ಶಿವಾನಂದ ನಗರದಲ್ಲಿ ಮತದಾರರ ಜಾಗೃತಿ

ಧಾರವಾಡ 19: ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕಲ್ಪತರು ಮಹಿಳಾ ಸಂಘದ ಆಶ್ರಯದಲ್ಲಿಂದು ಸಂಜೆ ಶಿವಾನಂದ ನಗರದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಜರುಗಿತು.

ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕೆ.ಎಂ.ಶೇಖ್ ಮಾತನಾಡಿ,  ಬರುವ ಏಪ್ರಿಲ್ 23 ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನದಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಈ ಬಾರಿ ವಿಕಲಚೇತನರು ಹಾಗೂ ಹಿರಿಯ ನಾಗರಿಕ ಮತದಾರರು ಮತಗಟ್ಟೆಗಳಿಗೆ ಬಂದು ಹೋಗಲು ವಿಶೇಷ ಸೌಕರ್ಯ ಕಲ್ಪಿಸಲಾಗಿದೆ. ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ, ಯಾವುದಾದರೂ ಒಂದು ದಾಖಲೆ ತೋರಿಸಿ ಮತಚಲಾಯಿಸಬೇಕು ಎಂದರು.

ಕಲಾವಿದ ಮಹದೇವ ಸತ್ತಿಗೇರಿ ಅವರಿಂದ ನಗೆಹನಿಗಳು,ಎಫ್.ಬಿ.ಕಣವಿ ಹಾಗೂ ತಂಡದ ಸದಸ್ಯರು ಚುನಾವಣಾ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಹುಡೇದಮನಿ, ಜಿ.ಎನ್.ನಂದನ, ಕಲ್ಪತರು ಮಹಿಳಾ ಸಂಘದ ಆರತಿ ಪಾಟೀಲ ಮತ್ತಿತರರು ಇದ್ದರು.