ಧಾರವಾಡ10: ಕಡಿಮೆ ದರಕ್ಕೆ ಚಿನ್ನ ನೀಡುವುದಾಗಿ ಹೇಳಿ 15 ಲಕ್ಷ ದರೋಡೆ ಮಾಡಿಕೊಂಡು ಹೋಗಿದ್ದ ಮೂವರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಇಲ್ಲಿನ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ,ಹುಬ್ಬಳ್ಳಿಯ ಅಫ್ರೋಜಖಾನ್ ಹೊನ್ನಳ್ಳಿ, ಮಹ್ಮದ್ ಅಸ್ಲಂ ಐನಾಪುರಿ ಹಾಗೂ ಆಸೀಫ್ ಕಚ್ಚಿ ಎಂಬುವವರೇ ಬಂಧಿತ ಆರೋಪಿಗಳು. ಇನ್ನೂ ಐವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದರು.
ಚಳ್ಳಕೆರೆಯ ಜೆ.ಆರ್.ರವಿಕುಮಾರ ಎಂಬುವವರಿಗೆ ಕಡಿಮೆ ದರದಲ್ಲಿ ಚಿನ್ನ ಕೊಡಿಸವುದಾಗಿ ನಂಬಿಸಿದ್ದ ಇವರು, ಮೇ.7 ರಂದು ಧಾರವಾಡದಲ್ಲಿ ರವಿಕುಮಾರ ಅವರಿಂದ 15 ಲಕ್ಷ ಬೆದರಿಸಿ ವಸೂಲಿ ಮಾಡಿದ್ದರು. ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಿ ಹಣ ವಸೂಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು.