ಹೂವಿನಹಡಗಲಿ: ಕನ್ನಡಿಗರು ವಿಶಾಲ ಹೃದಯದವರು: ಪ್ರೊ.ಶಾಂತಮೂರ್ತಿ

ಲೋಕದರ್ಶನ ವರದಿ

ಹೂವಿನಹಡಗಲಿ 03: ಕನ್ನಡಿಗರು ಎಲ್ಲಾ ಭಾಷೆಯನ್ನು, ಎಲ್ಲಾ ಧರ್ಮವನ್ನ ಪ್ರೀತಿಸುವ ವಿಶಾಲ ಹೃದಯವಂತರು ಎಂದು ಜಿ.ಬಿ.ಆರ್.ಕಾಲೇಜಿನ ಇಂಗ್ಲೀಷ ಪ್ರಾಧ್ಯಾಪಕ ಪ್ರೊ.ಶಾಂತಮೂರ್ತಿ. ಕುಲಕಣರ್ಿ ಹೇಳಿದರು.  

  ಅವರು ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ರಂಗಭಾರತಿ ಹೂವಿನಹಡಗಲಿ ಸಂಯುಕ್ತಾಶ್ರಯದಲ್ಲಿ 64ನೇ ಕರ್ನಾಟಕ ರಾಜ್ಯೋತ್ಸವದ, ಜನಪದ-ಸುಗಮ-ಚಿತ್ರಗೀತೆಗಳ ವಿಶೇಷ ಕಾರ್ಯಕ್ರಮದಲ್ಲಿ ಆಶಯ ನುಡಿ ನುಡಿಯುತ್ತಾ ಕನ್ನಡಿಗರು ಚೇತೋಹಾರಿ ಭಾವನೆ ಹೊಂದಿದ್ದು ಒಳ್ಳೆಯದನ್ನ ಒಪ್ಪಿಕೊಳ್ಳುವ ಸಂಸ್ಕೃತಿಯನ್ನ ಹೊಂದಿರುತ್ತಾರೆ ಎಂದು ಹೇಳುತ್ತಾ ನಮ್ಮ ತನವನ್ನು ನಾವು ಉಳಿಸಿಕೊಳ್ಳಬೇಕು, ನನ್ನ ತಾಯಿ, ನನ್ನ ನೆಲ, ನನ್ನ ನಾಡನ್ನ ಪ್ರೀತಿಸುವಂತಾಗಬೇಕು ಎಂದು ಸಲಹೆ ನೀಡಿದರು.

  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ ಕೆ.ರಾಘವೇಂದ್ರ ರಾವ, ಮಲ್ಲಿಗೆನಾಡು ಸಾಹಿತಿಗಳ, ಕಲಾವಿದರ ತವರೂರಾಗಿದ್ದು ಇದಕ್ಕೆ ದಿವಂಗತ ಎಂ.ಪಿ.ಪ್ರಕಾಶ್ ರವರ ಪ್ರೇರಣಿ ಮತ್ತು ಪ್ರೋತ್ಸಾಹ ಕಾರಣವಾಗಿದ್ದು, ಅವರೊಬ್ಬ ಸಾಂಸ್ಕೃತಿಕ ರಾಯಭಾರಿಯಾಗಿದ್ದರು ಎಂದು ಹೇಳುತ್ತಾ, ಅವರ ಆಸೆಯಂತೆ ಸಾಂಸ್ಕೃತಿಕ ವೈಭವದ ಪರಂಪರೆಯನ್ನ ಉಳಿಸಿ ಬೆಳೆಸೋಣ ಎಂದು ಉದ್ಘಾಟನೆ ನುಡಿ ನುಡಿದರು.

  ಕಾರ್ಯಕ್ರಮದ ಮುಖ್ಯ ಅತಿಥಿಯಾದ ಸಮಾಜ ಸೇವಕರು ಮತ್ತು ರಾಜಕೀಯ ಮುಖಂಡ ಓದೋ ಗಂಗಪ್ಪ ಮಾತನಾಡಿ ಪಾಶ್ಚಿಮಾತ್ಯ ಭಾಷೆಗಳಿಗೆ ಮಾರುಹೋಗದೆ ಕನ್ನಡ ಭಾಷೆಗೆ ಆಧ್ಯತೆ ನೀಡಿ ಕನ್ನಡ ಭಾಷೆಯನ್ನ ಉಳಿಸಿ ಬೆಳೆಸಿರಿ ಎಂದು ಅತಿಥಿ ನುಡಿ ನುಡಿದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕ.ಸಾ.ಪ.ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ವಹಿಸಿಕೊಂಡು ಅಧ್ಯಕ್ಷೀಯ ನುಡಿ ನುಡಿದರು. ಮುಖ್ಯ ಅತಿಥಿಗಳಾಗಿ ರಂಗಭಾರತಿ ಕಾರ್ಯದಕ್ಷೆ ಎಂ.ಪಿ.ಸುಮಾ ವಿಜಯ್, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್, ಮೈಸೂರಿನ ಇನಿದನಿ ಕಲಾ ಬಳಗದ ಅಧ್ಯಕ್ಷ ಡಾ.ಕಾ.ರಾಮೇಶ್ವರಪ್ಪ, ಕರ್ನಾಟಕ ಪ್ರೆಸ್ ಕ್ಲಬ್ ಹಡಗಲಿ ಅಧ್ಯಕ್ಷ ಕೆ.ಅಯ್ಯನಗೌಡ, ಕ.ಸಾ.ಪ.ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಎಂ.ಪಿ.ಎಂ.ಮಂಜುನಾಥ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿದ್ದರಾಮ ಕಲ್ಮಠ ರವರ "ಗಡಿನಾಡ ದೀಪಗಳು" ಪುಸ್ತಕ ಲೋಕಾರ್ಪಣೆಗೊಂಡಿತು.

  ಕಾರ್ಯಕ್ರಮದಲ್ಲಿ ತಾಲ್ಲೂಕು ಕ.ಸಾ.ಪ ಕಾರ್ಯದರ್ಶಿಗಳಾದ ಎಂ.ಚಿದಾನಂದ ಸ್ವಾಗತಿಸಿದರು, ಎಂ.ದಯಾನಂದ ಕಾರ್ಯಕ್ರಮ ನಿರೂಪಿಸಿದರು, ಉಪನ್ಯಾಸಕ ಡಾ.ಹೆಚ್.ಕೆ.ಮಹೇಶ್ ವಂದಿಸಿದರು. 

  ನಂತರದಲ್ಲಿ ಮೈಸೂರಿನ ಇನಿದನಿ ಕಲಾ ಬಳಗ ಜನಪದ-ಸುಗಮ-ಚಿತ್ರಗೀತೆಗಳ ವಿಶೇಷ ಅದ್ಭುತ ಕಾರ್ಯಕ್ರಮ ನೀಡಿ ರಂಜಿಸಿ ಎಲ್ಲರನ್ನು ಪುಳಕಿತರನ್ನಾಗಿ ಮಾಡಿದರು.