ಲೋಕದರ್ಶನ ವರದಿ
ಬಳ್ಳಾರಿ 11: ನೂರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಸೇರಿದ್ದು ಇವರನ್ನುದ್ದೇಶಿಸಿ ಮಾತನಾಡಿದ ಅಂಗವಾಡಿ ಫೆಡರೇಷನ್ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ ಸಿಡಿಪಿಓ ಜಲಾಲಪ್ಪನವರ ಮೇಲೆ ಕ್ರಮ ತೆಗೆದುಕೊಳ್ಳಲು ಮತ್ತು ವಿಚಾರಣೆಗೆ ಆದೇಶಿಸುವ ಕುರಿತು ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಚಚರ್ೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳವುದಾಗಿ ಭರವಸೆ ನೀಡಿದರು. ತಿಂಗಳಿಗೊಮ್ಮೆ ಜಿಲ್ಲಾ ಪಂಚಾಯತ್ ಡಿ.ಎಸ್.-2 ಇವರ ಮುಂದಾಳತ್ವದಲ್ಲಿ ಶಿಶು ಅಭಿವೃದ್ಧಿ ಯೋಜನೆಯ ಸಮಗ್ರ ಜಾರಿ ಕುರಿತಾದ ಕುಂದುಕೊರತೆಗಳ ಸಭೆ ನಡೆಸಬೇಕೆಂದು ನಿದರ್ೆಶನ ಇದ್ದಾಗಲೂ ಈ ಕುರಿತು ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಅಂಗನವಾಡಿ ಫೆಡರೇಷನ್ ಜಿಲ್ಲಾಧ್ಯಕ್ಷರಾದ ಇಸ್ಮಾಯಿಲ್ ಮಾತನಾಡಿ ವಿಕೃತ ಮನಸ್ಸಿನ ವ್ಯಕ್ತಿಯಾದ ಜಲಾಲಪ್ಪನವರು ಮಹಿಳೆಯರೇ ತುಂಬಿರುವ ಇಲಾಖೆಯಲ್ಲಿ ಉದ್ಯೋಗ ಮಾಡಲು ಅರ್ಹರಲ್ಲ. ಇಂತಹ ಅಧಿಕಾರಿಯನ್ನು ತೆಗೆದು ಹಾಕುವ ತನಕ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.
ಸಿ.ಇ.ಓ ರಜೆ ಇರುವ ಕಾರಣ ಡಿ.ಎಸ್-2 ಉಮೇಶನಾಯ್ಕ ಇವರು ಮನವಿ ಸ್ವೀಕರಿಸುತ್ತಾ ನಿಮ್ಮ ದೂರಿನ ಕುರಿತು ಸಿ.ಇ.ಓ.ರವರು ಬಂದ ನಂತರ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದೇರೀತಿ ಕುಂದುಕೊರತೆಗಳ ಸಭೆ ನಡೆಸುವ ಜವಾಬ್ದಾರಿ ನನ್ನದೇ ಇರುವ ಕಾರಣ ಈ ಕುರಿತು ಕೂಡಲೇ ದಿನಾಂಕ ನಿಗದಿಪಡಿಸಿ ಮಾಹಿತಿ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.