ಧಾರವಾಡ.08: ಬರುವ ಏಪ್ರಿಲ್23 ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನಕ್ಕೆ ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಮತಗಟ್ಟೆ ಅಧಿಕಾರಿಗಳ, ಸಿಬ್ಬಂದಿಗಳು ತರಬೇತಿಯನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು. ಕರ್ತವ್ಯದಲ್ಲಿ ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳದೇ ಮೇಲಾಧಿಕಾರಿಗಳ ಮೂಲಕ ಅಥವಾ ಚುನಾವಣಾ ಆಯೋಗದ ನಿದರ್ೇಶನಗಳನ್ನು ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತ ಚುನಾವಣಾ ಆಯೋಗದ ವೀಕ್ಷಕ ಸಮೀರ್ಕುಮಾರ್ ಬಿಸ್ವಾಸ್ ಹೇಳಿದರು. ಅ
ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿಂದು 71-ಧಾರವಾಡ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳು, ಮತದಾರರ ನೊಂದಣಿ ಅಧಿಕಾರಿಗಳು, ಸೆಕ್ಟರ್ ಮ್ಯಾಜಿಸ್ಟ್ರೇಟರು, ಎಫ್ಎಸ್ಟಿ, ಎಸ್ಎಸ್ಟಿ, ವಿವಿಟಿ ತಂಡಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಮತದಾನದಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಅವರಿಗೆ ಅಗತ್ಯವಿರುವ ವಾಹನ ಸೌಕರ್ಯ, ಗಾಲಿ ಖುಚರ್ಿ, ಬ್ರೈಲ್ಲಿಪಿಯ ಮತಪತ್ರ ಮೊದಲಾದ ಸೌಕರ್ಯಗಳನ್ನು ಕಲ್ಪಿಸಬೇಕು. ಚುನಾವಣಾ ಕರ್ತವ್ಯ ನಿರ್ವಹಣೆಯ ಎಲ್ಲ ನಿಯಮಾವಳಿಗಳನ್ನು ಸಿಬ್ಬಂದಿಗೆ, ಅಧಿಕಾರಿಗಳಿಗೆ ತರಬೇತಿಯ ಮೂಲಕ ಮನದಟ್ಟು ಮಾಡಿಕೊಡಬೇಕು ಎಂದು ಸೂಚಿಸಿದರು.
ಗೊಲ್ಲರಓಣಿ, ಗೋವನಕೊಪ್ಪ ಗ್ರಾಮದ ಮತಗಟ್ಟೆಗಳು, ಹೆಬ್ಬಳ್ಳಿ ಅಗಸಿಯ ಚೆಕ್ಪೋಸ್ಟ್ ಹಾಗೂ ಬಾಸೆಲ್ಮಿಷನ್ ಶಿಕ್ಷಣ ಸಂಸ್ಥೆಯ ಆವರಣದ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರಗಳಿಗೆ ವೀಕ್ಷಕ ಸಮೀರ್ಕುಮಾರ್ ಬಿಸ್ವಾಸ್ ಭೇಟಿ ನೀಡಿದರು.
ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ತಹಶೀಲ್ದಾರ ಪ್ರಕಾಶ ಕುದರಿ, ವೀಕ್ಷಕರ ಸಮನ್ವಯ ಅಧಿಕಾರಿ ಎನ್.ಎಂ. ಭೀಮಪ್ಪ ಮತ್ತಿತರರು ಇದ್ದರು