ಹೂವಿನಹಡಗಲಿ: ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ

ಲೋಕದರ್ಶನ ವರದಿ

ಹೂವಿನಹಡಗಲಿ 20: ಬಹುತೇಕ ದುರ್ಬಲ ಕುಟುಂಬಗಳ ಆಥರ್ಿಕ ಅಭಿವೃದ್ದಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಸಹಕಾರಿಯಾಗಲಿದೆ ಎಂದು ತಹಶೀಲ್ದಾರ ಕೆ.ರಾಘವೇಂದ್ರರಾವ್ ಹೇಳಿದರು.

ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ದಿ ಕಚೇರಿಯಲ್ಲಿ ನಡೆದ ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಡ ವಿದ್ಯಾಥರ್ಿಗಳ ಶೈಕ್ಷಣಿಕ ಅಭಿವೃದ್ದಿಗೆ ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ ಎಂದರು. 

ಇದೇ ಸಂದರ್ಭದಲ್ಲಿ ನಾಲ್ಕು ಜನ ಎಂಬಿಬಿಎಸ್ ಹಾಗೂ ಎಂಜಿನಿಯರ್ ವಿದ್ಯಾಥರ್ಿಗಳಿಗೆ 50 ಸಾವಿರ ಶಿಷ್ಯ ವೇತನ ಚೆಕ್ ವಿತರಣೆ ಮಾಡಲಾಯಿತು.ಸ್ವಸಹಾಯ ಸಂಘಗಳ ಗುಂಪುಗಳಿಗೆ ಚೆಕ್ ವಿತರಣೆ ಮಾಡಲಾಯಿತು.ಕಸ ಸಂಗ್ರಹ ತೊಟ್ಟೆಯನ್ನು ವಿತರಿಸಲಾಯಿತು. ಜಿಲ್ಲಾ ಸಂಯೋಜಕರಾದ ಚಿದಾನಂದ, ತಾಲೂಕು ಸಂಯೋಜಕ ತಿಲಕ್ ಕುಮಾರ, ಕಿರಣಜೈನ್, ಸಂತೋಷಜೈನ್, ಮಹಾಂತೇಶ ಇದ್ದರು.