ಬಾಗಲಕೋಟೆ17: ಜಿಲ್ಲಾಡಳಿತದ ವತಿಯಿಂದ ಭಗವಾನ ಮಹಾವೀರರ ಜಯಂತಿಯನ್ನು ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಸರಳವಾಗಿ ಹಾಗೂ ಸಾಂಕೇತಿಕವಾಗಿ ಬುಧವಾರ ಆಚರಿಸಲಾಯಿತು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಧಿಕಾರಿಗಳಾದ ಆರ್.ರಾಮಚಂದ್ರನ್ ಮತ್ತು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಅವರು ಭಗವಾನ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಅಪರ್ಿಸಿದರು. ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಹ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ಅಪರ್ಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರು ಹಿಂಸೆಯೇ ಎಲ್ಲಕ್ಕಿಂತ ದೊಡ್ಡ ಪಾಪವಾಗಿದ್ದು, ಅಹಿಂಸೆಯೇ ಪರಮ ಧಮ್ ಎಂದು ಬೋಧಿಸಿದವರೇ ಭಗವಾನ್ ಮಹಾವೀರರು. ತ್ಯಾಗದ ಮೂಲಕ ಸಿಗುವ ಸುಖದ ಅರಿವನ್ನು ಮೂಡಿಸಿದ್ದಾರೆ. ಜನರು ಅತೀ ಆಶೆಯಿಂದ ಅನೇಕ ಆತಂಕಗಳಿಗೆ ಕಾರಣರಾಗುತ್ತಿದ್ದಾರೆ.
ಆಶೆಗೆ ಮೀತಿ ಇಲ್ಲದಂತಾಗಿ ಸಮಾಜದಲ್ಲಿ ಅನೇಕ ಕೃತ್ಯಗಳನ್ನು ಮಾಡಿ ನೆಮ್ಮದಿಯ ಸಮಾಜವನ್ನು ಹಾಳುಮಾಡುತ್ತಿದ್ದಾರೆ. ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಸುವ ಅಗತ್ಯವಿದ್ದು, ಮಹಾವೀರರು ಹೇಳಿದ ಸಂದೇಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಮಾತನಾಡಿ ಜಗತ್ತಿಗೆ ಶಾಂತಿ ಸಂದೇಶವನ್ನು ನೀಡಿದ ಭಗವಾನ್ ಮಹಾವೀರರು ಹಾಕಿಕೊಟ್ಟ ಹಾದಿಯಲ್ಲಿ ನಡೆದುಕೊಳ್ಳಬೇಕು. ಪ್ರೀತಿ, ವಾತ್ಸವಲ್ಯ, ಕರುಣೆ, ಅನುಕಂಪ, ಸಹಬಾಳ್ವೆ ಹಾಗೂ ಪರಿಸರ ಬಗೆಗಿನ ಕಾಳಜಿಯನ್ನು ತಿಳಿಸಿಕೊಟ್ಟಿದ್ದಾರೆ.
ಅವರು ನೀಡಿರುವ ಪ್ರತಿಯೊಂದು ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಅಂದಾಗ ಮಾತ್ರ ಮಹಾವೀರರ ಜಯಂತಿ ಆಚರಿಸಿದ್ದಕ್ಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರೌಭಾರಿ ಉಪನಿದರ್ೇಶಕ ಎ.ಕೆ.ಬಸಣ್ಣವರ, ವಿಷಯ ಪರಿವೀಕ್ಷಕಸಿ ಜಾಸ್ಮಿನ್ ಕಿಲ್ಲೆದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಶಶಿಕಲಾ ಹುಡೇದ ಪ್ರಾರಂಭದಲ್ಲಿ ಸ್ವಾಗತಿಸಿ ಕೊನೆಗೆ ವಂದಿಸಿದರು.