ಲೋಕದರ್ಶನ ವರದಿ
ಅಥಣಿ 09: ಆಥರ್ಿಕ ವಹಿವಾಟದಲ್ಲಿ ದೊಡ್ಡ ಸಂಸ್ಥೆ, ಸಣ್ಣ ಸಂಸ್ಥೆ ಎಂಬುವುದು ಭೇದವಿಲ್ಲ. ಅಲ್ಲಿಯ ಆಡಳಿತ ಮಂಡಳಿಯ ಮೇಲೆ ಹೋಣೆೆಗಾರಿಕೆ ಇರುತ್ತದೆ. ಮತ್ತು ಸಂರ್ಪಕವು ಬಲವಾಗಿರುತ್ತದೆ. ಇದಕ್ಕೆಲ್ಲ ಗ್ರಾಹಕರೇ ಸಂಸ್ಥೆ ಬೆನ್ನೆಲುಬುಯಾಗಿರುತ್ತಾರೆ. ಎಂದು ಕಾಮದೇನು ವಿವಿಧ ಉದ್ದೇಶಗಳ ಸೌಹರ್ಾದ ಸಹಕಾರಿ ಸಂಘದ ಅಧ್ಯಕ್ಷರಾದ ಮಾರುತಿ ಸತ್ತಿಗೌಡ ಹೇಳಿದರು.
ಇಂದು ಸೋಮವಾರ ಸಂಸ್ಥೆಯು ತನ್ನ ಒಂದು ದಶಕದ ಅವಧಿಯನ್ನು ಪೂತರ್ಿಗೊಳಿಸಿದ ನಿಮಿತ್ತ ಏರ್ಪಡಿಸಿದ ಪೂಜಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಪ್ರಾರಂಭದಲ್ಲಿ ವ್ಯವಸ್ಥಾಪಕರಾದ ಬಸವರಾಜ ಕೋಹಳ್ಳಿ ಸ್ವಾಗತಿಸಿದರು. ಉಪಾಧ್ಯಕ್ಷ ಈಶ್ವರ ಮುಜಗುಣಿ ಪ್ರಾಸ್ತಾವಿಕ ಮಾತನಾಡಿದರು. ಸದಸ್ಯರಾದ ಪ್ರಶಾಂತ ಶೆಟ್ಟಿ ಸಂಸ್ಥೆಯ ಬೆಳವಣಿಗೆ ಬಗ್ಗೆ ಮಾತನಾಡಿದರು. ಪ್ರಶಾಂತ ಯಾದವಾಡ ವಂದನಾರ್ಪಣೆ ಮಾಡಿದರು.