ಗಮನ ಸೆಳೆದ ರೋಮಾಂಚಕ ಕೆಟಿಎಂಬೈಕ್ ಸಾಹಸ

ಲೋಕದರ್ಶನವರದಿ

ಧಾರವಾಡ28: ಮುಂಚೂಣಿಯ ರೇಸಿಂಗ್ ಬೈಕುಗಳ ಬ್ರಾಂಡ್ಕೆಟಿಎಂ ನಗರದಲ್ಲಿ ಶನಿವಾರ ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಿತ್ತು.

ವೃತ್ತಿಪರ ಸಾಹಸಿ ಬೈಕ್ಚಾಲಕರು ಮೈನವಿರೇಳಿಸುವಂತೆ ಬೈಕ್ ಸಾಹಸ ಮತ್ತು ಟ್ರಿಕ್ಗಳನ್ನು ಪ್ರದಶರ್ಿಸಿದರು.ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಡೆದ ಈ ಸಾಹಸ ಪ್ರದರ್ಶನಕ್ಕೆ ನೂರಾರು ಜನರು ಸಾಕ್ಷಿಯಾದರು. ಪ್ರೇಕ್ಷಕರು ಉಸಿರು ಬಿಗಿಹಿಡಿಯುವಂತೆ ಕೆಟಿಎಂಡ್ಯೂಕ್ ಬೈಕ್ಗಳಲ್ಲಿ ಚಾಲಕರು ಸಾಹಸಗಳನ್ನು ಸಾದರ ಪಡಿಸಿದರು.ಕೆಟಿಎಂ ಬೈಕ್ ಸಾಹಸ ನೋಡಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿತ್ತು.

"ಕೆಟಿಎಂ ಬ್ರಾಂಡ್ಅಧಿಕ ಸಾಮಥ್ರ್ಯದ ರೇಸಿಂಗ್ ಬೈಕ್ಗಳಿಗೆ ಹೆಸರಾಗಿದೆ. ಕೆಟಿಎಂ ಬೈಕ್ಗಳು ಚಾಲಕರಿಗೆ ಯಾವ ರೀತಿಯ ರೋಮಾಂಚಕ ಅನುಭವ ನೀಡಬಹುದು ಎನ್ನುವುದನ್ನು ಇಂಥ ಪ್ರದರ್ಶನದ ಮೂಲಕ ಸಾಬೀತು ಪಡಿಸಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ವೃತ್ತಿಪರ ಸಾಹಸಿ ಸವಾರರು ಈ ಪ್ರದರ್ಶನ ನೀಡುತ್ತಿದ್ದಾರೆ" ಎಂದು ಬಜಾಜ್ ಆಟೋ ಲಿಮಿಟೆಡ್ನ ಪ್ರೊಬೈಕಿಂಗ್ ವಿಭಾಗದ ಉಪಾಧ್ಯಕ್ಷರಾದ ಸುಮೀತ್ ನಾರಂಗ್ತಿಳಿಸಿದರು.

      ಇದುವರೆಗೆ ತುಮಕೂರು, ಮಂಗಳೂರು,ಶಿವಮೊಗ್ಗ, ಕಲಬುರಗಿ, ಹುಬ್ಬಳ್ಳಿ, ಹಾಸನ, ಧಾರವಾಡ, ಚಿಕ್ಕಮಗಳೂರು, ಗೋಕಾಕ, ಹೊಸಪೇಟೆ, ಮಂಗಳೂರು, ಉಡುಪಿ, ವಿಜಯಪುರ, ಕೋಲಾರ, ಚೆನ್ನೈ, ಇಂದೋರ್, ಕಂಚಿಪುರ, ಸೇರಿದಂತೆದೇಶದ ವಿವಿಧ ನಗರಗಳಲ್ಲಿ ಕೆಟಿಎಂ ಸಾಹಸ ಪ್ರದರ್ಶನವನ್ನುಆಯೋಜಿಸಲಾಗಿತ್ತು.