ಧಾರವಾಡ 05; ಧಾರವಾಡ ಕೃಷಿ ವಿಶ್ವವಿದ್ಯಾಲಯದ 31ನೇ ಘಟಿಕೋತ್ಸವವು ಜುಲೈ 7 ರಂದು ಶನಿವಾರ, ಬೆಳಿಗ್ಗೆ 11.30 ಘಂಟೆಗೆ ರೈತ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ಜರುಗಲಿದ್ದು, ಸಮುದಾಯ ಆರೋಗ್ಯ ವಿಜ್ಞಾನದ ವಿಜ್ಞಾನಿ, ಕನ್ನಡಿಗ ಡಾ.ಶಿವಲಿಂಗಪ್ಪ ಎಸ್.ಹಳ್ಳಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಹಾಗೂ ಕೃಷಿ, ಅರಣ್ಯ ಸೇರಿದಂತೆ ವಿವಿಧ ವಿಷಯಗಳ 938 ಅಭ್ಯಥರ್ಿಗಳಿಗೆ ಪದವಿ ಪ್ರಧಾನ ಮಾಡಲಾಗುವುದೆಂದು ಕೃಷಿ ವಿಶ್ವವಿದ್ಯಾಲದ ಕುಲಪತಿ ಡಾ.ವಿ.ಆಯ್.ಬೆಣಗಿ ಹೇಳಿದರು.
ಅವರು ಇಂದು ವಿಶ್ವ ವಿದ್ಯಾಲಯದ ಕುಲಪತಿಗಳ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಘಟಿಕೊತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲರು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಾಧಿಪತಿ ವಾಜುಭಾಯಿ ವಾಲಾ ಇವರು ವಹಿಸಬೇಕಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಅನುಪಸ್ಥಿತರಿರಲಿದ್ದು, ಆದ್ದರಿಂದ ಕನರ್ಾಟಕ ರಾಜ್ಯದ ಕೃಷಿ ಸಚಿವರು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಎನ್. ಎಚ್ ಶಿವಶಂಕರ ರೆಡ್ಡಿ, ಇವರು ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಪದವಿ ಪ್ರಧಾನ ಮಾಡಲಿದ್ದಾರೆ. ಭಾರತ ಸಕರ್ಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದಶರ್ಿಗಳಾದ ಎಸ್.ಕೆ.ಪಟ್ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡುವರು.
ಘಟಿಕೋತ್ಸವದಲ್ಲಿ ಕೆನಡಾ ದೇಶದ ಮ್ಯಾನಿಟೋಬಾ ವಿಶ್ವವಿದ್ಯಾಲಯದ ಸಮುದಾಯ ಆರೋಗ್ಯ ವಿಜ್ಞಾನ ಇಲಾಖೆಯ ಪ್ರಾಧ್ಯಾಪಕ ಡಾ. ಶಿವಲಿಂಗಪ್ಪ.ಎಸ್.ಹಳ್ಳಿ ಅವರು ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಕೃಷಿ ವಿಶ್ವವಿದ್ಯಾಲಯದಿಂದ ಗೌರವಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು.
ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿ.ಆಯ್.ಬೆಣಗಿ ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳ ಕುರಿತು ವರದಿಯನ್ನು ಮಂಡಿಸುವರು. ವಿಶ್ವವಿದ್ಯಾಲಯದ ಗೌರವಾನ್ವಿತ ವ್ಯವಸ್ಥಾಪನಾ ಮಂಡಳಿ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು ಉಪಸ್ಥಿತರಿರುವರು ಎಂದು ತಿಳಿಸಿದರು.
