ಧಾರವಾಡ 13: ದಮನಿತ ಮಹಿಳೆಯರು, ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಮತ್ತಿತರ ದುರ್ಬಲ ಸಮುದಾಯಗಳಿಗೆ ಮತದಾನ ಜಾಗೃತಿ ಹಾಗೂ ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇತ್ತಿಚಿಗೆ ಧಾರವಾಡದಲ್ಲಿ ಜರುಗಿತು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿವರ್ಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಡಾ.ಬಿ.ಸಿ. ಸತೀಶ್ ಮಾತನಾಡಿ, ಮತದಾನವು ಸಂವಿಧಾನದತ್ತವಾದ ಹಕ್ಕು ಮತ್ತು ಕರ್ತವ್ಯವಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಒಂದು ಮತದ ಅಧಿಕಾರವಿದೆ.
ಇದು ಬಹಳ ಅಮೂಲ್ಯವಾದ ಮತ್ತು ಪವಿತ್ರವಾದ ಕರ್ತವ್ಯ. ವಿದ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾಯಿಸಿ ವಿವಿಪ್ಯಾಟ್ ಯಂತ್ರದಲ್ಲಿ ನಾವು ಚಲಾಯಿಸಿದ ಮತದ ದೃಢೀಕರಣವನ್ನು ನೋಡಬಹುದು. ಮತದಾನದ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಮತಯಂತ್ರದ ಕಾರ್ಯವಿಧಾನಗಳನ್ನು ಪ್ರತಿಯೊಬ್ಬರು ಪ್ರಾತ್ಯಕ್ಷಿಕೆ ಮೂಲಕ ಅರಿತುಕೊಳ್ಳಬೇಕು ಎಂದರು.
ಸುಮಾರು 350 ಕ್ಕೂ ಹೆಚ್ಚು ಜನ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಮತಯಂತ್ರಗಳ ಬಳಕೆ ಬಗ್ಗೆ ತಿಳಿದುಕೊಂಡರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೆಶಕ ಬಸವರಾಜ ವರವಟ್ಟಿ, ದೇವದಾಸಿ ಪುನರ್ವಸತಿ ಯೋಜನೆಯ ಅಧಿಕಾರಿ ಮಧುಸೂಧನ, ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ನಂದಿನಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.