ್ರೀ ರಾಜರಾಜೇಶ್ವರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 19ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆ ಅತ್ಯಂತ ಗುಣಮಟ್ಟದ ಶಿಕ್ಷಣ ನೀಡುವುದರಲ್ಲಿ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದೆ.
ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ನವೋದಯ, ಸೈನಿಕ, ಮುರಾರ್ಜಿ ದೇಸಾಯಿ, ಆದರ್ಶ ಸೇರಿದಂತೆ ಇನ್ನಿತರೆ ಪ್ರತಿಷ್ಠಿತ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಕೆಲವರು ಈಗಾಗಲೇ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉನ್ನತ ಹುದ್ದೆಗಳ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಸಂಸ್ಥೆಯ ಮುಖ್ಯಸ್ಥರ ಶ್ರಮ ಹಾಗೂ ಶಿಕ್ಷಕರ ಕರ್ತವ್ಯ ನಿಷ್ಠೆ ಕಾರಣವಾಗಿದೆ ಎಂದರು.
ಪಾಲಕರು ತಮ್ಮ ಮಕ್ಕಳು ಜೀವನದಲ್ಲಿ ತಮ್ಮಂತೆ ಕಷ್ಟ ಪಡಬಾರದು. ಅವರ ಜೀವನ ಸುಖವಾಗಿರಬೇಕು ಎಂಬ ನಿಸ್ವಾರ್ಥದಿಂದ ತಮ್ಮ ಹಲವಾರು ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸುತ್ತಾರೆ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಂಡು, ಕಷ್ಟಪಟ್ಟು ಓದಿ, ಒಳ್ಳೆಯ ಸ್ಥಾನಮಾನ ಪಡೆಯಬೇಕು. ಆಗ ಕಷ್ಟಪಟ್ಟು ಕಲಿಸಿದ ಪಾಲಕರಿಗೆ ಹಾಗೂ ಗುರುಗಳಿಗೆ ಸಂತಸವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮ್ಯಾಗಳಮನಿ ಮಾತನಾಡಿ, ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆ ಇಡೀ ರಾಜ್ಯದಲ್ಲಿ ಹೆಸರು ಮಾಡುತ್ತದೆ. ಇದು ಗ್ರಾಮಕ್ಕೆ ಹೆಮ್ಮೆಯ ವಿಷಯ. ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ಸತತ ಪರಿಶ್ರಮದಿಂದ ಅದನ್ನು ಎತ್ತರಕ್ಕೆ ಬೆಳೆಸುವುದು ಸುಲಭದ ಮಾತಲ್ಲ. ಆದರೆ ಹಿಂದೆ ಸಾಕಷ್ಟು ಅಡೆ-ತಡೆಗಳು, ನೋವು ನಲಿವುಗಳು ಇರುತ್ತವೆ. ಅವುಗಳನ್ನೆಲ್ಲ ಮೆಟ್ಟಿನಿಂತು ಎರಡು ದಶಕಗಳ ಕಾಲ ಶ್ರಮಿಸಿದ ಫಲವಾಗಿ ಇಂದು ಸಂಸ್ಥೆ ಎತ್ತರಕ್ಕೆ ಬೆಳೆದು ನಿಂತಿದೆ.
ಹಲಗೇರಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರ ಯಾವತ್ತೂ ಸಂಸ್ಥೆಯ ಮೇಲೆ ಇರಬೇಕು ಎಂದು ಹೇಳಿದರು. ಶಾಲೆಯ ಸಂಸ್ಥಾಪಕ ವೀರಣ್ಣ ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಮಾರುತಿ ಗಾವರಾಳ, ಸಕ್ರ್ಪ ಚೌಡಕಿ, ಸರ್ವಮಂಗಳ ಪಾಟೀಲ್, ಪಿಎಸ್ಐ ರೇವಣ್ಣ ಗುರಿಕಾರ, ಬೀರ್ಪ ಅಂಡಗಿ, ಪ್ರಹ್ಲಾದ್ ಅಗಳಿ, ಎಸ್.ಎ. ನಿಂಗೋಜಿ, ಕುಬೇರ ಮಜ್ಜಿಗಿ, ಯಲ್ಲಾಲಿಂಗ ಕತ್ತಿ, ಶಾಂತನಗೌಡ ಪಾಟೀಲ್, ಮಲ್ಲಿಕಾರ್ಜುನಗೌಡ ಪಾಟೀಲ್, ಹನುಮಂತಪ್ಪ ಅಬ್ಬಿಗೇರಿ, ಉಮೇಶ್ ಅಬ್ಬಿಗೇರಿ, ಮಂಜುನಾಥ ಬಂಗಾಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕನಕದಾಸ ಗೊರವರ ಸ್ವಾಗತಿಸಿದರು. ಗವಿಸಿದ್ದಯ್ಯ ಸಸಿಮಠ ನಿರೂಪಿಸಿದರು. ವೀರೇಶ್ ಶಾನುಭೋಗರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 