ಕೊಮೊ ದ್ವೀಪ, ಉತ್ತರ ಇಟಲಿ, 16, ಉತ್ತರ ಇಟಲಿಯಲ್ಲಿರುವ ನಯನ ಮನೋಹರ ಕೊಮೊ ದ್ವೀಪದಲ್ಲಿ ಬಾಲಿವುಡ್ ಸೂಪರ್ಸ್ಟಾರ್ಗಳಾದ ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ಸಿಂಧಿ ರಣವೀರ್ ಸಿಂಗ್ ವಿವಾಹ ಹಲವಾರು ವಿಶೇಷತೆಗಳಿಂದ ನೆರವೇರಿದೆ.
ಒಂದೇ ವಿವಾಹ ವೇದಿಕೆಯಲ್ಲಿ ಕನರ್ಾಟಕ ಮತ್ತು ಸಿಂಧಿ ಶೈಲಿಯ ಶಾಸ್ತ್ರಕ್ಕೆ ದೀಪ್ವೀರ್ ಸ್ವಯಂವರ ಸಾಕ್ಷಿಯಾಯಿತು.
ಕನರ್ಾಟಕ ಮತ್ತು ಸಿಂಧಿ ಸಂಪ್ರದಾಯಿಕ ರುಚಿಕರ ಅಡುಗೆಗಳು ಗಣ್ಯಾತಿಗಣ್ಯ ಅತಿಥಿಗಳ ಜಿಹ್ವಾ ಚಾಪಲ್ಯ ತಣಿಸಿತು.
ಮದುವೆಗೆ ಆಗಮಿಸಿದ ವಿವಿಐಪಿಗಳಿಗೆ ಈ ದಂಪತಿ ಸ್ಪೆಷಲ್ ಮೈಸೂರ್ ಪಾಕ್ ಪ್ಯಾಕ್ಗಳನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷ.
ಗಣ್ಯರು ಇಟಲಿ ಯಲ್ಲಿದ್ದರೂ ಅಲ್ಲಿನ ಜನಪ್ರಿಯ ಪಸ್ಕುಚಿ ಕಾಪಿ ಸ್ವಾದದ ಬದಲಿಗೆ ಕೊಡಗಿನ ಫಿಲ್ಟರ್ ಕಾಫಿ ರುಚಿಗೆ ಮರುಳಾದರು.
ಮುಗಿಲಚುಂಬಿ ಗಿರಿ ಶಿಖರಗಳ ತಪ್ಪಲಿನಲ್ಲಿ ಪ್ರಶಾಂತ ಸರೋವರದ ಮಧ್ಯೆ ಇರುವ 800 ವರ್ಷಗಳಷ್ಟು ಭವ್ಯ ಬಂಗಲೆಯಲ್ಲಿ ಈ ಜೋಡಿ ಮದುವೆ ನಡೆದಿದ್ದು ವಿಶೇಷ.
ಅದ್ಭುತ ಅನುಭವದ ನೌಕಾಯಾನದ ಮೂಲಕ ಈ ಸ್ಥಳ ತಲುಪಿದ ಗಣ್ಯಾತಿಗಣ್ಯರು ಪುಟ್ಟ ಬೆಟ್ಟವನ್ನು ಪಾಟಿಗೆಗಳ ಮೂಲಕ ಏರಿ ಕಲ್ಯಾಣೋತ್ಸವ ಕಟ್ಟಡ ತಲುಪಿದರು.
ಬಿ-ಟೌನ್ನ ರಾಮ್ಲೀಲಾ ಜೋಡಿಯ ಮದುವೆಗಾಗಿ ಮೂರು ಹಂತಗಳ ಬಿಗಿ ಪಹರೆ ಹಾಕಲಾಗಿತ್ತು.
ನವೆಂಬರ್ 21 ಮತ್ತು 22ರಂದು ಬೆಂಗಳೂರು ಮತ್ತು ಮುಂಬೈನಲ್ಲಿ ನವದಂಪತಿಯ ಅದ್ಧೂರಿ ಆರತಕ್ಷತೆ ನಡೆಯಲಿದೆ.
ಬೆಂಗಳೂರಿನ ದಿ ಲೀಲಾ ಪ್ಯಾಲೇಸ್ನಲ್ಲಿ ನಡೆಯುವ ಆರತಕ್ಷತೆಯಲ್ಲಿ ಸ್ಯಾಂಡಲ್ವುಡ್ ಖ್ಯಾತನಾಮರೂ ಭಾಗವಹಿಸಲಿದ್ದಾರೆ.