ಹಳಿಯಾಳ 22: ಸರಕು ಸಾಗಾಣಿಕೆ ಮತ್ತು ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳಲ್ಲಿ ಮಾನವ ಸಾಗಾಟ ನಿಷೇಧ ಆದೇಶದ ಕುರಿತು ಅರಿವು, ನೆರವು ಮತ್ತು ಜನಜಾಗ್ರತಿ ಹಾಗೂ ಸಂವಾದ ಕಾರ್ಯಕ್ರಮವು ತಾಲೂಕಾ ಕಚೇರಿ ಸಭಾಂಗಣದಲ್ಲಿ ನೆರವೇರಿತು.
ಪೋಲಿಸ್ ಇಲಾಖೆ, ಸಾರಿಗೆ ಇಲಾಖೆ, ತಾಲೂಕಾ ಆಡಳಿತ, ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭವನ್ನು ಉದ್ಘಾಟಿಸಿದ ತಹಶೀಲದಾರ ಶಿವಾನಂದ ಉಳ್ಳೇಗಡ್ಡಿ ಮಾತನಾಡುತ್ತಾ ವಾಹನ ಚಾಲನೆಯಲ್ಲಿ ಪ್ರತಿಯೊಬ್ಬರು ಕಾನೂನು ಗೌರವಿಸುವುದು ಅಗತ್ಯವಾಗಿದೆ. ಅದರಲ್ಲಿಯು ವಾಹನ ಚಾಲಕರು ದುಶ್ಚಟಗಳಿಂದ ದೂರ ಉಳಿಯುವುದರಿಂದ ಪ್ರಾಣ ಹಾನಿಯನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಮಾನವನ ಪ್ರಾಣ ಮತ್ತು ಜೀವನ ಅಮೂಲ್ಯವಾಗಿದೆ. ಅದರ ರಕ್ಷಣೆ ಎಲ್ಲರ ಹೊಣೆಯು ಆಗಿದೆ. ಅತೀ ವೇಗ, ಗಡಿಬಿಡಿ ಮತ್ತು ಅತಿ ಆಶೆಗೆ ಮನುಷ್ಯನ ಜೀವವು ಬಲಿಯಾಗದಂತೆ ತಡೆಯುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಸರಕು ಸಾಗಣೆಯ ವಾಹನಗಳಲ್ಲಿ ಮನುಷ್ಯರನ್ನು ಸಾಗಣೆ ಮಾಡುವುದು ಅಪರಾಧವಾಗಿದೆ ಎಂದು ಹೇಳಿದರು.
ಸಿಪಿಐ ಬಿ.ಎಸ್. ಲೋಕಾಪೂರ ಸಂವಾದ ನಡೆಸಿ, ಮುಂದಿನ ಕೆಲವೇ ದಿನಗಳಲ್ಲಿ ಶಾಲಾ ಕಾಲೇಜುಗಳು ಆರಂಭವಾಗುತ್ತವೆ. ಆಗ ಅಟೋರಿಕ್ಷಾ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಮಕ್ಕಳನ್ನು ನಿಯಮ ಮೀರಿ ಸಾಗಾಟ ಮಾಡುವುದು ಸಹ ಅಪರಾಧವಾಗಿದೆ. ಅಲ್ಲದೇ ಗೂಡ್ಸ್ ವಾಹನಗಳಲ್ಲಿ ಮಕ್ಕಳ ಸಾಗಾಟ ಮಾಡಿದರೆ ಸ್ಥಳದಲ್ಲಿಯೇ ಅವರಿಗೆ ದಂಡ ವಿಧಿಸಲು ಅವಕಾಶವಿದ್ದು, ಸಂತೆ ಮತ್ತು ಜಾತ್ರೆಗಳ ಸಮಯದಲ್ಲಿ ಕುರಿಗಳಂತೆ ಮಕ್ಕಳು ಮತ್ತು ಜನರನ್ನು ಸಾಗಾಟ ಮಾಡಲು ಯತ್ನಿಸಿದರೇ ಜೈಲು ಸೇರುವುದು ಗ್ಯಾರಂಟಿಯಾಗಿದೆ. ವಾಹನ ಚಾಲನೆಯ ಸಮಯದಲ್ಲಿ ಮೊಬೈಲ್ ಬಳಕೆಯನ್ನು ಮಾಡದಿದ್ದರೆ ಅಪಘಾತಗಳು ತಡೆಗಟ್ಟಿದಂತಾಗಿ ಜೀವ ಹಾನಿಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಇನ್ನಷ್ಟು ಪ್ರಮಾಣದಲ್ಲಿ ಅರಿವು ಮತ್ತು ಪ್ರಚಾರ ಕಾರ್ಯ ನಡೆಯಲಿವೆ ಎಂದರು.
