ಲೋಕದರ್ಶನ ವರದಿ
ಗುಳೇದಗುಡ್ಡ 22: ಮುದ್ದೇಬಿಹಾಳ ತಾಲೂಕಿನ ಕಂದಗನೂರ ಗ್ರಾಮದ ಬಳಿ ವಾಹನ ಅಪಘಾತದಲ್ಲಿ ಮೃತಪಟ್ಟ ಹಳದೂರ ಗ್ರಾಮದ ಮೂವರು ಕುಟುಂಬದ ಸದಸ್ಯರಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಹಾಗೂ ಶಾಸಕ ಸಿದ್ದರಾಮಯ್ಯ ಅವರು ನೀಡಿದ್ದ ತಲಾ 1 ಲಕ್ಷ ರೂ.ಗನ್ನು ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಬಿ. ಸೌದಾಗರ ಮಂಗಳವಾರ ವಿತರಿಸಿದರು.
ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೌದಾಗಾರ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪರಿಹಾರಧನದ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜು ಜವಳಿ, ಮಲ್ಲಣ್ಣ ಯಲಿಗಾರ, ಜಿಪಂ ಮಾಜಿ ಸದಸ್ಯ ಎಂ.ಬಿ. ಹಂಗರಗಿ, ರಾಜು ಚಮ್ಮನಕಟ್ಟಿ, ಚಿದಾನಂದಸಾ ಕಾಟವಾ, ಜಿ.ಎಂ. ಸಿಂಧೂರ, ಅನೀಲಕುಮಾರ ದಡ್ಡಿ, ಜಮೀರ ಮೌಲ್ವಿ, ಗ್ರಾಪಂ ಸದಸ್ಯರಾದ ವೀರಬಸಪ್ಪ ಹುನಗುಂದ, ದೇವರಾಯಪ್ಪ ಮೂಲಿಮನಿ, ಪರಶುರಾಮ ಮಾದರ, ಎನ್.ಎಸ್. ರಾಂಪುರ, ನಿವೃತ್ತ ಡಿಡಿಪಿಐ ಎ.ಎಂ. ಮಡಿವಾಳರ, ಚನ್ನವೀರ ಅಂಗಡಿ, ಮಂಜುನಾಥ ಪುರ್ತಗೇರಿ, ಚನ್ನಪ್ಪ ಮೇಟಿ, ನಾಗಪ್ಪ ಕೆಂದೂರ, ಗುರಯ್ಯ ಹಿರೇಮಠ ಇತರರಿದ್ದರು.