ಬಲಿಷ್ಠ ರಾಷ್ಟ್ರ ನಿಮರ್ಾಣಕ್ಕೆ ಮತದಾನ ಮಾಡಿ: ಡಾ. ಪಿಂಜಾರ

ಧಾರವಾಡ 14: ಬಲಿಷ್ಠ ರಾಷ್ಟ್ರ ನಿಮರ್ಾಣಕ್ಕೆ ಪ್ರತಿಯೊಬ್ಬ ನಾಗರಿಕನು ಮತದಾನ ಮಾಡಬೇಕು ಎಂದು ನಗರದ ಹೊರವಲಯದಲ್ಲಿನ ಶಿರಡಿ ನಗರದಲ್ಲಿ ಸಾಯಿ ಐ.ಟಿ.ಐ. ಕಾಲೇಜಿನಲ್ಲಿ ಜಿಲ್ಲಾಡಳಿತ ಹಾಗೂ ವಿಶ್ವಚೇತನ ಎಜ್ಯುಕೇಶನ್ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ಧಾರವಾಡ ಜಿಲ್ಲಾ ಸ್ವೀಪ್ ಅಡಿ ಅಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನದ ವಿಶ್ವಚೇತನ ಎಜ್ಯುಕೇಶನ್ ಸೊಸೈಟಿ ಚೇರಮನ್ ಡಾ.ಸರ್.ಐ.ಎಂ.ಪಿಂಜಾರ ಕರೆ ನೀಡಿದರು.

          ಸಂವಿಧಾನವು ನಮಗೆ ಮತದಾನದ ಹಕ್ಕನ್ನು ನೀಡಿದ್ದು, ಅದನ್ನು ತಪ್ಪದೇ ಚಲಾಯಿಸುವ ಮೂಲಕ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಇದರಿಂದ ದೇಶ ಸದೃಢ ಮತ್ತು ಶುದ್ಧ ಸರಕಾರ ಪಡೆಯಲು ಸಾಧ್ಯವಾಗುತ್ತದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮುಖಾಂತರ ಜಿಲ್ಲಾ ಆಡಳಿತ ಮತದಾನ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ. ಜಿಲ್ಲಾ ಆಡಳಿತಕ್ಕೆ  ಸಾರ್ವಜನಿಕರು ಸಹಕಾರ ನೀಡಬೇಕು. ಒಟ್ಟಾರೆಯಾಗಿ ರಾಜ್ಯದಲ್ಲಿಯೇ ಜಿಲ್ಲೆಯ  ಮತದಾನದ ಪ್ರಮಾಣ ಉತ್ತಮವಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಪಿಂಜಾರ ಹೇಳಿದರು.

     ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ ಅವರು, ಮತಯಂತ್ರ, ವಿ.ವಿ.ಪ್ಯಾಟ್ಗಳು ಚುನಾವಣೆಯ ಸಂದರ್ಭದಲ್ಲಿ ದುರ್ಬಳಕೆ ಆಗದಂತೆ ಚುನಾವಣಾ ಆಯೋಗ ನಿಗಾವಹಿಸಿದೆ. ಅಲ್ಲದೇ ಮತ ಯಂತ್ರಗಳು ಕೈಕೊಟ್ಟಾಗ ಕೂಡಲೇ ಪರಿಣಿತರು ದುರಸ್ತಿ ಮಾಡುವರು. ದುರಸ್ತಿ ಆಗಿದ್ದ ಹಂತದಲ್ಲಿ ಬೇರೆ ಯಂತ್ರವನ್ನು ಬಳಸುವ ಬಗ್ಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುವುದು. ಪ್ರತಿಯೊಂದು ಹಂತದಲ್ಲಿಯೂ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸುವುದರಿಂದ ಮತದಾನಕ್ಕೆ ಅಡ್ಡಿ ಬರಲಾರದು. ಮತದಾರರು ಯಾವುದೇ ತರಹದ ಅನುಮಾನ ಇಲ್ಲದೇ ಮತ ಚಲಾಯಿಸಬಹುದು ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ತಹಶೀಲದಾರ ಪ್ರಕಾಶ ಕುದರಿ, ಸ್ವೀಪ್ ಎಸ್ಎಲ್ಎಮ್ಟಿ ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಂ.ಶೇಖ,  ಜಿ.ಎನ್.ನಂದನ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಎಫ್.ಬಿ.ಕಣವಿ ಮತ್ತು ತಂಡದವರು ಮತದಾನ ಜಾಗೃತಿ ಕುರಿತ ಗೀತೆಗಳನ್ನು ಪ್ರಸ್ತುತಪಡಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಪದ್ಮಜಾ ಮುರನಾಳ ಸ್ವಾಗಿತಿಸಿದರು. ವಿದ್ಯಾ ಕುಲಕಣರ್ಿ ಪ್ರಾಥರ್ಿಸಿದರು. ಲಕ್ಷ್ಮೀ ಬೆನಕಣ್ಣವರ ನಿರೂಪಿಸಿದರು. ಸರಸ್ವತಿ ನಾಝರೆ ವಂದಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾಥರ್ಿಗಳು, ಶಿರಡಿ ನಗರ, ಎಂ.ಎಂ.ಹಿರೇಮಠ ಇನ್ನಿತರ ಬಡಾವಣೆಗಳ ನಾಗರಿಕರು ಉಪಸ್ಥಿತರಿದ್ದರು.