ಈ ಘಟಿಕೋತ್ಸವದಲ್ಲಿ ಒಟ್ಟು 938 ಅಭ್ಯಥರ್ಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡುತ್ತಿದ್ದು, ಇದರಲ್ಲಿ 726 ಅಭ್ಯಥರ್ಿಗಳು ಹಾಜರಾತಿಯಲ್ಲಿ ಹಾಗೂ 212 ಅಭ್ಯಥರ್ಿಗಳು ಗೈರು ಹಾಜರಾತಿಯಲ್ಲಿ ಪದವಿಗಳನ್ನು ಸ್ವೀಕರಿಸುವರು. ಸ್ನಾತಕ ಪದವಿಗಳನ್ನು ವಿವಿಧ ವಿಷಯಗಳಲ್ಲಿ ಒಟ್ಟು 607 ಅಭ್ಯಥರ್ಿಗಳಿಗೆ ಪ್ರದಾನ ಮಾಡಲಾಗುವುದು. ಮಾಸ್ಟರ್ ಆಫ್ ಸಾಯಿನ್ಸ್ಗೆ ಮಾರ್ಗದರ್ಶಕವಾಗುವ ಸ್ನಾತಕೋತ್ತರ ಪದವಿಗಳನ್ನು: ಕೃಷಿಯಲ್ಲಿ-211, ಕೃಷಿ ವ್ಯವಹಾರ ನಿರ್ವಹಣೆ -09, ಅರಣ್ಯ-11 ಮತ್ತು ಗ್ರಾಮೀಣ ಗೃಹ ವಿಜ್ಞಾನ - 42 ಹೀಗೆ ಒಟ್ಟು 273 ಅಭ್ಯಥರ್ಿಗಳಿಗೆ ಪದವಿ ಪ್ರದಾನ ಮಾಡುತ್ತಿದ್ದು, ಇದರಲ್ಲಿ 209 ಅಭ್ಯಥರ್ಿಗಳು ಹಾಜರಾತಿಯಲ್ಲಿ ಪದವಿಗಳನ್ನು ಸ್ವೀಕರಿಸುವರು.
ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ವಿವಿಧ ವಿಷಯಗಳಲ್ಲಿ 58 ಅಭ್ಯಥರ್ಿಗಳಿಗೆ ಪ್ರಧಾನ ಮಾಡುತ್ತಿದ್ದು, ಇದರಲ್ಲಿ 46 ಅಭ್ಯಥರ್ಿಗಳು ಹಾಜರಾತಿಯಲ್ಲಿ ಪದವಿಯನ್ನು ಸ್ವೀಕರಿಸುವರು. ಈ ಘಟಿಕೋತ್ಸವದಲ್ಲಿ 43 ಬಂಗಾರದ ಪದಕ ಹಾಗೂ 05 ನಗದು ಬಹುಮಾನಗಳನ್ನು ಅರ್ಹ ಅಭ್ಯಥರ್ಿಗಳಿಗೆ ನೀಡಲಾಗುವುದು.
ಕೃವಿವಿ ಚಿನ್ನದ ಹುಡುಗಿ ಕುಮಾರಿ ವೈದೇಹಿ ಪೈ:
ಧಾರವಾಡ ಕೃಷಿ ಮಹಾವಿದ್ಯಾಲಯ ವೈದೇಹಿ ವಿಧಾನಚಂದ್ರ ಪೈ, ಇವರು 02 ಬಂಗಾರದ ಪದಕಗಳನ್ನು ಪಡೆದು 'ಚಿನ್ನದ ಹುಡುಗಿ' ಆಗಲಿರುವರು. 4 ವರ್ಷದ ಸ್ನಾತಕ ಪದವಿಯಲ್ಲಿ ಇವರು 9.18 ಸಿಜಿಪಿಎ ಗಳಿಸಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಚಿನ್ನದ ಪದಕ ವಿಜೇತರು:
