ಲೋಕದರ್ಶನ ವರದಿ
ಕಂಪ್ಲಿ 22: ಮಹಾಶಿವರಾತ್ರಿ ಕತ್ತಲಿನಿಂದ ಬೆಳಕಿನಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವ ಮಾರ್ಗವಾಗಿದೆ ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರ.ಕು.ಡಾ.ರೇಖಾ ಅಕ್ಕ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಶುಕ್ರವಾರ ಮಹಾಶಿವರಾತ್ರಿ ಶಾಂತಿಯಾತ್ರೆಗೆ ಚಾಲನೆ ನೀಡಿ, ಶಿವ ಭೂಮಿಯಲ್ಲಿ ಅವತರಿಸಿದ ದಿನವಾಗಿದೆ. ಶಿವಾರಾಧನೆಯಿಂದ ಆಧ್ಯಾತ್ಮಿಕ ಅನುಭಾವ ಪಡೆಯಬಹುದಾಗಿದೆ. ಶಿವರಾತ್ರಿ ನಿಮಿತ್ತ ನಗರೇಶ್ವರ ಮತ್ತು ಫ್ಯಾಕ್ಟ್ರಿಯ ಮುಕ್ತಿನಾಥೇಶ್ವರ ದೇವಾಲಯಗಳಲ್ಲಿ ಆಧ್ಯಾತ್ಮ ಚಿತ್ರ ಪ್ರದರ್ಶನ ಮತ್ತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ. ಬ್ರಹ್ಮಕುಮಾರಿ ವಿವಿಯಲ್ಲಿ ದ್ವಾದಶ ಜ್ಯೋತಿರ್ಲಿಂಗಗಳನ್ನು ದರ್ಶನಕ್ಕೆ ಇಡಲಾಗಿದೆ ಎಂದು ಹೇಳಿದರು.
ಶಾಂತಿ ಯಾತ್ರೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಬ್ರಹ್ಮಕುಮಾರಿ ವಿವಿಯ ಸಾಧಕರಾದ ಬಿ.ಎಂ.ಪುಷ್ಪಾ, ರವಿಗೌಡ, ರಾಮಣ್ಣ, ವೆಂಕಟಸ್ವಾಮಿ, ಸರಸ್ವತಿ, ಶಾಂತಾ, ಸರೋಜಾ ಸೇರಿ ಅನೇಕರಿದ್ದರುಶಿವರಾತ್ರಿ ವಿಶೇಷ: ಶಿವರಾತ್ರಿ ನಿಮಿತ್ತ ರಾಮಲಿಂಗೇಶ್ವರ, ಜಡೇಶಂಕರಲಿಂಗ ಸೇರಿ ತಾಲೂಕಿನ ನಾನಾ ಶಿವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಮಾಡಲಾಗಿತ್ತು. ಶಿವಕೀರ್ತನೆ ಹಮ್ಮಿಕೊಳ್ಳಲಾಗಿತ್ತು. ಶಿವಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಶಿವಾಲಯಗಳಿಗೆ ತೆರಳುವುದು ಕಂಡು ಬಂದಿತು.