ಹುಬ್ಬಳ್ಳಿ19 : ಮಹದಾಯಿ ಮತ್ತು ಕಳಸಾ- ಬಂಡೂರಿ ಕುರಿತು ಸರ್ವಪಕ್ಷ ನಿಯೋಗ ಹೋದಾಗ ರಾಜಕೀಯ ಮಾಡಿ ದಾರಿ ತಪ್ಪಿಸುವ ಕಿತಾಪತಿ ಮಾಡಿದವರು ಪ್ರಹ್ಲಾದ ಜೋಶಿಯವರು ಎಂದು ಕಾಂಗ್ರೆಸ್ ಅಭ್ಯಥರ್ಿ ವಿನಯ ಕುಲಕರ್ಣಿ ಹೇಳಿದರು.
ಗೋಕುಲ ಗಾರ್ಡನ್ನಲ್ಲಿ ಕಾಂಗ್ರೆಸ್,ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ಈ ವಿಚಾರದಲ್ಲಿ ಬಿಜೆಪಿಯವರು ದಾರಿತಪ್ಪಿಸುತ್ತಿದ್ದಾರೆ ಎಂದರು.
ಬಿಜೆಪಿಯವರು ತಮ್ಮ ಸಕರ್ಾರದ ಐದು ವರ್ಷಗಳ ಸಾಧನೆ ಏನೆಂದು ಹೇಳಲಿ.
ಗೊಬ್ಬರ ದರ ಹೆಚ್ಚಾಗಿದೆ. ಪ್ರಹ್ಲಾದ ಜೋಶಿ ರೈತರ ಪರ ಮಾತನಾಡದೆ ಪಾಲರ್ಿಮೆಂಟ್ನಲ್ಲಿ ನಿದ್ದೆ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿಯವರ ಬೆಂಬಲದಿಂದ ನನಗೆ ಆನೆಬಲ ಬಂದಿದೆ ಎಂದ ವಿನಯ
ಅಲ್ಪಸಂಖ್ಯಾತರು , ದಲಿತರು, ಹಿಂದುಳಿದವರು ನಾವು ಓಟ್ ಹಾಕ್ತೀವಿ.ನಿಮ್ಮ ಲಿಂಗಾಯತರ ಮನೆಗಳಿಗೆ ಹೋಗಿ ಅಂತಿದಾರೆ.ಆದರೆ ಈ ಬಾರಿ
ಈ ಬಾರಿ ನನಗೆ ಬೆಂಬಲ ವ್ಯಕ್ತಪಡಿಸುತ್ತಾರೆ ಎನ್ನುವ ಭರವಸೆಯಿದೆ ಎಂದರು.
ಜೋಶಿಯವರಿಗೆ ಲಿಂಗಾಯತರ ಬಗ್ಗೆ ಈಗ ಪ್ರೀತಿ ಬರುತ್ತಿದೆ ಎಂದರಲ್ಲದೇ
ಬಿಜೆಪಿಯವರಿಗೆ ಲಿಂಗಾಯತರ ಬಗ್ಗೆ ಗೌರವವಿದ್ದರೆ ಆರ್ಎಸ್ಎಸ್ ಕಚೇರಿಯಲ್ಲಿ ಬಣಸವಣ್ಣನವರ ಭಾವಚಿತ್ರ ಹಾಕಲಿ ಎಂದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮಾವೇಶಕ್ಕೆ ಚಾಲನೆ ನೀಡಿದರು.ಬಸವರಾಜ್ ಹೊರಟ್ಟಿ, ಪ್ರಸಾದ್ ಅಬ್ಬಯ್ಯ, ವೀರಣ್ಣ ಮತ್ತಿಕಟ್ಟಿ, ಎನ್.ಎಚ್. ಕೋನರೆಡ್ಡಿ, ಎ.ಎಂ.ಹಿಂಡಸಗೇರಿ,ಐ.ಜಿ. ಸನದಿ, ಆಲ್ಕೋಡ್ ಹನುಮಂತಪ್ಪ, ಮಹೇಂದ್ರ ಸಿಂಘಿ, ಎಂ.ಎಸ್.ಅಕ್ಕಿ, ಅನಿಲಕುಮಾರ ಪಾಟೀಲ, ಗುರುರಾಝ ಹುಣಸಿಮರದ, ನಾಗರಾಜ ಗೌರಿ ಮುಂತಾದವರು ಉಪಸ್ಥಿತರಿದ್ದರು.