ಉಚಿತ ವಿದ್ಯಾಥಿ ನಿಲಯಕ್ಕೆ ಅರ್ಜಿ ಆಹ್ವಾನ

ಧಾರವಾಡ : ಇಲ್ಲಿಗೆ ಹತ್ತಿರದಲ್ಲಿರುವ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿರುವ 'ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳಮಠ'ದಲ್ಲಿ ನಡೆಸುತ್ತಿರುವ ಬಡ ಜಂಗಮ ಮಕ್ಕಳ ಉಚಿತ ವಿದ್ಯಾಥರ್ಿ ನಿಲಯಕ್ಕೆ 2019-20ನೇ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಅಜರ್ಿಗಳನ್ನು ಅಹ್ವಾನಿಸಲಾಗಿದೆ.

  ಇಲ್ಲಿ ಸೇರಬಯಸುವ ವಿದ್ಯಾಥರ್ಿಗಳು ಕನರ್ಾಟಕದ ಯಾವುದೇ ಜಿಲ್ಲೆಯಲ್ಲಿರುವ ಸುಸಂಸ್ಕೃತ ಬಡ ಜಂಗಮ (ವೀರಮಹೇಶ್ವರ)  ಕುಟುಂಬಗಳಿಗೆ ಸೇರಿದವರಾಗಿರಬೇಕು. ಪ್ರಾಥಮಿಕ 6ನೇ ತರಗತಿಯಿಂದ ಮುಂದಿನ ತರಗತಿಯ ಶಿಕ್ಷಣದ ವ್ಯಾಸಂಗ ಮುಂದುವರೆಸಲು ಇಚ್ಚಿಸುವ ವೀರಶೈವ ಬಡ ಜಂಗಮ ವಿದ್ಯಾಥರ್ಿಗಳು ಪ್ರವೇಶ ಬಯಸಿ ಅಜರ್ಿ ಸಲ್ಲಿಸಬಹುದಾಗಿದೆ. 

     ಶ್ರೀಮಠದಲ್ಲಿ ಸುಸಜ್ಜಿತ ವಿದ್ಯಾಥರ್ಿನಿಲಯವಿದ್ದು, ಉಚಿತ ವಸತಿ ಹಾಗೂ ಪ್ರಸಾದ(ಊಟ)ದ ವ್ಯವಸ್ಥೆಯಿದೆ. ಮಠದಲ್ಲಿರುವ ಶ್ರೀಮದ್ ವೀರಶೈವ ಸಂಸ್ಕೃತ ವೇದ ಪಾಠಶಾಲೆಯ ಮೂಲಕ ಧಾಮರ್ಿಕ, ವೈದಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ನೀಡಲಾಗುವುದು. ಜೊತೆಗೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ನೀಡಿಕೆಗೂ ವ್ಯವಸ್ಥೆ ಮಾಡಲಾಗುವುದು. ವಿದ್ಯಾಥರ್ಿಗಳಿಗೆ ಹೆಚ್ಚುವರಿಯಾಗಿ ಜ್ಯೋತಿಷ್ಯಶಾಸ್ತ್ರ, ಯೋಗಶಿಕ್ಷಣ, ಆಧ್ಯಾತ್ಮಿಕ ಚಿಂತನೆ ಸೇರಿದಂತೆ ವಿಭಿನ್ನ ವಿಶೇಷ ಕಲಿಕಾ ವರ್ಗಗಳನ್ನೂ ಸಹ ನಡೆಸಲಾಗುತ್ತಿದೆ.

    ಉಗರಗೋಳದ ಉಚಿತ ವಿದ್ಯಾಥರ್ಿ ನಿಲಯಕ್ಕೆ ಸೇರಬಯಸುವ ವಿದ್ಯಾಥರ್ಿಗಳು ತಮ್ಮ ಪೂರ್ಣಹೆಸರು, ಜನ್ಮದಿನಾಂಕ, ಜನ್ಮಸ್ಥಳ, ಕಲಿಯುತ್ತಿರುವ ವರ್ಗ, ಕುಟುಂಬದ ವಾಷರ್ಿಕ ಆದಾಯ, ತಂದೆಯ ಹೆಸರು, ತಾಯಿಯ ಹೆಸರು, ಪೂರ್ಣ ಅಂಚೆ ವಿಳಾಸ ಸೇರಿದಂತೆ ವಿವಿಧ ಪೂರಕ ಮಾಹಿತಿಯೊಂದಿಗೆ ಅಜರ್ಿ ಸಲ್ಲಿಸಬೇಕು. ಕಲಿತ ಶಾಲೆಯ ಮುಖ್ಯಾಧ್ಯಾಪಕರಿಂದ ಹಾಗೂ ಸ್ವಗ್ರಾಮದ ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ವಿದ್ಯಾಥರ್ಿಯ ನಡತೆ ಕುರಿತು ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರಗಳನ್ನು ಅಜರ್ಿಗೆ ಲಗತ್ತಿಸಬೇಕು.

    ಆಸಕ್ತ ವಿದ್ಯಾಥರ್ಿ ಪಾಲಕರು ಇಲ್ಲವೇ ಪೋಷಕರು ಎಲ್ಲ ಮಾಹಿತಿಯೊಂದಿಗೆ 'ಶ್ರೀವೇದಮೂತರ್ಿ ಸಿದ್ದೇಶ್ವರಸ್ವಾಮಿ ಹಿರೇಮಠ, ಧರ್ಮದಶರ್ಿಗಳು, ಶ್ರೀಗುರುಶಿವಪ್ಪಯ್ಯ ಶಿವಯೋಗಿ ಏಜ್ಯುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ ಉಗರಗೋಳ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರಿಗೆ ಮೇ 24ರ ಒಳಗಾಗಿ ಅಜರ್ಿಸಲ್ಲಿಸಿ, ತಮ್ಮ ಮಕ್ಕಳೊಂದಿಗೆ ವಿದ್ಯಾಥರ್ಿ ಪಾಲಕರು ಇಲ್ಲವೇ ಪೋಷಕರು ತಮ್ಮ ಸ್ವಂತ ಖಚರ್ಿನಲ್ಲಿ ಮೇ 26 ರಂದು (ರವಿವಾರ) ಮುಂಜಾನೆ 11 ಗಂಟೆಗೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಉಗರಗೋಳದ ಶ್ರೀಮಠದಲ್ಲಿ ಜರುಗುವ ಸಂದರ್ಶನಕ್ಕೆ ಹಾಜರಾಗಬೇಕು. ಈ ಉಚಿತ ವಿದ್ಯಾಥರ್ಿ ನಿಲಯದ ಕುರಿತು ಮಾಹಿತಿಗೆ ಮೊಬೈಲ್: 9341351399, 9663511022, 9845480675, 9686208575, 7349551066, 9845907155, 9945801422 ಸಂಖ್ಯೆ ಮೂಲಕ ಸಂಪಕರ್ಿಸಬಹುದಾಗಿದೆ.

ಭಗವಾನ ಗೌತಮ ಬುದ್ಧರ 2563ನೇ ಜಯಂತಿ ಆಚರಣೆ