ಸಮಾನತೆಗೆ ಪರಿಪೂರ್ಣ ಶಿಕ್ಷಣ ಅಗತ್ಯ: ಸಾವಕಾರ

ರಾಣೇಬೆನ್ನೂರು 30: ಸಮಾಜದಲ್ಲಿ ಸಮಾನತೆ ಸಾಧಿಸಬೇಕಾದರೆ ಶಿಕ್ಷಣದಲ್ಲಿ ಪರಿಪೂರ್ಣತೆ ಹೊಂದಬೇಕು ಇದರಿಂದಲೇ ಎಲ್ಲ ಅರ್ಹತೆಗಳು ದಕ್ಕಿ ಭವಿಷ್ಯದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದು ಎಂದು ರಾಣೇಬೆನ್ನೂರು ತಾಲೂಕಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಸ ಸಾವಕಾರ ಹೇಳಿದರು. 

ಅವರು ನಗರ ಹೊರವಲಯದ  ಆರ್.ಟಿ.ಇ.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದ ಸಾವಕಾರ ಸಭಾಭವನದಲ್ಲಿ ನಡೆದ  ವಾಷರ್ಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.  

ಶಿಕ್ಷಣ ನಿಂತ ನೀರಲ್ಲ.  ಅದು ಸದಾ ಹರಿಯುವ ಗಂಗೆ. ವಿದ್ಯಾಥರ್ಿಗಳು ಅದರತ್ತ ಗಮನ ಹರಿಸಿದರೆ ಅದು ನಮಗೆ ಸಹಕಾರ ನೀಡುತ್ತದೆ.  ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕಾದೆ ಪರಿಶ್ರಮ ಪಡಬೇಕಾದ ಅಗತ್ಯವಿದೆ ಎಂದ ಸಾವಕಾರ ಅವರು ಯುವ-ಜನತೆ ಶಿಕ್ಷಣದ ಜೊತೆ-ಜೊತೆಗೆ ತಮ್ಮ ವ್ಯಕ್ತಿತ್ವವನ್ನು ನಿರೂಪಿಸಿಕೊಳ್ಳಲು ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಾದ ಅಗತ್ಯವಿದೆ ಎಂದರು.  

ಮುಖ್ಯ ಅತಿಥಿಯಾಗಿದ್ದ ಹೊನ್ನಾಳಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಸಹ ಪ್ರಾಧ್ಯಾಪಕ ಪ್ರೋ|| ಡಿ.ಸಿ.ಪಾಟೀಲ ಅವರು ಆಧುನಿಕ ಬದುಕಿನಲ್ಲಿ ಇಂದು ಹೊಸ-ಹೊಸ ಆವಿಷ್ಕಾರಗಳು ಬರುತ್ತಲಿವೆ. ಅದರ ಬಗ್ಗೆ ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡುವುದರ ಮೂಲಕ ಸಮರ್ಥವಾಗಿ ಶಿಕ್ಷಣವನ್ನು ಪೂರೈಸುವ ನಿಟ್ಟಿನಲ್ಲಿ ವಿಧ್ಯಾಥರ್ಿಗಳು ಪರಿಶ್ರಮದಿಂದ ಮುಂದೆ ಬರಬೇಕಾದ ಅಗತ್ಯವಿದೆ ಎಂದರು. 

ಕಾಲೇಜು ಪ್ರಾಚಾರ್ಯ ಪ್ರೊ|| ಎಫ್. ಎಚ್. ಮಾಚೇನಹಳ್ಳಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪಿ.ಎಚ್.ಡಿ ಪದವಿ ಪಡೆದ ಡಾ|| ಪಿ. ಪಿ. ಕೊಪ್ಪದ, ಬಿ.ಎಸ್ಸಿ ಯಲ್ಲಿ ಕ.ವಿ.ವಿ. ಗೆ 5ನೇಯ ರ್ಯಾಂಕ್ ಗಳಿಸಿದ ದರ್ಶನ ಎಚ್. ಮುಡದೇವಣ್ಣನವರ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮೆರೆದ  ರಜನಿ ಕರಿಗಾರ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.  ಸಮ್ಮೇಳದ ಅಂಗವಾಗಿ ವಿವಿಧ ಸ್ಪದರ್ೆಗಳನ್ನು ಆಯೋಜಿಸಲಾಗಿತ್ತು.  ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.  

  ರಜನಿ ಸಂಗಡಿಗರ ಪ್ರಾಥರ್ಿಸಿದರು. ಪ್ರೊ|| ಆರ್. ಡಿ. ನಾಯಕ ಸ್ವಾಗತಿಸಿ, ಪ್ರೊ|| ಸಿ. ಎ. ಹರಿಹರ ಪರಿಚಯಿಸಿದರು. ಡಾ|| ಓ. ಎಫ್. ದ್ಯಾವನಗೌಡರ ವರದಿ ವಾಚಿಸಿದರು. ಫಕ್ಕೀರಮ್ಮ ಕೊಳ್ಳೇರ ನಿರೂಪಿಸಿ, ಶ್ರೀಧರ ಕುಲಕಣರ್ಿ ವಂದಿಸಿದರು.