ಕಂಪ್ಲಿ 02: ತಾಲ್ಲೂಕಿನ ಸಣಾಪುರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದವರು ಶನಿವಾರ ಹಮ್ಮಿಕೊಂಡಿದ್ದ, ಚಿಕ್ಕೇನಕಪ್ಪ ಚನ್ನವೀರ ಶರಣರ 25ನೇಪುಣ್ಯ ಸ್ಮರಣೋತ್ಸವ ನಿಮಿತ್ತ ಗದುಗಿನ ವಿರೇಶ್ವರ ಪುಣ್ಯಾಶ್ರಮದ ಕಲ್ಲಜ್ಜಯ್ಯನವರ 1389ನೇ ತುಲಾಭಾರ ಸೇವೆ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಿದವು.ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜನವರು ಮಾತನಾಡಿ, ಸೊಸೆಂದಿರು ಹಿರಿಯರನ್ನು ಗೌರವದಿಂದ ಕಾಣುವುದರ ಜೊತೆಗೆ ದಂಪತಿಗಳಿಬ್ಬರು ಪರಸ್ಪರ ಅರ್ಥ್ಯಸಿಕೊಂಡು ಜೀವಿಸಬೇಕು. ಹುಟ್ಟುವ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಿ ಮಾತ್ರಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ . ತುಲಾಭಾರದ ಹಣ ಆಶ್ರಮದ ಅಂಧ, ಅನಾಥ ಮಕ್ಕಳ ಶೈಕ್ಷಣಿಕ ಕಾರ್ಯಗಳಿಗೆ ವಿನಿಯೋಗಿಸಲಾಗುವುದು. ಚಿಕ್ಕೇನಕೊಪ್ಪ ಚನ್ನವೀರಶರಣರು ಪವಾಡ ಪುರುಷರಾಗಿದ್ದಾರೆ ಎಂದರು
ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಸಾಮೂಹಿಕ ವಿವಾಹ ಮಾಡಿಕೊಳ್ಳವುದರಿಂದ ಆರ್ಥಿಕ ಭಾರ ಕಡಿಮೆಯಾಗುತ್ತದೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ಎಂದರು ಐದು ಜೋಡಿ ವಧುವರರು ಗೃಹಸ್ಥಾಶ್ರಮ ಸ್ವೀಕರಿಸಿದರು. ಗ್ರಾಮದಲ್ಲಿ ಚಿಕ್ಕೇನಕೊಪ್ಪ ಚನ್ನವೀರಶರಣರ ಭಾವಚಿತ್ರ ಮೆರವಣಿಗೆ ಜರುಗಿತು.
ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಚಿಕ್ಕೇನಕೊಪ್ಪ ಚನ್ನವೀರಶರಣರ ಕುರಿತ 'ಮನುಕುಲವೆಲ್ಲ ಒಂದೇ' ಎನ್ನುವ ಕವಿತೆ ವಾಚಿಸಿದರು. ಸಿದ್ದಯ್ಯಸ್ವಾಮಿ, ಈಶಣ್ಣ ತಾತ, ರೌಡಕುಂದಿ ಬಂಗಾರಿ ಕ್ಯಾಂಪಿನ ಡಾ.ಸಿದ್ಧರಾಮಶರಣರು, ಕೊಟ್ನೇಕಲ್ ಸಂಗಯ್ಯತಾತನವರು, ಗ್ರಾಪಂ ಅಧ್ಯಕ್ಷ ಎಮ್ಮಿಗನೂರು ಮಹಾಂತೇಶ್, ಪ್ರಮುಖರಾದ ಪಿ.ಮೂಕಯ್ಯಸ್ವಾಮಿ, ಇಟ್ಗಿ ಬಸವರಾಜಗೌಡ, ಕನಕಗಿರಿ ವೀರೇಶಪ್ಪ, ಎಸ್.ಎಂ.ನಾಗರಾಜಸ್ವಾಮಿ, ವೆಂಕಟರಾಮರಾಜು, ಬೂದಗುಂಪಿ ಅಂಬಣ್ಣ, ಜಿ.ಈಶಪ್ಪ, ಕೆ.ಮರಿಶಾಂತಪ್ಪ, ಮುಷ್ಟೂರು ಚನ್ನಪ್ಪ, ಟಿ.ವೀರಣಗೌಡ, ಕೆ.ದೊಡ್ಡಬಸಪ್ಪ, ಗುಂಡೂರು ಕುಮಾರಸ್ವಾಮಿ, ಕೆ.ರೇಣುಕನಗೌಡ, ಯು.ಮಲ್ಲಯ್ಯ ಸೇರಿ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.