ಲೋಕದರ್ಶನ ವರದಿ
ಹೂವಿನಹಡಗಲಿ 11: ನಾಡಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ 2020ರ ಕಾರ್ಣಿಕ ಉಕ್ತಿ "ಸಂಪಾಯಿತಲೇ ಪರಾಕ್ ಎಂದು ನುಡಿದಿದೆ. ನಾಡಿನಾದ್ಯಂತ ಆಗಮಿಸಿದ್ದ ಅಪಾರ ಭಕ್ತ ಸಮೂಹದ ನಡುವೆ ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯವಾಣಿ ಮಂಗಳವಾರ ಜರುಗಿತು.
11 ದಿನಗಳ ಉಪವಾಸ ವ್ರತ ಆಚರಿಸಿದ ಗೊರವಪ್ಪ ಹಾಗೂ ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶ್ವರೂಢರಾಗಿ ಡೆಂಕನ ಮರಡಿಗೆ ಆಗಮಿಸುತ್ತಿದ್ದಂತೆ ಏಳು ಕೋಟಿ ಚಹಾಂಗಮಲೋ ನಿನಾದ ಹಾಗೂ ಭಕ್ತರ ಹಷರ್ೊದ್ಗಾರ ಮುಗಿಲು ಮುಟ್ಟಿತ್ತು. ಕಾರ್ಣಿಕ ಉಕ್ತಿಯನ್ನು ನಾಡಿನ ಜನತೆ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದುದು ಕಂಡು ಬಂತು. ಶ್ರೀ ಮೈಲಾರಲಿಂಗೇಶ್ವರ ಕಾಣರ್ಿಕ ನುಡಿಗೆ ಶತ ಶತಮಾನಗಳ ಇತಿಹಾಸವಿದ್ದು, 2020ರಲ್ಲಿ ಸ್ವಾಮಿ ನುಡಿದಿದ್ದ ಕಾರಣಿಕ ಪುನಾರಾವರ್ತನೆಯಾಗಿಲ್ಲ ಹೊಸದಾಗಿ ಭವಿಷ್ಯವಾಣಿ ನುಡಿದಿದ್ದಾನೆ
ಕಾಣರ್ಿಕೋತ್ಸವಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರ ದಂಡೇ ಹರಿದು ಬಂದಿತ್ತು. ಕಾಣರ್ಿಕ ನುಡಿಯುವ ಸ್ಥಳ ಡೆಂಕನ ಮರಡಿಯಲ್ಲಿ ಲಕ್ಷಾಂತರ ಭಕ್ತ ಸಮೂಹ ನೆರೆದಿತ್ತು.
ಈ ಸಂದರ್ಭದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು,ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ, ತಹಶೀಲ್ದಾರರಾದ ರಾಘವೇಂದ್ರರಾವ್, ಮುಖಂಡರಾದ ಎಂ.ಪರಮೇಶ್ವರಪ್ಪ, ಎ.ಕೊಟ್ರೇಶ, ಚಂದ್ರನಾಯ್ಕ, ಬಿ.ಹನುಮಂತಪ್ಪ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪಿ.ಎನ್.ಲೋಕೇಶ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ರಾವ್, ತಾ.ಪಂ.ಇಒ ಯು.ಎಚ್.ಸೋಮಶೇಖರ, ಸೇರಿದಂತೆ ಗಣ್ಯ ಮಾನ್ಯರು ಪಾಲ್ಗೊಂಡಿದ್ದರು.
ಸೂಕ್ತ ಪೊಲೀಸ್ ಬಂದೋಬಸ್ತ್:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬು, ಡಿ.ವೈಎಸ್ಪಿ ಎಂ.ಎಸ್.ಹೊಸಮನಿ, ಸಿಪಿಐ ಮಾಲತೇಶ ಕೂನಬೇವು ಅವರ ನೇತೃತ್ವದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸೂಕ್ತ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.