ಮೋಟಾರು ವಾಹನ ನಿರೀಕ್ಷಕ ಎಮ್.ಎಮ್.ಅಸಾದುಲ್ಲಾ ಬೇಗ್ ಅವರು ಮಾತನಾಡಿ, ಗೂಡ್ಸ್ ವಾಹನಗಳಲ್ಲಿ ಮಾನವ ಸಾಗಾಟವನ್ನು ಸುಪ್ರಿಂಕೋಟರ್್ ನಿಷೇಧಿಸಿದೆ. ಆದ್ದರಿಂದ ಗೂಡ್ಸ್ ವಾಹನಗಳಾದ ಲಾರಿ, ಮಿನಿ ಟ್ರಕ್ಸ್ ಸೇರಿದಂತೆ ಇನ್ನಿತರ ಸರಕು ಸಾಗಾಣಿಕಾ ವಾಹನಗಳಲ್ಲಿ ಜನರು ಸಾಗಾಟ ಮಾಡುವುದು ರಸ್ತೆ ನಿಯಮಗಳನ್ನು ಮಿರಿದಂತೆ ಆಗಿದ್ದು ಇದೀಗ ಸಕರ್ಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಜರುಗಿಸುವುದು ಖಚಿತವಾಗಿದ್ದು ಇಂದಿನಿಂದಲೇ ಗೂಡ್ಸ್ ವಾಹನ ಚಾಲಕರು ಮತ್ತು ಮಾಲಿಕರು ಅದರಲ್ಲಿ ಮಾನವರನ್ನು ಸಾಗಾಟ ಮಾಡುವುದನ್ನು ನಿಲ್ಲಿಸುವುದರ ಮೂಲಕ ಕೋರ್ಟ ಆದೇಶಕ್ಕೆ ಗೌರವ ನೀಡಬೇಕಾಗಿದೆ ಎಂದರು.
ಗೂಡ್ಸ್ ವಾಹನಗಳಲ್ಲಿ ಹೆಚ್ಚು ಹೆಚ್ಚು ಜನರನ್ನು ಹಾಕಿಕೊಂಡು ಚಾಲನೆ ಮಾಡುವುದು ಸಹ ಅಪಘಾತಕ್ಕೆ ಮೂಲಕ ಕಾರಣವಾಗಿದ್ದು ಇವುಗಳ ಕುರಿತು ಪ್ರತಿಯೊಬ್ಬರು ಸಹ ಅರಿವು ಹೊಂದಬೇಕಾಗಿದೆ. ಮುಂದಿನ ದಿನಗಳಲ್ಲಿ ಗೂಡ್ಸ್ ವಾಹನಗಳಲ್ಲಿ ಮಾನವ ಸಾಗಾಟ ಮಾಡಿದರೇ ಅಂತಹವರ ಮೇಲೆ ಕಾನೂನು ಕ್ರಮ ಜೊತೆಗೆ ಪ್ರತಿ ವಾಹನಕ್ಕೆ 15 ರಿಂದ 20 ಸಾವಿರ ರೂ. ದಂಡ, ಪುನರಾವರ್ತನೆಯಾದಲ್ಲಿ ವಾಹನವನ್ನು ವಶಕ್ಕೆ ಪಡೆದು ಕಠಿಣ ಶಿಕ್ಷೆಯನ್ನು ನೀಡುವುದಕ್ಕೆ ಅವಕಾಶವಿದ್ದು ಇದನ್ನು ಗಂಬೀರವಾಗಿ ಪರಿಗಣಿಸಿ ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರಿಕೆವಹಿಸುವಂತೆ ಮನವಿ ಮಾಡಿದರು.
ಪಿಎಸೈ ಆನಂದಮೂತರ್ಿ ಸಿ., ಪ್ರೊಬೆಸನರಿ ಪಿಎಸೈಗಳಾದ ಅಶೋಕಕುಮಾರ್, ಪ್ರಸನ್ನ ಎಸ್., ಶಿಕ್ಷಣ ಸಂಯೋಜಕ ಡಿ.ಎಮ್.ನಾಡಗೌಡಾ ಮೊದಲಾದವರಿದ್ದರು.