ರನ್ನ ಜನ್ಮಸ್ಥಳ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೆಯಾದ ಹೆಸರುವಿದೆ: ಲೋಕಾಪೂರ

ಲೋಕದರ್ಶನ ವರದಿ

ಮುಧೋಳ17: ದೇಶದ ಕಲುಷಿತ ರಾಜಕಾರಣದಲ್ಲಿ ಮಾದರಿ ರಾಜಕಾರಣಿಗಳು ಸಿಗುವುದು ಬಹಳ ಅಪರೂಪ,ದೇಶಪ್ರೇಮ,ಸಾಮಾಜಿಕ ಕಳಕಳಿ,ಜನಮನ ಕಲ್ಯಾಣವೇ ತಮ್ಮ ಕಲ್ಯಾಣವೆಂದು ತಿಳಿದುಕೊಂಡಿದ್ದ ಭಾರತದ ಪ್ರಧಾನಿಯಾಗಿದ್ದ ದಿ.ಲಾಲಬಹಾದ್ದೂರ ಶಾಸ್ತ್ರಿಜೀ,ಕನರ್ಾಟಕದ ಮುಖ್ಯಮಂತ್ರಿಗಳಾಗಿದ್ದ ದಿ.ಎಸ್.ಆರ್.ಕಂಠಿ ಅವರು ಇಂದು ಸ್ಮರಣಾರ್ಹರು, ಅವರ ಬದುಕು ಇಂದಿನ ರಾಜಕಾರಣಿಗಳಿಗೆ ಕೈಗನ್ನಡಿಯಾಗಿದೆ ಎಂದು ಧಾರವಾಡದ ಹಿರಿಯ ಸಾಹಿತಿ ಡಾ.ಸಂಗಮನಾಥ ಲೋಕಾಪೂರ ಹೇಳಿದರು.

    ಬಾಗಲಕೋಟ ಬಿ.ವ್ಹಿ.ವ್ಹಿ ಸಂಘದ ಸ್ಥಳೀಯ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾಥರ್ಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ, ಬೀಳ್ಳೂರು ಮಹಾಸ್ವಾಮಿಜೀಯವರ ಹೆಸರಿನಲ್ಲಿ ಪ್ರಾರಂಭಿಸಲಾದ ಬಸವೇಶ್ವರ ವಿದ್ಯಾವರ್ಧಕ ಸಂಘವು ಇನ್ನೂರುಕ್ಕಿಂತ ಹೆಚ್ಚು ಶಾಲಾ-ಕಾಲೇಜುಗಳನ್ನು ಹೊಂದಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸಹಸ್ರಾರು ವಿದ್ಯಾಥರ್ಿಗಳು ದೇಶ-ವಿದೇಶಗಳಲ್ಲಿ ತಮ್ಮ ಸೇವೆ ಸಲ್ಲಿಸುವ ಮೂಲಕ ಸಂಸ್ಥೆಯ ಹೆಸರನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

   ರನ್ನನ ಜನ್ಮಸ್ಥಳ ಮುಧೋಳ ತಾಲೂಕು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೆಯಾದ ಹೆಸರು ಇದೆ. ಇಲ್ಲಿಯ ಸಾಹಿತಿಗಳ ಒಡನಾಟ,ಜನರ ಸ್ನೇಹದ ಕುರಿತುಗುಣಗಾನ ಮಾಡಿದರು. ಇಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ತಾವುಗಳು ಅಧ್ಯಯನ ಮಾಡುತ್ತಿರುವುದು ಪುಣ್ಯವಂತರು ಎಂದರು.

   ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ ಅಧ್ಯಕ್ಷತೆವಹಿಸಿ ಮಾತನಾಡಿ, ಮಹಾವಿದ್ಯಾಲಯದ ವಿದ್ಯಾಥರ್ಿಗಳು ಪ್ರತಿಭಾವಂತರಾಗಿದ್ದು ಕ್ರೀಡಾ ಮತ್ತುಸಾಂಸ್ಕೃತಿಕ ಚಟುವಟಿ ಕೆಗಳಲ್ಲಿ ಪಾಲ್ಗೊಂಡು ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಮಹಾವಿದ್ಯಾಲಯದ ಕೀತರ್ಿಯನ್ನು ಹೆಚ್ಚಿಸಿದ್ದಾರೆಂದು ಹೇಳಿದರು. 

    ಅತಿಥಿ ಗಣ್ಯರು ಮಹಾವಿದ್ಯಾಲಯದ ಸೃಜನ ವಾಷರ್ಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು,ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾಥರ್ಿಗಳನ್ನು, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿಗಳನ್ನು ಮಹಾವಿದ್ಯಾಲಯದ ವತಿಯಿಂದ ಬಹುಮಾನ ನೀಡಿ,ಸನ್ಮಾನಿಸಲಾಯಿತು. ಅಂತಿಮ ವರ್ಷದ ಪದವಿ ವಿದ್ಯಾಥರ್ಿಗಳು ತಮ್ಮ ಅನಸಿಕೆಯನ್ನು ಹಂಚಿಕೊಂಡರು.

    ಸಾಂಸ್ಕೃತಿಕ ವಿಭಾಗದ ಕಾಯರ್ಾಧ್ಯಕ್ಷೆ ಪ್ರೊ.ಜಿ.ಬಿ.ಅಣೆಪ್ಪನವರ, ಕ್ರೀಡಾ ವಿಭಾಗದ ಕಾಯರ್ಾಧ್ಯಕ್ಷ ಡಾ.ಎಂ.ಆರ್. ಜರಕುಂಟಿ,ದೈಹಿಕ ನಿದರ್ೇಶಕಪ್ರೊ.ಎ.ವೈ.ಮುನ್ನೊಳ್ಳಿ,ವಿದ್ಯಾಥರ್ಿ ಪ್ರಧಾನ ಕಾರ್ಯದಶರ್ಿ ನೇಹಾ ಆರ್.ಶಾಹಾ ವೇದಿಕೆ ಮೇಲೆ ಉಪಸ್ಥಿತರಿದ್ದರು.

   ಪ್ರೊ.ಜಿ.ಬಿ.ಅಣೆಪ್ಪನವರ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಡಾ.ಎಂ.ಆರ್.ಜರಕುಂಟಿ ವರದಿ ವಾಚನ ಮಾಡಿದರು. ಪ್ರೊ.ವ್ಹಿ.ಎಂ.ಕಿತ್ತೂರ,ಪ್ರೊ.ಕಾವ್ಯಾ ಸೂಳಿಕೇರಿ,ಪ್ರೊ.ರೂಪಾ ಫಡತಾರೆ ನಿರೂಪಿಸಿದರು. ಪ್ರೊ.ಎ.ವೈ.ಮುನ್ನೊಳ್ಳಿ ವಂದಿಸಿದರು