ಲೋಕದರ್ಶನ ವರದಿ
ವಿಜಯಪುರ 04: ಸೈನ್ಯ ಸೇರ್ಪಡೆಯಾಗುವ ನಿಟ್ಟಿನಲ್ಲಿ ಯುವಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಯಾತ್ರೆ ಕೈಗೊಂಡಿರುವ ಭಾರತೀಯ ನೌಕಾದಳದ ಲೆಪ್ಟೆನೆಂಟ್ ಕಮಾಂಡರ್ ವಿಜಯಪುರ ನಗರ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಸೈನಿಕ ಶಾಲೆಯ ಕೆಡೆಟ್ಗಳು ಅವರನ್ನು ಹೃದಯಸ್ಪಶರ್ಿಯಾಗಿ ಸ್ವಾಗತಿಸಿದರು.
ಎಝಿಮಲಾದಲ್ಲಿ ಭಾರತೀಯ ನೌಕಾದಳದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮನೋಜ್ ಗುಪ್ತಾ ಕಳೆದ ಜೂನ್ 2 ರಿಂದ ಸೈಕಲ್ ಯಾತ್ರೆ ಆರಂಭಿಸಿದ್ದಾರೆ.
ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ದೆಹಲಿ, ಹರಿಯಾಣಾ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಸುತ್ತಿ ಕನರ್ಾಟಕ ಪ್ರವೇಶಿಸಿದ್ದಾರೆ. ಇದುವರಿಗೆ ಅವರು ಒಟು 2729 ಕಿ.ಮೀ. ಶ್ರಮಿಸಿ ವಿಜಯಪುರಕ್ಕೆ ತಲುಪಿದರು.
ನಂತರ ಸೈನಿಕ ಶಾಲೆಯ ವಿದ್ಯಾಥರ್ಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಉದ್ದೇಶವನ್ನು ವಿವರಿಸಿದ ಮನೋಜ್ ಗುಪ್ತಾ, ಸೇನಾಧ್ವಜ ದಿನಾಚರಣೆಯ ಅಂಗವಾಗಿ ತಾವು ಸೈಕಲ್ ಪರ್ಯಟನೆ ಕೈಗೊಂಡಿರುವದಾಗಿ ತಿಳಿಸಿದರು. ಅದರೊಂದಿಗೆ ಹೆಚ್ಚು ಹೆಚ್ಚು ಯುವಕರು ನೌಕಾದಳ ಆಯ್ಕ ಮಾಡಿಕೊಂಡು ಭಾರತೀಯ ಸೈನ್ಯಬಲ ಇನ್ನಷ್ಟು ಪ್ರಭಾವಶಾಲಿಯಾಗಲಿ ಎಂಬ ಸಂದೇಶದೊಂದಿಗೆ ಉತ್ತರದಿಂದ ದಕ್ಷಿಣ ತುದಿಯವರೆಗೆ ಈ ಯಾತ್ರೆ ಕೈಗೊಂಡಿದ್ದೇನೆ ಜಮ್ಮು ಕಾಶ್ಮೀರದ ಲಢಾಕನ ಅತ್ಯಂತ ತಂಪು ಹವಾಮಾನ ಹಾಗೂ ರಾಜಸ್ಥಾನದ ಅತ್ಯಂತ ಉಷ್ಣ ಹವಾಮಾನಗಳನ್ನು ಎದುರಿಸಿದ್ದೇನೆ, ಇನ್ನೇನು ಕೆಲವೇ ದಿನಗಳಲ್ಲಿ ಗುರಿ ತಲುಪಲಿದ್ದೇನೆ ಎಂದು ಸಂತಸವನ್ನು ವಿದ್ಯಾಥರ್ಿಗಳೊಂದಿಗೆ ಹಂಚಿಕೊಂಡರು.
ವಿವಿಧ ಪ್ರಗತಿರಪ ಸಂಘಟನೆಗಳಿಂದ ಅದ್ದೂರಿ ಸ್ವಾಗತ
ಸೈಕಲ್ ಯಾತ್ರೆ ಕೈಗೊಂಡಿರುವ ನೇವಲ್ ಲೆಪ್ಟಿನಂಟ್ ಕಮಾಡೆಂಟ್ ಮನೋಜ್ ಗುಪ್ತಾ ಅವರಿಗೆ ವಿವಿಧ ಪ್ರಗತಿ ಪರ ಸಂಘಟನೆಗಳ ಪದಾಧಿಕಾರಿಗಳು ಸಹ ಅದ್ದೂರಿಯಾಗಿ ಸ್ವಾಗತ ಕೋರಿದರು. ಸೈನ್ಯ ಸೇರ್ಪಡೆಯ ಸಂದೇಶ ಹೊತ್ತು ಏಕವ್ಯಕ್ತಿ ಸೈಕಲ್ ಯಾತ್ರೆ ಕೈಗೊಂಡಿರುವ ಅವರ ಉದ್ದೇಶದ ಬಗ್ಗೆ ಸಂತಸ ವ್ಯಕ್ತಪಡಿಸಿ ಆತ್ಮೀಯವಾಗಿ ಅಭಿನಂದಿಸಿದರು.
ಡಾ.ಅಶೋಕ ಜಾಧವ, ಫಯಾಜ್ ಕಲಾದಗಿ, ಎನ್.ಕೆ. ಮನಗೊಂಡ, ಇಫರ್ಾನ್ ಜಹಾಗೀರದಾರ, ಸೋಮಶೇಖರ ರಾಠೋಡ, ಸಚೀನ ಮಹೇಂದ್ರಕರ, ಗಣೇಶ ಕಬಾಡೆ, ಮೈನುದ್ದೀನ ಮಕಾನದಾರ, ಪಂಕಜ ಗಾಯಕವಾಡ, ಶಹಾಜಾನ ಖಾದ್ರಿ ಉಪಸ್ಥಿತರಿದ್ದರು.