ಮತದಾನ ಮಾಡಿ ಯೋಗ್ಯರನ್ನು ಚುನಾಯಿಸಿ: ಡಾ.ಚಂದ್ರಶೇಖರ ಶ್ರೀ

ಲೋಕದರ್ಶನ ವರದಿ

ಧಾರವಾಡ, 26 : ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯವಾಗುವುದು ಭಾರತದ ಸಮಸ್ತ ಅರ್ಹ ಮತದಾರರು ಮರೆಯದೇ ಮತದಾನ ಮಾಡಿ ಯೋಗ್ಯರನ್ನು ಚುನಾಯಿಸಿದಾಗ ಮಾತ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತೀ 5 ವರುಷಗಳಿಗೊಮ್ಮೆ ಮತದಾರರಿಗೆ ಪ್ರಾಪ್ತವಾಗುವ ಮತಚಲಾವಣೆಯ ಪರಮಾಧಿಕಾರವನ್ನು ದೇಶದ ಪ್ರತಿಯೊಬ್ಬ ಪ್ರಜೆ ಪ್ರಜ್ಞಾಪೂರ್ವಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಸಮಗ್ರತೆಯನ್ನು ರಕ್ಷಿಸುವಲ್ಲಿ ಲೋಕಸಭಾ ಚುನಾವಣೆ ಬಹಳ ಮಹತ್ವದ ಆಯಾಮವಾಗಿದೆ. ಅತ್ಯಂತ ನಿಖರ ನೆಲೆಯಲ್ಲಿ ಜನಕಲ್ಯಾಣವನ್ನು ಬಯಸುವ ಜನಸೇವೆಗೆ ತೆರೆದುಕೊಳ್ಳುವ, ಜೊತೆಗೆ ಭಾರತದ ಘನತೆ, ಸಮಗ್ರತೆ ಹಾಗೂ ವಿಕಾಸವನ್ನು ಬಯಸುವ ಯೋಗ್ಯ ಅಭ್ಯಥರ್ಿಗಳಿಗೆ ಮರೆಯದೇ ಮತಚಲಾವಣೆ ಮಾಡಬೇಕೆಂದು ಅವರು ಹೇಳಿದರು.

    ಮತ ಮಾರಿಕೊಳ್ಳಬೇಡಿ :  ಪ್ರಜಾಪ್ರಭುತ್ವದ ಶ್ರೇಷ್ಠತೆಯನ್ನು ಅರಿತು ಕ್ಷಣಿಕ ಸುಖದ ಆಸೆಗಾಗಿ, ತಮಗೆ ಪ್ರಾಪ್ತವಾದ ಮತವನ್ನು ಎಂದಿಗೂ ಮಾರಿಕೊಳ್ಳಬಾರದು. ಚುನಾವಣೆಯ ಸಂದರ್ಭದಲ್ಲಿ ನೈಜವಾಗಿ ಗೆಲುವು ಸಾಧಿಸಲು ಸ್ಪಧರ್ೆಯಲ್ಲಿರುವ ಅಭ್ಯಥರ್ಿಗಳು ವಿಭಿನ್ನ ತಂತ್ರಗಾರಿಕೆಯನ್ನು ರೂಪಿಸಿ ಮತದಾರರ ಮುಂದೆ ಅನೇಕ ಆಮಿಷಗಳನ್ನು ಒಡ್ಡುತ್ತಾರೆ. 

    ರಾಷ್ಟ್ರದ ಅಭ್ಯುದಯದ ಹಿನ್ನೆಲೆಯಲ್ಲಿ ಎದುರಾಗುವ ಎಲ್ಲ ಆಮಿಷಗಳನ್ನು ತಳ್ಳಿಹಾಕಿ ತಮ್ಮದೇ ಆದ ನಿಧರ್ಾರಗಳಿಂದ ಯೋಗ್ಯ ಅಭ್ಯಥರ್ಿಗಳಿಗೆ ತಮ್ಮ ಓಟು ಹಾಕಬೇಕೆಂದು ಅವರು ಸಲಹೆ ಮಾಡಿದರು. 

ಶೇ.100 ಮತದಾನವಾಗಲಿ: 'ಯಾರಿಗೆ ಓಟು ಹಾಕಿದರೆ ಏನು ಬರುತ್ತೆ? ನಮ್ಮ ಪಾಡು ನಮಗೆ ತಪ್ಪಿದ್ದಲ್ಲ..' ಎಂಬೆಲ್ಲ ಉದಾಸೀನ ಋಣಾತ್ಮಕ ನಿಲುವುಗಳಿಂದ ಹೊರಬಂದು ಪ್ರತಿಯೊಬ್ಬರೂ ಮತದಾನದ ದಿನ ಮರೆಯದೇ ಮತದಾನ ಕೇಂದ್ರಕ್ಕೆ ಹೋಗಿ ತಪ್ಪದೇ ಮತದಾನ ಮಾಡಲು ರೂಢಿಸಿಕೊಳ್ಳಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲೆಡೆ ಶೇಕಡಾ 100 ರಷ್ಟು ಮತದಾನ ಆಗುವಂತೆ ಭಾರತದ ಸಮಸ್ತ ಅರ್ಹ ಮತದಾರರು ಆಸಕ್ತಿವಹಿಸಬೇಕೆಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.