ಬದರಿನಾರಾಯಣ ದೇವರ ಮೂತರ್ಿ ಪ್ರತಿಷ್ಠಾಪನೆ

ಬಿ.ಎಲ್.ಆರ್02 ಬದರಿನಾರಾಯಣ ದೇವಾಲಯದಲ್ಲಿ ಶ್ರೀವೆಂಕಟೇಶ್ವರ ದೇವರ ಮೂತರ್ಿ ಹಾಗೂ ಬದರಿನಾರಾಯಣ ದೇವರ ಮೂತರ್ಿ ಪ್ರತಿಷ್ಠಾ


ಬಳ್ಳಾರಿ:  ನಗರದ ಪ್ರಸಿದ್ಧ ದೇವಾಲಯ ಬದರಿನಾರಾಯಣ ದೇವಾಲಯದಲ್ಲಿ ಶ್ರೀವೆಂಕಟೇಶ್ವರ ದೇವರ ಮೂತರ್ಿ ಹಾಗೂ ಬದರಿನಾರಾಯಣ ದೇವರ ಮೂತರ್ಿ ಪ್ರತಿಷ್ಠಾಪನೆ ನಿಮಿತ್ತ ವಿವಿಧ ಧಾಮರ್ಿಕ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಮದುತ್ತರಾಧಿ ಮಠದ ಸ್ವಾಮೀಜಿ ಸತ್ಯಾತ್ಮ ತೀರ್ಥ ಸ್ವಾಮೀಜಿ ಅವರು ವಿವಿಧ ಪೂಜೆಗಳನ್ನು ನೆರವೇರಿಸಿ ಮೂತರ್ಿಗಳನ್ನು ಪುನಃ ಪ್ರತಿಷ್ಠಾಪಿಸಿದರು. ಇದಕ್ಕೂ ಮುನ್ನ ದೇವಾಲಯದಲ್ಲಿ ಶ್ರೀಹರಿವಾಯುಸ್ತುತಿ ಮಂತ್ರ ಪಠಣೆ, ಶ್ರೀವೆಂಕಟೇಶ ಸ್ತೋತ್ರ ಮಂತ್ರ ಪಠಣೆ, ಪಂಚಾಮೃತಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನಡೆದವು. ನಂತರ ಶ್ರೀಮದುತ್ತರಾಧಿ ಮಠದ ಸ್ವಾಮೀಜಿ ಸತ್ಯಾತ್ಮ ತೀರ್ಥ ಸ್ವಾಮೀಜಿ ಅವರು ಭಕ್ತರನ್ನುದ್ದೇಶಿಸಿ ಆಶರ್ಿವಚನ ನೀಡಿದರು. ಶ್ರೀವೆಂಕಟೇಶ್ವರ ದೇವರ ಮೂತರ್ಿ ಹಾಗೂ ಬದರಿನಾರಾಯಣ ದೇವರ ಮೂತರ್ಿಗೆ ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ನೂರಾರು ಭಕ್ತರು ದೇವರ ದರ್ಶನ ಪಡೆದು ಭಕ್ತಿ ಸಮಪರ್ಿಸಿದರು. ನಂತರ ಸತ್ಯಾತ್ಮ ತೀರ್ಥ ಸ್ವಾಮೀಜಿ ಅವರು ಭಕ್ತರಿಗೆ ಮುದ್ರಧಾರಣೆ ನೆರವೇರಿಸಿದರು. ಅನ್ನಸಂತರ್ಪಣೆ ನಡೆಯಿತು. ಇದಕ್ಕೂ ಮುನ್ನ ದೇವಾಲಯದಲ್ಲಿ ಸತ್ಯಾತ್ಮ ತೀರ್ಥ ಸ್ವಾಮೀಜಿ ಅವರು ಸಂಸ್ಥಾನ ಪೂಜೆ ನೆರವೇರಿಸಿದರು.