ಕುಮಾರ ರಾಘವೇಂದ್ರ ಉಮೇಶ ನಾಯಕ, ಬಿ.ಎಸ್ಸಿ. (ಕೃಷಿ ಮಾರುಕಟ್ಟೆ ಹಾಗೂ ಸಹಕಾರ), ಕೃಷಿ ಮಹಾವಿದ್ಯಾಲಯ, ಧಾರವಾಡ, ಕುಮಾರ ನಿತಿನ್ ಹೂಗಾರ ಬಿ.ಎಸ್ಸಿ (ಕೃಷಿ), ಕೃಷಿ ಮಹಾವಿದ್ಯಾಲಯ, ವಿಜಯಪುರ, ಕುಮಾರಿ ವನಿತಾ, ಬಿ.ಎಸ್ಸಿ, (ಕೃಷಿ), ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿ, ಕುಮಾರ ಶಶಿಕುಮಾರ ಎಮ್.ಸಿ, ಬಿ.ಎಸ್ಸಿ, (ಅರಣ್ಯ), ಅರಣ್ಯ ಮಹಾವಿದ್ಯಾಲಯ, ಕುಮಾರಿ ವೇದಾ ಮಹಾಬಲೇಶ್ವರ ಹೆಗಡೆ, ಸಮುದಾಯ ವಿಜ್ಞಾನ ಮಹಾವಿದ್ಯಾಲಯ, ಧಾರವಾಡ ಹಾಗೂ ಕುಮಾರ ಶರತ್ಚಂದ್ರ ಕೆ.ಸಿ, ಬಿ.ಟೆಕ್ (ಆಹಾರ ತಾಂತ್ರಿಕತೆ) ವಿಭಾಗ, ಇವರು ಸ್ನಾತಕ ಪದವಿಯಲ್ಲಿ ತಲಾ ಒಂದೊಂದು ಬಂಗಾರದ ಪದಕವನ್ನು ಪಡೆಯಲಿದ್ದಾರೆ.
ನಗದು ಪುರಸ್ಕಾರ:
ಕೃಷಿ ಮಹಾವಿದ್ಯಾಲಯ, ಧಾರವಾಡದ ಕುಮಾರ ಪ್ರಶಾಂತ ಭೀಮಪ್ಪ ಡೋನಿ ಇವರು 1980-84 ರ ಬಿ.ಎಸ್.ಸಿ. ಕೃಷಿ/ಕೃಷಿ ಮಾರುಕಟ್ಟೆ ಪದವೀಧರರು ನೀಡಿರುವ ನಗದು ಬಹುಮಾನವನ್ನು ಪಡೆಯುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಡಾ. ಎಚ್.ಬಸವರಾಜ, ಧಾರವಾಡ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಆರ್.ಎಸ್.ಗಿರಡ್ಡಿ, ಹಣಕಾಸು ನಿಯಂತ್ರಣಾಧಿಕಾರಿ ಹೊನ್ನಾಳಿ, ವಿವಿಧ ಮಹಾವಿದ್ಯಾಲಯಗಳ ಡೀನ್ರುಗಳಾದ ಡಾ. ಕೆ.ಎಸ್.ಜಗದೀಶ, ಡಾ.ವಿ.ಎಸ್.ಕುಲಕಣರ್ಿ, ಡಾ.ಪುಷ್ಪಾ ಖಾದಿ, ವಿಸ್ತಣರ್ಾಧಿಕಾರಿ ಡಾ. ಆರ್.ಆರ್.ಪಾಟೀಲ, ವಿದ್ಯಾಥರ್ಿ ಕಲ್ಯಾಣ ನಿದರ್ೇಶಕ ಡಾ.ಎನ್.ಕೆ.ಬಿರಾದಾರ ಪಾಟೀಲ, ವಿಶೇಷ ಬೀಜ ಅಧಿಕಾರಿ ಡಾ.ಎಸ್.ಎಂ.ಮಂಟೂರ ಸೇರಿದಂತೆ ವಿವಿಧ ಅಧಿಕಾರಿಗಳು, ಪ್ರಾಧ್ಯಾಪಕರು ಉಪ ಸ್ಥಿತರಿದ್ದರು.