ಹೂವಿನಹಡಗಲಿ: ಮಾನಿಹಳ್ಳಿ ಶ್ರೀಗಳಿಗೆ ಡಾಕ್ಟರೇಟ್

ಲೋಕದರ್ಶನ ವರದಿ

ಹೂವಿನಹಡಗಲಿ 20: ತಾಲೂಕಿನ ಮಾನಿಹಳ್ಳಿ ಗ್ರಾಮದ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಾನಿಹಳ್ಳಿ ಶಾಖಾ ಮಠದ ಪೀಠಾಧ್ಯಕ್ಷ ಮಳೆಯೋಗಿಶ್ವರ ಮಹಾಸ್ವಾಮಿಗಳಿಗೆ ತಮಿಳುನಾಡಿನ ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಗೌರವ ಡಾಕಟ್ಟರೇಟ್ ನೀಡಿ ಗೌರವಿಸಿದೆ.

ಶ್ರೀಗಳ ಸಾಮಾಜಿಕ, ಧಾಮರ್ಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆಗೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ ಪದವಿ ನೀಡಿದೆ.ಈಚೆಗೆ ನಡೆದ ಸಮಾರಂಭದಲ್ಲಿ ವಿಶ್ವವಿದ್ಯಾಲಯ ಕುಲಪತಿಗಳು ಸೇರಿದಂತೆ ಹರಗುರು ಚರಮೂತರ್ಿಗಳ ಹಾಗೂ ಜನತಪ್ರತಿನಿಧಿಗಳ ಸಮ್ಮುಖದಲ್ಲಿ ಶ್ರೀಗಳಿಗೆ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ್ದಾರೆ.

ಮಳೆಯೋಗಿಶ್ವರ ಮಹಾಸ್ವಾಮಿಗಳು ಮಾತನಾಡಿ ಕಳೆದ ಎರಡು ದಶಕಗಳಿಂದ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆಗೆ ಗೌರವ ಡಾಕ್ಟರೇಟ ಪದವಿ ಲಭಿಸಿದೆ ಎಂದರು.