ಹೂವಿನಹಡಗಲಿ 15: ತಾಲೂಕಿನ ಹಿರೇಹಡಗಲಿಯ ರೈತ ಸಂಪರ್ಕ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಸಂಸದ ವೈ.ದೇವೇಂದ್ರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೂರವಾಣಿಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ.ಪಾಟೀಲ್ ಜತೆ ಮಾತನಾಡಿದ ಸಂಸದರು, ಇಲಾಖೆಯಿಂದ ಏರ್ಪಡಿಸುವ ರೈತ ಮೇಳ, ವಿವಿಧ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಮಾತ್ರ ಆಹ್ವಾನಿಸಿ, ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದೀರಿ. ಇನ್ನು ಮುಂದೆ ಎಲ್ಲ ಕಾರ್ಯಕ್ರಮಗಳ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಸಕರ್ಾರದ ಯೋಜನೆಗಳನ್ನು ರೈತರಿಗೆ ತಲುಪಿಸಬೇಕು ಎಂದು ಸೂಚಿಸಿದ್ದಾರೆ.
ಪತ್ರ ಬರೆಯಿರಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಮನಗಂಡ ಸಂಸದರು, ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದ್ದಾರೆ. ನಿವೃತ್ತ ಇಂಜಿನಿಯರ್ ಓದೋ ಗಂಗಪ್ಪ, ಮುಖಂಡರಾದ ಕೊಂಪಿ ವೀರಭದ್ರಪ್ಪ, ಅಂಜಿನಪ್ಪ, ಕೊಟ್ರೇಶ, ಉಚ್ಚೆಂಗೆಪ್ಪ, ಭೀಮಣ್ಣ ಇದ್ದರು.