ಶಿಶುನಾಳ ಶರೀಫರ ಜಯಂತಿ ಕಾರ್ಯಕ್ರಮ


ವಿಜಯಪುರ 04:  ಜಾತಿಧರ್ಮಗಳ ಮಧ್ಯೆಯೇ ನಲುಗಿ ಪರಸ್ಪರ ಕಚ್ಚಾಡುತ್ತಿರುವ ಇಂದಿನ ಸಮಾಜಕ್ಕೆ ಗೋವಿಂದಭಟ್ಟರ ಹಾಗೂ ಶರೀಫರ ಸಂಬಂಧದ ಬಗ್ಗೆ ತಿಳಿಸಿಹೇಳಬೇಕಾಗಿದೆ. ಭಾವೈಕ್ಯತೆಯ ಹರಿಕಾರರಾಗಿ ಹಿಂದು-ಮುಸ್ಲಿಂ ಧರ್ಮಗಳ ಕೊಂಡಿಯಾಗಿ ಅಮೂಲ್ಯ ಸಂದೇಶ ಸಾರಿದ ಗುರು-ಶಿಷ್ಯರು ಸದಾ ಸ್ಮರಣೀಯರು ಎಂದು ವಿಜಯಪುರ ತಾಲೂಕಾ ಕಸಾಪ ಅಧ್ಯಕ್ಷ ಪ್ರೊ. ಯು.ಎನ್. ಕುಂಟೋಜಿ ಅಭಿಪ್ರಾಯಪಟ್ಟರು. ಅವರು ಜಿಲ್ಲಾ ಕಸಾಪ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂತ ಶಿಶುನಾಳ ಶರೀಫರ ಪುಣ್ಯತಿಥಿ ಹಾಗೂ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾಜರ್ುನ ಮಲ್ಲಿಕಾಜರ್ುನ ಯಂಡಿಗೇರಿ ಮಾತನಾಡಿ, ಶರೀಫ ಸಾಹೇಬರ ತತ್ವ ಪದಗಳಲ್ಲಿ ಅತ್ಯದ್ಭುತ ಸಾರ ಅಡಗಿದೆ. ಅವರ ಪದಗಳ ಸಂದೇಶವನ್ನು ಯುವಜನತೆಗೆ ತಲುಪಿಸಬೇಕಾಗಿದೆ. ಇಂದಿನ ಈ ಆಧುನಿಕ ಜಗತ್ತಿನ ಪೀಳಿಗೆಗೆ ಪಾಶ್ಚಾತ್ಯ ಸಂಸ್ಕೃತಿಯಲ್ಲಿಯೇ ಮುಳುಗಿ ಭಾರತಿಯತೆಯನ್ನು ಮರೆಯುವ ಜನರಿಗೆ ಶರೀಫರ ಪ್ರತಿ ಪದಗಳನ್ನು ತಿಳಿಸಿ ಹೇಳಬೇಕಾಗಿದೆ. ಇಂತಹ ಮಹಾತ್ಮರು ಅಪರೂಪಕ್ಕೆ ಜನಿಸುವಂತಹ ಪುಣ್ಯಾತ್ಮರು ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದಶರ್ಿ ಎಸ್.ಎಸ್. ಖಾದ್ರಿ ಇನಾಮದಾರ, ಪ್ರೊ. ರಾಜೇಂದ್ರಕುಮಾರ ಬಿರಾದಾರ, ಪ್ರೊ. ಬಸವರಾಜ ಕುಂಬಾರ, ಪ್ರೊ. ಶರಣಗೌಡರ ಪಾಟೀಲ, ಪ್ರೊ. ಸುಭಾಸಚಂದ್ರ ಕನ್ನೂರ, ಸೋಮಶೇಖರ ಕುಲರ್ೆ, ಮಹಾದೇವ ಕುರೆ, ಮಯೂರ ತಿಳಗುಳಕರ, ಯುವರಾಜ ಚೋಳಕೆ, ಶಿವಲಿಂಗ ಕಿಣಗಿ ಉಪಸ್ಥಿತರಿದ್ದರು.