ಕಂಪ್ಲಿ: ಬಲಿಜ ಭವನದಲ್ಲಿ ಸಮಾಜದ 37ನೇ ಮಹಾಜನ ಸಭೆ

ಲೋಕದರ್ಶನ ವರದಿ

ಕಂಪ್ಲಿ 28: ಇಲ್ಲಿನ ಮಾರುತಿ ನಗರದ ಬಲಿಜ ಭವನದಲ್ಲಿ ಬಲಿಜ ಸಮಾಜದ 37ನೇ ಮಹಾಜನ ಸಭೆ ನಡೆಯಿತು. ಬಲಿಜ ಸಂಘದ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಸೂರಿಬಾಬು ಅಧ್ಯಕ್ಷತೆವಹಿಸಿ ಮಾತನಾಡಿ, ಬಲಿಜ ಸಮಾಜವು ಶೈಕ್ಷಣಿಕ, ಆರ್ಥಿಕ.ರಾಜಕೀಯವಾಗಿ ಸಬಲಮತ್ತು ಸಂಘಟಿತರಾದಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳ ಬಹುದು ಕಂಪ್ಲಿ ಬಲಿಜ ಸಂಘವು ಜಿಲ್ಲೆಯಲ್ಲಿಯೇ ಕ್ರಿಯಾಶೀಲವಾಗಿದ್ದು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. 

ಬಲಿಜ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರ್ಪಡೆಗೊಳಿಸಲು ಹೋರಾಟ ಹಮ್ಮಿಕೊಳ್ಳಬೇಕು ಎಂದು ಹೇಳಿದರು. ಕಂಪ್ಲಿಯ ಬಲಿಜ ಸಮಾಜದ ಮಹಾಜನ ಸಭೆಯಲ್ಲಿ ಬಲಿಜ ಸಂಘದ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಸೂರಿಬಾಬು ಅವರನ್ನು ಸನ್ಮಾನಿಸಲಾಯಿತು.ಸಭೆಯಲ್ಲಿ  ವಾಷರ್ಿಕ ವರದಿಯನ್ನು, ಲೆಕ್ಕಪತ್ರಗಳನ್ನು ಒಪ್ಪಿಸಲಾಯಿತು ಹಾಗೂ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲು ಸಭೆಯಲ್ಲಿ ಮಂಡಿಸಲಾಗಿದ್ದ ಕಾರ್ಯಕಾರಿ ಸಮಿತಿಯನ್ನೇ ಮುಂದುವರೆಸಲು ಸವರ್ಾನುಮತಗಳಿಂದ ತೀಮರ್ಾನಿಸಲಾಯಿತು. 

ಸಮಾಜದ ಹಿರಿಯ ನಾಗರೀಕರಾದ ಪಿ.ಈರಣ್ಣ, ಕೆ.ಪಾಂಡುರಂಗ, ಬಿ.ವಿಷ್ಣುವರ್ಧನ, ಮುತ್ಯಾಲ ರಮೇಶ್, ಸುಮಿತ್ರಮ್ಮ ಕೆ.ರಾಮಕೃಷ್ಣಪ್ಪ, ಕೆ.ಚಿಕ್ಕಮ್ಮ ಹನುಮಂತಪ್ಪ, ಕೆ.ಸುನಂದಮ್ಮ ವೆಂಕಣ್ಣ, ಲಕ್ಷ್ಮಿದೇವಿ ಎಂ.ರಾಮಣ್ಣ ಇವರನ್ನು ಗೌರವಿಸಲಾಯಿತು. ಬಲಿಜ ಸಮಾಜದ ಗೌರವಾಧ್ಯಕ್ಷರಾಗಿ ಪಿ.ಶ್ರೀನಿವಾಸುಲು, ಅಧ್ಯಕ್ಷರಾಗಿ ಕವಿತಾಳ್ ಬಸವರಾಜ್, ಉಪಾಧ್ಯಕ್ಷರಾಗಿ ಕೆ.ಶಂಕರ್, ಆರ್.ತಿರುಮಲದೇವರಾಯ, ಕಾರ್ಯದಶರ್ಿಯಾಗಿ ನಾರಾಯಣ ಇಂಗಳಗಿ, ಖಜಾಂಚಿ ಡಿ.ಸತೀಶ್, ಉಪ ಕಾರ್ಯದಶರ್ಿ ಎಂ.ಪ್ರಸನ್ನ, ನಿರ್ದೇಶಕರಾಗಿ ಪಿ.ಮಹಾಬಲಿ, ಅನಿಲ್ಕುಮಾರ್, ಕೆ.ಆಂಜನೇಯಲು, ಕೆ.ನಾಗರಾಜ, ವೈ.ಯನ್ನಪ್ಪ, ಎಂ.ಮಲ್ಲಿಕಾಜರ್ುನ, ಕೆ.ರಾಘವೇಂದ್ರ, ಸಲಹಾ ಸಮಿತಿ ಸದಸ್ಯರಾಗಿ ಕೆ.ಚಿದಾಂಬರಪ್ಪ, ಪಿ.ಈರಣ್ಣ, ಕೆ.ಪಾಂಡುರಂಗ, ಕೆ.ಲಕ್ಷ್ಮಿನಾರಾಯಣ, ಪಿ.ನಾಗಭೂಷಣ, ಎನ್.ಲಿಂಗಪ್ಪ ಆಯ್ಕೆಗೊಂಡರು.  ಪಿ.ಮಹಾಬಲಿ ಪ್ರಾಥರ್ಿಸಿದರು. ಆರ್.ತಿರುಮಲದೇವರಾಯ ಸ್ವಾಗತಿಸಿದರು, ಖಜಾಂಚಿ ಡಿ.ಸತೀಶ್ ಲೆಕ್ಕಪತ್ರ ಮಂಡಿಸಿದರು. ಕಾರ್ಯದಶರ್ಿ ಇಂಗಳಗಿ ನಾರಾಯಣಪ್ಪ ನಿರೂಪಿಸಿದರು. ಮುಖಂಡರಾದ ಬಿ.ಗೋಪಾಲಪ್ಪ, ಪಿ.ವೆಂಕೋಬಣ್ಣ, ಡಿ.ಶ್ರೀನಿವಾಸ್, ಎನ್.ಲಿಂಗಪ್ಪ, ಕೆ.ಚಿದಾಂಬರಪ್ಪ, ಕೆ.ಶಂಕರ್, ಎಂ.ಪ್ರಸನ್ನ, ಕೆ.ಅನಿಲ್ಕುಮಾರ್, ಭವ್ಯಾ, ವಿದ್ಯಾ, ಡಿ.ಪುಷ್ಪಲತಾ, ರೂಪಕಲಾ, ಅಂಬುಜಮ್ಮ, ಕೆ.ಭಾಗ್ಯಲಕ್ಷ್ಮಿ ಸೇರಿ ಬಲಿಜ ಸಮಾಜದವರು ಉಪಸ್ಥಿತರಿದ್ದರು.