ಲೋಕದರ್ಶನವರದಿ
ಧಾರವಾಡ12: ಹಲವು ಬಗೆಯ ರಾಜಕೀಯ ಚಟುವಟಿಕೆಗಳು ನಮ್ಮ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿವೆ ಆದರೆ ರಂಗಭೂಮಿ ಅವುಗಳನ್ನು ನಿವಾರಿಸುವ ಕೆಲಸ ಮಾಡಬೇಕು. ರಂಗಭೂಮಿಗೆ ಇರುವ ಶಕ್ತಿ ಜಗತ್ತಿನ ಯಾವ ಶಕ್ತಿಗೂ ಇಲ್ಲ. ಕನ್ನಡ ನಾಡು ಸಾಂಸ್ಕೃತಿಕ ಶ್ರೀಮಂತ ನಾಡು ಕನ್ನಡ ರಂಗಭೂಮಿಗಾಗಿ ಹಲವರು ಶ್ರಮಿಸಿದ್ದಾರೆ ಅವರ ಶ್ರಮವನ್ನು ಗುರುತಿಸುವ ಸೂಕ್ತ ಕೆಲಸ ಇಂದು ಆಗಬೇಕಾಗಿದೆ ಎಂದು ರಂಗಧ್ವನಿ-2019 ರಾಷ್ಟ್ರೀಯ ರಂಗೋತ್ಸವ ಹಾಗೂ ವಿಚಾರ ಸಂಕಿರಣದ ರಂಗೋತ್ಸವದ ಉದ್ಘಾಟನೆ ನಗಾರಿ ಬಾರಿಸುವದರ ಮೂಲಕ ರಂಗೋತ್ಸವದ ಉದ್ಘಾಟನೆ ಮಾಡಿ ಸಾಣೆಹಳ್ಳಿ ಶಾಖಾಮಠದ ಪಂಡಿತಾರಾದ್ಯರು ಶ್ರೀಗಳು ಹೇಳಿದರು.
ನಗಾರಿ ಬಾರಿಸಿದ ಎಲ್ಲರ ಶೈಲಿಯಲ್ಲೂ ಭಿನ್ನತೆ ಇತ್ತು ಆದರೆ ಧ್ವನಿಯಲ್ಲಿ ಮಾತ್ರ ಸಾಂಗತ್ಯ ಇತ್ತು. ಸಮಾರಂಭವು ಡಾ. ಅಣ್ಣಾಜಿರಾವ್ ಶಿರೂರ ರಂಗಮಂದಿರದಲ್ಲಿ ನಡೆಯಿತು.
ರಂಗಾಯಣದ ಬೆಳವಣಿಗೆಗೆ ಹಲವರು ಶ್ರಮಿಸಿದ್ದಾರೆ. ಏಣಗಿ ನಟರಾಜ, ಸುಭಾಸ ನರೇಂದ್ರ, ಪ್ರಕಾಶ ಗರುಡ ಹಾಕಿದ ಬದ್ರ ಬುನಾದಿ ರಂಗಾಯಣ. ರಂಗಧ್ವನಿ ಕೇವಲ ಒಂದು ಕಾರ್ಯಕ್ರಮವಲ್ಲ ರಂಗಭೂಮಿಯ ಧ್ವನಿಯ ಜೊತೆಗೆ ರಂಗಾಯಣದ ಧ್ವನಿಯಾಗಿದೆ. ಪ್ರಸ್ತುತ ಮಕ್ಕಳ ರಂಗಭೂಮಿಯ ರೆಪರ್ಟರಿಯ ಅವಶ್ಯಕತೆ ಕನ್ನಡ ರಂಗಭೂಮಿಗೆ ಇದೆ. ಮಕ್ಕಳಿಗೆ ರಂಗ ಶಿಕ್ಷಣ ಈ ಮೂಲಕ ನಾವು ನೀಡಬೇಕಾಗಿದೆ ಇದಕ್ಕೆ ಎಲ್ಲರ ಸಹಕಾರ ಅತ್ಯವಶ್ಯಕ ಎಂದು ಪ್ರಾಸ್ತಾವಿಕ ನುಡಿಯಲ್ಲಿ ರಂಗಾಯಣ ಧಾರವಾಡದ ನಿದರ್ೇಶಕರಾದ ಪ್ರಮೋದ ಶಿಗ್ಗಾಂವ ನುಡಿದರು.
ರಂಗಭೂಮಿ ಎಂದರೇ ಕಂಠಪಾಟ ಮಾಡುವುದಲ್ಲ ಅದರ ಸತ್ಯ ಘಟನೆ ಅರೆತು, ಅಳವಡಿಸಿಕೊಂಡು ಪ್ರೇಕ್ಷಕರಿಗೆ ತಲುಪಿಸುವ ಕಾರ್ಯ ರಂಗಭೂಮಿಯದ್ದು, ನಟರಿಗೆ ಅಹಂಕಾರ ಬಂದರೆ ಅವನತಿ ಪ್ರಾರಂಭವದಂತೆ. ರಂಗ ಕಲಾವಿದರು ರಸ ಋಷಿಗಳು ಇದ್ದಂತೆ ಇರಬೇಕು ಅಂದಾಗ ಮಾತ್ರ ರಂಗಭೂಮಿಯಿಂದ ಸಮಾಜ ಪರಿವರ್ತನೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ರಂಗಾಯಣದ ಆಡಳಿತಾಧಿಕಾರಿ ಕೆ. ಎಚ್. ಚೆನ್ನೂರ ಸ್ವಾಗತಿಸಿದರು ಈ ಸಂದರ್ಭದಲ್ಲಿ ರಂಗಸಮಾಜದ ಸದಸ್ಯರು ರಂಗ ನಿದರ್ೇಶಕರು ಆದ ವಿಶ್ವೇಶ್ವರಿ ಹಿರೇಮಠ, ಗೋಪಾಲಕೃಷ್ಣ ನಾಯರಿ ಮಾಜಿ ಶಾಸಕ, ಚಂದ್ರಕಾಂತ ಬೆಲ್ಲದ ಹಾಗೂ ಹಿರಿಯ ರಂಗಭೂಮಿ ಕಲಾವಿದರು ಮತ್ತು ರಂಗಾಸ್ತತರು ಉಪಸ್ಥಿತರಿದ್ದಾರೆ.