ಕಂಪ್ಲಿ: ಯುಗಮಾನೋತ್ಸವ: ನಾಳೆ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ

ಲೋಕದರ್ಶನ ವರದಿ

ಕಂಪ್ಲಿ 19: ವೀರಶೈವ ಲಿಂಗಾಯತ ಧರ್ಮ ಸಂರಕ್ಷಣೆ,ಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ, ಜು.21ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ನಿಮಿತ್ತ, ರಂಭಾಪುರಿ ವೀರಸಿಂಹಾಸನಾಧೀಶ್ವರ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವಾತ್ಪಾದಂಗಳವರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಹಮ್ಮಿಕೊಂಡಿದೆ ಎಂದು ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಬಿ.ವಿ.ಗೌಡ ಹೇಳಿದರು.  ಇಲ್ಲಿನ ಕಲ್ಮಠದ ಆವರಣದಲ್ಲಿ ಜರುಗಿದ ವೀರಶೈವ ಲಿಂಗಾಯತ ಯುವ ವೇದಿಕೆಯ ಮುಖಂಡರ ಸಭೆಯಲ್ಲಿ ಮಾತನಾಡಿ, ಶೀಘ್ರದಲ್ಲೆ ರಾಜ್ಯಾದ್ಯಂತ ವಿಶೇಷ ತಂತ್ರಜ್ಞಾನ ಬಳಸಿಕೊಂಡು ವೀರಶೈವ ಲಿಂಗಾಯತರ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು. 

ವೀರಶೈವ ಲಿಂಗಾಯತ ಧರ್ಮ ಜಾಗೃತಿ ಹಿನ್ನಲೆಯಲ್ಲಿ ಬೆಳ್ಳಿ ಅಡ್ಡಪಲ್ಲಕ್ಕಿಯೊಂದಿಗೆ, ಧರ್ಮ ಜಾಗೃತಿ ಸಮ್ಮೇಳನ ಹಮ್ಮಿಕೊಂಡಿದ್ದು, ಕಂಪ್ಲಿ ಮತ್ತು ತಾಲೂಕಿನ ಸಮಸ್ತ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಜು.20ರ ಸಂಜೆ 6ಗಂಟೆಗೆ ಕಂಪ್ಲಿಯಿಂದ ವಾಹನ ವ್ಯವಸ್ಥೆ ಮಾಡಲಾಗಿದ್ದು ಆಸಕ್ತರು 95386 16001 ಹಾಗೂ 99003 97655 ಸಂಪಕರ್ಿಸುವಂತೆ ತಿಳಿಸಿದರು. 

ಕಲ್ಮಠದ ಅಧ್ಯಕ್ಷ ಅರವಿ ಬಸವನಗೌಡ ಮಾತನಾಡಿ, ವೀರಶೈವ ಲಿಂಗಾಯತ ಯುವ ವೇದಿಕೆಯು ರಾಜ್ಯದಲ್ಲಿ ವೀರಶೈವ ಲಿಂಗಾಯತ ಧರ್ಮ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಯಾವುದೇ ರಾಜಕೀಯ ಮಾಡಬಾರದು ಎಂದು ಹೇಳಿದರು.

ಕಲ್ಮಠ ಗುರುಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜಿ.ಜಿ.ಚಂದ್ರಣ್ಣ ಮಾತನಾಡಿ, ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ವೀರಶೈವ ಲಿಂಗಾಯತರನ್ನು ಜಾಗೃತಿಗೊಳಿಸಿ ಸಂಘಟಿಸುವ ಅಗತ್ಯತೆ ಇದ್ದು, ಯುವ ವೇದಿಕೆಯು ಸದಾ ಕ್ರಿಯಾಶೀಲವಾಗಿ ಸೇವೆ ಸಲ್ಲಿಸುವಲ್ಲಿ ಜಾಗೃತಿ ತೋರಬೇಕು ಎಂದು ಹೇಳಿದರು. 

    ಇದೇ ಸಭೆಯಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯ ತಾಲ್ಲೂಕು ಅಧ್ಯಕ್ಷರಾಗಿ ನೇಮಕಗೊಂಡ ದೇವಸಮುದ್ರದ ಜಿ.ಅಮರೇಗೌಡ ಹಾಗೂ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳೆ ಮಲ್ಲಿಕಾಜರ್ುನ ಇವರಿಗೆ ನೇಮಕ ಆದೇಶ ಪತ್ರಗಳನ್ನು ವಿತರಿಸಲಾಯಿತು. 

    ಸಭೆಯಲ್ಲಿ ವೀರಶೈವ ಮುಖಂಡರಾದ ಜಿ.ಲಿಂಗನಗೌಡ, ಪಿ.ವೆಂಕನಗೌಡ, ಜಿ.ಚಂದ್ರಶೇಖರಗೌಡ, ಸಿ.ಮಲ್ಲಿಕಾರ್ಜುನಗೌಡ, ಜಿ.ಜಡೇಶಗೌಡ, ಎಸ್.ಪಂಪಾಪತಿ, ಲಿಂಗರಾಜ, ಜಿ.ಜಿ.ಆನಂದಮೂರ್ತಿ, ಕೋರಿ ಸಿದ್ಧೇಶ್, ಗುಡ್ಡದ ಮಲ್ಲಿಕಾರ್ಜುನ, ಸಂತೋಷ, ಅಯ್ಯನಗೌಡ, ಹೋಟೆಲ್ ರವಿ, ಅಳ್ಳಿ ಕೊಟ್ರೇಶ್, ಕಲ್ಗುಡಿ ಗುರುಸಿದ್ಧಪ್ಪ ಸೇರಿ ಅನೇಕರು ಉಪಸ್ಥಿತರಿದ್ದರು.