ಹರಿನಾಮ ಸ್ಮರಣೆಯಿಂದ ಜೀವನ ಮುಕ್ತಿ: ಪಾಂಡುರಂಗ

ಲೋಕದರ್ಶನವರದಿ

ಧಾರವಾಡ/ಹುಬ್ಬಳ್ಳಿ10: ಜೀವನದಲ್ಲಿ ಕಷ್ಟನಷ್ಟದ ಭವ ನೀಗಿಸಿ ಸುಖಶಾಂತಿ ನೆಲೆಸಬೇಕಾದರೆ ಹರಿನಾಮ ಸ್ಮರಣೆಯಿಂದ ಸಾಧ್ಯವೆಂದು ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದ 22ನೇ ವರ್ಷದ 3 ದಿನಗಳ ಕಾಲ ನಡೆದ ದಿಂಡಿ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರಾದ ಅರವಿಂದ ಬೆಲ್ಲದರವರು ಮುಂದುವರೆದು ಮಾತನಾಡುತ್ತಾ ಪಾಂಡುರಂಗ ರುಕುಮಾಯಿ ಸಾಂಸ್ಕೃತಿಕ ಸೇವಾ ಟ್ರಸ್ಟಿನ ಕಾರ್ಯವನ್ನು ಶ್ಲಾಘಿಸಿದರು. 

         ಇದೇ ಸಂದರ್ಭದಲ್ಲಿ ದಾನಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 22 ಸಾಧಕರಿಗೆ ಸನ್ಮಾನಿಸಲಾಯಿತು. ಮೇಲಾಗಿ ಪಿ.ಯು ಕಾಮರ್ಸನಲ್ಲಿ ಶೇ 79.33% ಗ್ರಾಮಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ಪ್ರಿಯಾಂಕಾ ಬಸಯ್ಯ ಹಿರೇಮಠ ರವರನ್ನು ಸನ್ಮಾನಿಸಲಾಯಿತು.

        ತದನಂತರ ಪಾಂಡುರಂಗ-ರುಕುಮಾಯಿ ಸಾಂಸ್ಕೃತಿಕ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ಧಾರವಾಡ ಇವರ ಸಹಯೋಗದಲ್ಲಿ ಖ್ಯಾತ ಜಾನಪದ ಕಲಾವಿದ ಪ್ರಭು ಕುಂದರಗಿ, ಪ್ರಿಯಾಂಕಾ ಕುಂದರಗಿ ಸಂಗಡಿಗರಿಂದ ಜಾನಪದ ಸಂಗೀತ ಖ್ಯಾತ ಅಂತರಾಷ್ಟ್ರೀಯ ಹಾಗೂ ದೂರದರ್ಶನ ಹಾಸ್ಯ ಕಲಾವಿದ ಮಹಾದೇವ ಸತ್ತೀಗೇರಿ ಸಂಗಡಿಗರಿಂದ ಹಾಸ್ಯ ಸಂಜೆ ನಡೆಯಿತು. 

          ಮಡಿವಾಳಪ್ಪ ಗಾಯಕವಾಡ, ಆನಂದ ಜಾಧವ, ಶೇಖಪ್ಪ ನವಲೂರ, ಬಸವರಾಜ ಜಾಧವ, ತುಕಾರಾಮ ಪೂಜಾರ, ವಿಜಯ ಬಸನಕೊಪ್ಪ, ನಾಗಪ್ಪ ರವಡಿಹಾಳ, ಬಸವರಾಜ ಗಾಯಕವಾಡ ಮತ್ತು ಗ್ರಾಮದ ಸಮಸ್ತ ನಾಗರಿಕರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಜರುಗಿತು.