ಪರಿಸರ ಸಂರಕ್ಷಣೆ: ದುಶ್ಚಟಗಳ ವಿರೋಧಿ ಕಾರ್ಯಕ್ರಮ

ಬಸವನಬಾಗೇವಾಡಿ ತಾಲೂಕಿನ ನಾಗೂರ ಗ್ರಾಮದ ಸಕರ್ಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ


ಬಸವನಬಾಗೇವಾಡಿ 03:  ಪರಿಸರ ಸಂರಕ್ಷಣೆ ಮಾಡಿದಲ್ಲಿ ಮಾತ್ರ ಸುಂದರ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಧಮರ್ಾಸ್ಥಳ ಗ್ರಾಮಾಭಿವೃದ್ಧಿಯ ಜಿಲ್ಲಾ ನಿದರ್ೆಶಕ ಶ್ರೀನಿವಾಸ ಹೇಳಿದರು.

    ತಾಲೂಕಿನ ನಾಗೂರ ಗ್ರಾಮದ ಸಕರ್ಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಅವರ ಸಹಯೋಗದಲ್ಲಿ ಮಂಗಳವಾರ ನಡೆದ ಪರಿಸರ ಸಂರಕ್ಷಣೆ, ದುಶ್ಚಟಗಳ ವಿರೋಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಪರಿಸರ ಬಗ್ಗೆ ಬರೆ ಪ್ರಬಂಧ ಸ್ಪಧರ್ೆ, ಭಾಷಣ ಸ್ಪಧರ್ೆ ಸೇರಿದಂತೆ ಹಲವಾರು ಸ್ಪಧರ್ೆಗಳನ್ನು ಏರ್ಪಡಿಸುವುದರೊಂದಿಗೆ ನೆಟ್ಟ ಸಸಿಗಳನ್ನು ಸಂರಕ್ಷಣೆ ಮಾಡಿ ಅವುಗಳನ್ನು ಬೆಳೆಸಬೇಕೆಂದು ಹೇಳಿದರು.

   ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗಿದ್ದು, ಇದು ಭೂಮಿಯಲ್ಲಿ ಬಿದ್ದರೆ ಕೊಳೆಯಲು ಎರುಡೊವರೆ ವರ್ಷ ಬೇಕಾಗುತ್ತದೆ ಇದನ್ನು ಮನೆಯಲ್ಲಿ ಸುಡುವುದರಿಂದ ಇದರಿಂದ್ದ ಹೊರಬರುವ ರಾಸಾಯನಿಕ ವಸ್ತುವಿನಿಂದ ಶೇ.72ರಷ್ಟು ಕಾಯಿಲೆಗಳು ಉದ್ಭವಗೊಳ್ಳುತ್ತವೆ ಎಂದು ಹೇಳಿದರು.

   ಮಣ್ಣೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ ಮುಳವಾಡ ಮಾತನಾಡಿ ಪರಿಸರ ಹಾಳು ಮಾಡುವುದರಿಂದ ಅನೇಕ ಕಾಯಿಲೆಗಳು ಉದ್ಭವಿಸುತ್ತವೆ, ನಾವೆಲ್ಲರು ಶಾಲೆ, ಮನೆ ಸೇರಿದಂತೆ ವಿವಿಧಡೆ ಸಸಿಗಳನ್ನು ನಟ್ಟು ಪರಿಸರ ಸಂರಕ್ಷಣೆ ಮಾಡಬೇಕು, ಶಾಲೆಗಳಲ್ಲಿ ನಟ್ಟ ಸಸಿಗಳನ್ನು ದತ್ತು ಪಡೆದು ಸಂರಕ್ಷಣೆ ಮಾಡಿದಲ್ಲಿ ಪರಿಸರ ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

   ಉದರ್ು ಶಾಲೆಯ ಕನ್ನಡ ಶಿಕ್ಷಕ ವೈ.ಜಿ.ಇಂಗಳೇಶ್ವರ ಮಾತನಾಡಿದರು. ಎಸ್ಡಿಎಂಸಿ ಸದಸ್ಯ ಕರಿಬಸಪ್ಪ ಮಸೂತಿ, ಶಿಕ್ಷಕ ಎ.ಕೆ.ಹುಬ್ಬಳಿಕರ, ದೈಹಿಕ ಶಿಕ್ಷಕ ಎಸ್.ಎನ್.ಮಿಣಜಗಿ, ಸೇವಾ ಪ್ರತಿನಿಧಿ ಅನ್ನಪೂರ್ಣ ಬಂಡಿವಡ್ಡರ, ಅಕ್ಕಮ್ಮ ಮಸೂತಿ, ರಾಜೇಶ್ವರಿ ಬಡಿಗೇರ ಉಪಸ್ಥಿತರಿದ್ದರು.ಅನ್ನಪೂರ್ಣ ಹಾಗೂ ಸಂಗಡಿಗರು ಪ್ರಾಥರ್ಿಸಿದರು, ಶಿಕ್ಷಕ ಎ.ಬಿ.ಬಬಲೇಶ್ವರ ಸ್ವಾಗತಿಸಿ ವಂದಿಸಿದರು, ಕೃಷಿ ಮೇಲ್ವಾಚಾರಕ ರವಿಕುಮಾರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಅವರಣದಲ್ಲಿ ಶೀತಫಲ, ಹುಣಸಿ, ಬೇವಿನ ಸಸಿಗಳನ್ನು ನೇಡುವ ಮುಖಾಂತರ ಪರಿಸರ ಜಾಗೃತಿ ಮೂಡಿಸಿದರು.