ಹುಬ್ಬಳ್ಳಿ08: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉತ್ಕೃಷ್ಟ ಸ್ಥಾನವಿದೆ. ಸಂಸ್ಕೃತಿ ಪರಂಪರೆ ಮತ್ತು ಆದರ್ಶಗಳನ್ನು ಬೆಳೆಸಿಕೊಂಡು ಬರುವಲ್ಲಿ ಮಹಿಳೆಯರ ಜವಾಬ್ದಾರಿ ಅತ್ಯಂತ ಹಿರಿದಾದುದೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ನಗರದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ 17ನೇ ವರ್ಷದ ವಾಷರ್ಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಆಧುನಿಕ ಯುಗದಲ್ಲಿ ಮಹಿಳೆ ಎಲ್ಲ ರಂಗಗಳಲ್ಲಿ ಬೆಳೆಯುತ್ತಿರುವುದು ಸಂತೋಷದ ಸಂಗತಿ. ಮಹಿಳೆಯರು ತಮ್ಮ ಸಾಧನೆ ಮತ್ತು ಪ್ರಯತ್ನದಿಂದ ಪುರುಷರಿಗಿಂತಲೂ ಬಲಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಬೆಳವಣಿಗೆಯ ಜೊತೆ ಜೊತೆಗೆ ಕೌಟುಂಬಿಕ ಸ್ವಾಸ್ಥ್ಯವನ್ನು ಕಾಪಾಡುವ ಮತ್ತೊಂದು ಹೊಣೆಗಾರಿಕೆ ಮಹಿಳೆಯರ ಮೇಲಿದೆ.
ವೀರಶೈವ ಧರ್ಮದಲ್ಲಿ ಜಗದ್ಗುರು ರೇಣುಕಾಚಾರ್ಯರು ಧಮರ್ಾಚರಣೆಯಲ್ಲಿ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದನ್ನು ಮರೆಯಲಾಗದು. ಜಗದ್ಗುರು ರೇವಣಸಿದ್ಧರು 12 ಸಾವಿರ ಕನ್ನಿಕೆಯರನ್ನು ಬಲಿಯಿಂದ ಮುಕ್ತಗೊಳಿಸಿದ ಇತಿಹಾಸವಿದೆ. ಧರ್ಮದ ಉತ್ಕೃಷ್ಟ ಸಂಸ್ಕೃತಿ ಸಂಪ್ರದಾಯ, ಪರಂಪರೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸಿಕೊಂಡು ಬರುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದರು.
ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮತ್ತು ಸೂಡಿಯ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನಿತ್ತರು. ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಅಧ್ಯಕ್ಷರಾದ ಇಂದುಮತಿ ಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ, ಹುಬ್ಬಳ್ಳಿ ತಾಲೂಕಾ ಘಟಕದ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಮತ್ತು ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆಯ ಕೇಂದ್ರ ಸಮಿತಿಯಲ್ಲಿ ತೆರವಾದ ಎರಡು ಸ್ಥಾನಗಳಿಗೆ ಬಸವರಾಜ ಸುಳ್ಳದ ಮತ್ತು ಸುವರ್ಣಮ್ಮ ಪುರಾಣಿಕ ಅವರನ್ನು ನಿಯುಕ್ತಿಗೊಳಿಸಿ ರಂಭಾಪುರಿ ಜಗದ್ಗುರುಗಳು ಪ್ರಕಟಪಡಿಸಿದರು. ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಬಳಗದವರಿಂದ ವೇದಘೋಷ ಮತ್ತು ಭಕ್ತಿಗೀತೆ ಜರುಗಿತು. ಶೃತಿ ಭೂಸನೂರಮಠ ಸ್ವಾಗತಿಸಿದರು. ವಾಷರ್ಿಕ ವರದಿ ವಾಚನವನ್ನು ಜಯಶ್ರೀ ವಾಲಿ ನಡೆಸಿದರು. ಶೈಲಜಾ ಹಿರೇಮಠ ಮತ್ತು ಲಲಿತಾ ಹಿರೇಮಠ ನಿರೂಪಿಸಿದರು.