ಚಡಚಣ: ಧಾರ್ಮಿಕ ಕಾರ್ಯಗಳಿಂದ ಮಾನಸಿಕ ನೆಮ್ಮದಿ: ಉಜೈನಿ ಶ್ರೀ

ಲೋಕದರ್ಶನ ವರದಿ

ಚಡಚಣ 24: ಧಾರ್ಮಿಕ  ಹಾಗೂ ಸಾಮಾಜಿಕ ಕಾರ್ಯಗಳಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಉಜೈನಿ ಪೀಠದ ಜಗದ್ಗುರು ಡಾ.ಸಿದ್ಧಲಿಂಗ ಶಿವಾಚಾರ್ಯ ಹೇಳಿದರು.

ಸಮೀಪದ ಕೆರೂರ ಗ್ರಾಮದಲ್ಲಿ   ಭೈರವನಾಥ ದೇವಾಲಯದ ಶಿಖರ ಕಳಸಾರೋಹಣ,ಭೈರವನಾಥ ಹಾಗೂ ನವಗ್ರಹ ಮೂತರ್ಿಗಳ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಅವರು ಅಶಿರ್ವಚನ ನೀಡಿದರು.

ಮಠ ಮಾನ್ಯಗಳು,ದೇವಲಯಗಳಲ್ಲಿ ನಡೆಯುವ ಆದ್ಯಾತ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಶಾಂತಿ,ಸಮಾನತೆ ಹಾಗೂ ಭಾತೃತ್ವ ಮೂಡಿಸಲು ಸಹಕಾರಿಯಾಗುತ್ತವೆ ಎಂದು ಉಜೈನಿ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತದ್ದೇವಾಡಿಯ ಮಹಾಂತೇಶ ಸ್ವಾಮೀಜಿ ಮಾತನಾಡಿ,ಗಡಿನಾಡು ಭೀಮಾ ನದಿ ತೀರದ ಕೆರೂರ ಗ್ರಾಮದಲ್ಲಿ ಭವ್ಯವಾದ ಭೈರವನಾಥ ದೇವಾಲಯ ನಿರ್ಮಿಸಿ, ಶಿಕ್ಷಣ ಸಂಸ್ಥೆ ಆರಂಭಿಸಿದ ಬಡಮಕ್ಕಳ,ದೀನ ದಲಿತರ ಎಳಿಗೆಗೆ ಶ್ರಮಿಸುತ್ತಿರುವ ಮಹಾದೇವ ಸಾಹುಕಾರ ಭೈರಗೊಂಡ ಅವರ ಕಾರ್ಯ ಶ್ಲಾಘನೀಯವಾದುದು ಎಂದರು.

ಮಂದ್ರೂಪದ ರೇಣುಕ ಶಿವಾಚಾರ್ಯ,ಹತ್ತಳ್ಳಿ ಹಿರೇಮಠದ ಗುರುಪಾದೇಶ್ವರ ಶಿವಾಚಾರ್ಯ, ತದ್ದೇವಾಡಿಯ ಚಂದ್ರಶೇಖರ ದೇವರು, ಘನಲಿಂಗ ರುದ್ರಮುನಿ ಶಿವಚಾರ್ಯ, ಮಾಳಕೋಟಗಿಯ ಪಂಚಾಕ್ಷರಿ ಶಿವಾಚಾರ್ಯ ಆಶಿರ್ವಚನ ನೀಡಿದರು.

ಮುರಗೇಂದ್ರ ಶಾಸ್ತ್ರಿ ಸ್ವಾಗತಿಸಿದರು.

ಕಾರ್ಯಕ್ರಮದ ನಂತರ ದೇವಾಲಯದ ಆವರಣದಲ್ಲಿ 250 ಜಂಗಮ ಆರಾಧನೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಎಲ್ಲ ಜಂಗಮ ಬಂಧುಗಳ ಪಾದ ಪೂಜೆ ಸೇವೆಯೊಂದಿಗೆ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಯಿತು.

ಈ ಸಂದರ್ಭದ ಭೈರವನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾದೇವಸಾಹುಕಾರ ಭೈರಗೊಂಡ, ಗ್ರಾ.ಪಂ. ಅಧ್ಯಕ್ಷೆ ಬಂಗಾರೆವ್ವ ಜೇವೂರ,ಉಪಾಧ್ಯಕ್ಷ ಬಾಬು ಕಂಚನಾಳಕರ, ತಾ.ಪಂ. ಸದಸ್ಯ ಸಾಹೇಬಗೌಡ ಬಿರಾದಾರ, ಮುಖಂಡರಾದ ಶಿವಾನಂದಸಾಹುಕಾರ ಭೈರಗೊಂಡ, ಮಹಾಂತೇಶ ಹಿರೇಮಠ, ದೊರಯ್ಯ ಮಠ, ಭೀಮಾಶಂಕರ ಭೈರಗೊಂಡ, ಜಗದೇವಸಾಹುಕಾರ ಭೈರಗೊಂಡ, ಶ್ರೀಶೈಲಗೌಡ ಬಿರಾದಾರ, ಕುತುಬಗೌಡ ಪಾಟೀಲ, ಲಾಯಣ್ಣ ಲವಟೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.