ಲೋಕದರ್ಶನವರದಿ
ಹುಬ್ಬಳ್ಳಿ 28: ಸುನಾದ ಗಾನಸುಧ ವತಿಯಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಮಾ.30 ರಂದು ಸಂಜೆ 6 ಗಂಟೆಗೆ ಕೋರ್ಟ ಸರ್ಕಲ್ ಎನ್ಎಂಆರ್ ಸ್ಕಾನ ಸೆಂಟರ ಹತ್ತಿರ, ಮಹಾರಾಷ್ಟ್ರ ಮಂಡಳ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನ ವಿದೂಷಿ ಸುಮಿತ್ರಾ ನಿತಿನ ಅವರು ಗಾಯನ ಪ್ರಸ್ತುತಪಡಿಸುವರು. ವಿದೂಷಿ ಚಾರುಲತಾ ರಾಮಾನುಜಂ ಅವರು ವಯೋಲಿನದಲ್ಲಿ, ವಿದ್ವಾನ ಶ್ರೀನಿವಾಸ ಮೃದಂಗದಲ್ಲಿ ಸಾತ್ ನೀಡಲಿದ್ದಾರೆ ಎಂದು ಕಾರ್ಯದಶರ್ಿ ಲತಾ ಜಮಖಂಡಿ ತಿಳಿಸಿದ್ದಾರೆ.
ಬೆಂಗಳೂರಿನ ವಿದೂಷಿ ಸುಮಿತ್ರಾ ನಿತಿನ ಅವರು ಕನರ್ಾಟಕ ಶಾಸ್ತ್ರೀಯ ಸಂಗೀತದಲ್ಲಿ ಶ್ರೇಷ್ಟ ಗಾಯಕರಾಗಿದ್ದಾರೆ. ಸ್ವತಃ ಭರತನಾಟ್ಯ ಕಲಾವಿದೆ, ಭರತನಾಟ್ಯವನ್ನು ಕಲಿಸುವ ಶಿಕ್ಷಕಿ. ಖ್ಯಾತ ಗಾಯಕರಾದ ಅನಂತಲಕ್ಷ್ಮೀ ಸಡಗೋಪನ ಅವರ ಮೊಮ್ಮಗಳು. ನೀಲಾ ರಾಮಗೋಪಾಲ ಮಾರ್ಗದರ್ಶನದಲ್ಲಿ ಸಂಗೀತ ಕಲಿತಿದ್ದಾರೆ. ಆಕಾಶವಾಣಿ ಗ್ರೇಡೆಡ್ ಕಲಾವಿದರು. ನಾಟ್ಯಶ್ರುತಿ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ. ಸುಮಿತ್ರಾ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಕಾರ್ಯ ಗುರುತಿಸಿ ಚೆನೈನ ರಾಮು ಎಂಡೋವಮೆಂಟ್ಸ ಅವರು ವೇದವಳ್ಳಿ ಮೆಮೋರಿಯಲ್ ಹೇರಿಟೇಜ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನರ್ಾಟಕ ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸಬೇಕು ಹಾಗೂ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕು ಎಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಅವರು ವಿನಂತಿಸಿದ್ದಾರೆ.