ಲೋಕದರ್ಶನವರದಿ
ರಾಣೇಬೆನ್ನೂರ17: ಇಲ್ಲಿನ ಸಮುದಾಯ ಆರೋಗ್ಯ ಹಾಗೂ ಕುಟುಂಬ ಯೋಜನಾ ಕೇಂದ್ರದಲ್ಲಿ ನೂತನವಾಗಿ ಡಿಜಿಟಲ್ ಲೆಪ್ರೋಸ್ಕೋಪಿ ಯಂತ್ರ ಉದ್ಘಾಟನೆ ಮತ್ತು ಲೆಪ್ರೋ ಟ್ಯುಬೇಕ್ಟಮಿ ಶಸ್ತ್ರ ಚಿಕಿತ್ಸಾ ಯೋಜನೆ ಕಾರ್ಯವು ಆರಂಭಿಸಲಾಯಿತು.
ಸಮುದಾಯ ಆರೋಗ್ಯ ಕೇಂದ್ರದ ಅಧ್ಯಕ್ಷೆ ಡಾ|| ರಂಜನಾ ಅಶೋಕಕುಮಾರ ನಾಯ್ಕ ಅವರು ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಇದೀಗ ಆಧುನಿಕತೆಯ ಯಂತ್ರಗಳೊಂದಿಗೆ ಶೀಘ್ರ ಮತ್ತು ಸುಧೀರ್ಘವಾದ ಶಸ್ತ್ರ ಚಿಕಿತ್ಸೆಯನ್ನು ಸರಳವಾಗಿ ಮಾಡಬಹುದಾಗಿದೆ.
ಅಂತಹ ಆಧುನಿಕತೆ ಯಂತ್ರವನ್ನು ಜನ-ಸಮಾನ್ಯರ ಅನುಕೂಲತೆಗಾಗಿ ಸಮುದಾಯ ಕೇಂದ್ರದಲ್ಲಿ ಇಂದಿನಿಂದ ಆರಂಭಿಸಲು ಹೆಮ್ಮೆಯಾಗುತ್ತದೆ ಎಂದರು.
ಇಂದಿನಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲೆಪ್ರೋ-ಟ್ಯುಬೆಕ್ಟಮಿ ಶಸ್ತ್ರ ಚಿಕಿತ್ಸೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ದೊರೆಯಲಿದ್ದು, ಇದರ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದು ಡಾ|| ರಂಜನಾ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದಶರ್ಿ ಡಾ|| ಸಂಜಯ್ ಎಂ.ನಾಯ್ಕ, ಡಾ|| ಎಂ.ಎಂ.ಅನಂತರೆಡ್ಡಿ, ಡಾ|| ನಾಗರಾಜ ದೊಡ್ಡಮನಿ, ಡಾ|| ಸಂದೀಪ್ ನಾಯ್ಕ ಮತ್ತಿತರ ಹಿರಿಯ ವೈದ್ಯರು, ಸಾರ್ವಜನಿಕರು, ಸಿಬ್ಬಂದಿ ಉಪಸ್ಥಿತರಿದ್ದರು.