ಲೋಕದರ್ಶನ ಸುದ್ದಿ
ಕೊಪ್ಪಳ 02: ವೈದ್ಯರ ವೃತ್ತಿಧರ್ಮ ಸೂಜಿಯ ಮೇಲೆ ನಡೆದಂತೆ, ಉತ್ತಮ ಆರೋಗ್ಯವಂತ ಸಮಾಜ ನಿಮರ್ಾಣವಾಗಬೇಕಾದರೆ ವೈದ್ಯರ ಪಾತ್ರ ಬಹಳ ಮಹತ್ವದಾಗಿದೆ, ಒಬ್ಬ ವೈದ್ಯ ರೋಗಿಗಳಿಗೆ ಉತ್ತಮ ಆರೋಗ್ಯವನ್ನು ಸೂಕ್ತ ಮಾರ್ಗದರ್ಶನವನ್ನು ನೀಡಬೇಕಾದರೆ ವೈದ್ಯನ ಮನಸ್ಥಿತಿ ಮೊದಲು ಸರಿಯಾಗಿರಬೇಕು ಎಂದು ಡಾ. ಕೆ.ಜಿ. ಕುಲಕಣರ್ಿ ಹೇಳಿದರು.
ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನವನ್ನು ಉದ್ಘಾಟಿಸಿ ಮಾತನಾಡಿದರು. ರೋಗಿಗಳನ್ನು ಮನಪೂರ್ವಕವಾಗಿ ಪೂರ್ಣವಾಗಿ, ಪ್ರಾಮಾಣಿಕವಾಗಿ ನೋಡಿ ಸರಿಯಾದ ಚಿಕಿತ್ಸೆ ನೀಡಿದಾಗ ವೈದ್ಯರಿಗೂ ತೃಪ್ತಿ ಹಾಗೂ ರೋಗಿಗಳಿಗೂ ತೃಪ್ತಿಯಾಗುತ್ತದೆ ಎಂದರು.
ಶರೀರದ ರೋಗಗಳಿಗೆ ಚಿಕಿತ್ಸೆಯನ್ನು ವೈದ್ಯರು ನೀಡುತ್ತಾರೆ ಆದರೆ, ದುಃಖ, ಚಿಂತೆ, ಮಾನಸಿಕ ಒತ್ತಡದಂತಹ ಮನಸಿನ ರೋಗಗಳಿಗೆ ಔಷಧಿ ಈಶ್ವರೀಯ ವಿಶ್ವ ವಿದ್ಯಾಲಯ ನೀಡುತ್ತಿದೆ ಎಂದು ಸಿ.ಸಿ.ಐ ಸದಸ್ಯರಾದ ದೆಹಲಿ ಕೆ.ಬಿ ಹಿರೇಮಠ ಅವರು ಕರೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಯೋಗಿನಿ ಅಕ್ಕನವರು ವರ್ತಮಾನ ಸಮಯದಲ್ಲಿ ವೈದ್ಯರು ಶರೀರದ ರೋಗಕ್ಕೆ ಚಿಕಿತ್ಸೆ ನೀಡುವುದರ ಜೊತೆಗೆ ಮನಸ್ಸಿಗೂ ಸಹ ಶಕ್ತಿಯನ್ನು ತುಂಬುವ ಕಾರ್ಯ ಮಾಡುವುದು ಬಹಳ ಅವಶ್ಯವಿದೆ. ಆ ಕಾರ್ಯವನ್ನು ಮಾಡಬೇಕಾದರೆ ವೈದ್ಯರು ಮೊದಲು ಆಂತರಿಕವಾಗಿ, ಮಾನಸಿಕವಾಗಿ ಸಶಕ್ತವಾಗಬೇಕು ಎಂದರು. ಈಶ್ವರೀಯ ವಿಶ್ವವಿದ್ಯಾಲಯವು ಒಂದು ಆಸ್ಪತ್ರೆಯಾಗಿ ಜನರಿಗೆ ಅಧ್ಯಾತ್ಮ ಜ್ಞಾನ ಮತ್ತು ಯೋಗದ ಔಷಧಿಯನ್ನು ಉಚಿತವಾಗಿ ವಿಶ್ವದಾದ್ಯಂತ ನೀಡುತ್ತಿದೆ ಎಂದರು.
ವೇದಿಕೆ ಮೇಲೆ ಡಾ. ಆರ್.ಎಂ ಪಾಟೀಲ್, ಡಾ. ರಾಂಪುರ್, ಡಾ. ಉಮೇಶ ರಾಜೂರ, ಡಾ. ಮಹೇಂದ್ರ ಕಿಂದ್ರೆ, ಡಾ. ಕವಿತಾ ಹ್ಯಾಟಿ, ಡಾ. ಪೂಣರ್ಿಮಾ, ಡಾ. ರಾಧಾ, ಡಾ. ಬಿ.ಎಲ್ ಕಲ್ಮಠ, ಡಾ. ಚಂದ್ರಗಾಂಧಿ ಬಾಯಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸೇವೆಸಲ್ಲಿಸಿದ ಎಲ್ಲಾ ವೈದ್ಯರಿಗೂ ಈಶ್ವರೀಯ ಸನ್ಮಾನ ಕಾರ್ಯಕ್ರಮ ನೆರವೇರಿತು.