ಧಾರವಾಡ14: ಭಾರತೀಯರಾದ ನಾವೆಲ್ಲ ಬರುವ ಏ. 23 ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಗಳಲ್ಲಿ ಯಾವುದೇ ಪ್ರಭಾವ,ಪ್ರಲೋಭನೆಗೆ ಒಳಗಾಗದೇ ಸ್ವತಂತ್ರವಾಗಿ ಮತಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಬೇಕು ಎಂದು ಕನ್ನಡದ ಕಬೀರ,ಭಾವೈಕ್ಯತೆಯ ಹರಿಕಾರ ಎಂದೇ ಹೆಸರಾಗಿರುವ ಪದ್ಮಶ್ರೀ ಇಬ್ರಾಹಿಂ ಸುತಾರ ಕರೆ ನೀಡಿದರು.
ಕೆಲಗೇರಿ ರಸ್ತೆಯ ಸಾಯಿನಗರದ ಶಿರಡಿ ಸಾಯಿಬಾಬಾ ಸಂಸ್ಥೆಯಲ್ಲಿ ರಾಮನವಮಿ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಆಧ್ಯಾತ್ಮಿಕ ಪ್ರವಚನ ನೀಡಿದ ಅವರು ,ಬಳಿಕ ಬರುವ ಏ. 23 ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಗಳಲ್ಲಿ ಎಲ್ಲರೂ ಮತ ಚಲಾಯಿಸಿ ಉತ್ತಮ ಮತದಾನ ಪ್ರಮಾಣ ದಾಖಲಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ,ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಬಿ.ಸಿ.ಸತೀಶ, ಶಿರಡಿ ಸಾಯಿಬಾಬಾ ಸಂಸ್ಥೆಯ ಅಧ್ಯಕ್ಷ ಮಹೇಶ ಎಂ.ಶೆಟ್ಟಿ,ಪದಾಧಿಕಾರಗಳಾದ ಉದಯಕುಮಾರ ಶೆಟ್ಟಿ,ವಿಪಿನಾನಂದ ಶೆಟ್ಟಿ ಮತ್ತಿತರರು ಇದ್ದರು.ಎಫ್.ಬಿ.ಕಣವಿ ಮತ್ತು ತಂಡದವರು ಚುನಾವಣಾ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು.